ಸುದ್ದಿಮೂಲ ವಾರ್ತೆ ಯಾದಗಿರಿ, ಜ.01:
ಡಾನ್ ಬಾಸ್ಕೋೋ ಸಮಾಜ ಸೇವಾ ಕೇಂದ್ರ, ಯಾದಗಿರಿ ವತಿಯಿಂದ ಗಿರಿನಾಡು ಕಾಲೋನಿ ಗ್ರಾಾಮದಲ್ಲಿ ದಿನಾಂಕ 01 ಜನವರಿ 2026 ರಂದು ಮೊಬೈಲ್ ಕ್ಲಿಿನಿಕ್ ತಂಡವು ಬುಡಕಟ್ಟು ಜನಾಂಗದವರಿಗಾಗಿ ಪ್ರಾಾಥಮಿಕ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ನಡೆಸಿತು. ಈ ಸಂದರ್ಭದಲ್ಲಿ ಗ್ರಾಾಮದಲ್ಲಿರುವ ಗರ್ಭಿಣಿ ಮಹಿಳೆಯರು ಮತ್ತು ವೃದ್ಧರಿಗೆ ವಿಶೇಷ ಆದ್ಯತೆ ನೀಡಿ, ಅವರ ಮನೆಗಳಿಗೆ ನೇರವಾಗಿ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಲಾಯಿತು.
ಮೊಬೈಲ್ ಕ್ಲಿಿನಿಕ್ ತಂಡವು ಮೊದಲಿಗೆ ಗರ್ಭಿಣಿ ಮಹಿಳೆ ಚಂದಮ್ಮ (ಗಂಡ: ಧರ್ಮ) ಅವರ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿತು. ಅವರ ರಕ್ತದೊತ್ತಡ ಮತ್ತು ಸಾಮಾನ್ಯ ಆರೋಗ್ಯ ಲಕ್ಷಣಗಳನ್ನು ಪರಿಶೀಲಿಸಿ, ಗರ್ಭಾವಸ್ಥೆೆಯಲ್ಲಿ ಪಾಲಿಸಬೇಕಾದ ಮುನ್ನೆೆಚ್ಚರಿಕೆ ಕ್ರಮಗಳ ಕುರಿತು ಸಮಗ್ರ ಆರೋಗ್ಯ ಸಲಹೆಗಳನ್ನು ನೀಡಲಾಯಿತು. ತಾಯಿ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕಾಾಗಿ ನಿಯಮಿತ ವೈದ್ಯಕೀಯ ತಪಾಸಣೆಗಳ ಅಗತ್ಯವಿದೆ ಎಂದು ತಂಡವು ವಿವರಿಸಿತು.
ಇದೇ ಗ್ರಾಾಮದ ಮತ್ತೊೊಬ್ಬ ಗರ್ಭಿಣಿ ಮಹಿಳೆ ದೇವಮ್ಮ (ಗಂಡ: ವೆಂಕಟೇಶ್) ಅವರಿಗೂ ಪ್ರಾಾಥಮಿಕ ಆರೋಗ್ಯ ತಪಾಸಣೆ ಮಾಡಲಾಯಿತು. ಅವರಿಗೆ ಅಗತ್ಯವಿರುವ ಕ್ಯಾಾಲ್ಸಿಿಯಂ ಟ್ಯಾಾಬ್ಲೆೆಟ್ಗಳನ್ನು ವಿತರಿಸಿ, ಗರ್ಭಾವಸ್ಥೆೆಯಲ್ಲಿ ಪೌಷ್ಟಿಿಕ ಆಹಾರ ಸೇವನೆ, ನಿಯಮಿತ ಊಟ, ಸ್ವಚ್ಛತೆ, ಸಮರ್ಪಕ ವಿಶ್ರಾಾಂತಿ ಮತ್ತು ಸರಳ ವ್ಯಾಾಯಾಮಗಳ ಮಹತ್ವದ ಕುರಿತು ಮಾಹಿತಿ ನೀಡಲಾಯಿತು. ಆರೋಗ್ಯಕರ ಜೀವನಶೈಲಿ ತಾಯಿ ಮತ್ತು ಶಿಶುವಿನ ಉತ್ತಮ ಬೆಳವಣಿಗೆಗೆ ಸಹಕಾರಿ ಎಂದು ತಂಡವು ತಿಳಿಸಿತು.
ಈ ವೇಳೆ ಗ್ರಾಾಮದ 65 ವರ್ಷದ ವೃದ್ಧ ಮಹಿಳೆ ಗಾಳಮ್ಮ ಅವರ ಮನೆಗೂ ಮೊಬೈಲ್ ಕ್ಲಿಿನಿಕ್ ತಂಡ ಭೇಟಿ ನೀಡಿತು. ಅವರು ಒಬ್ಬರೇ ವಾಸಿಸುತ್ತಿಿದ್ದು, ಆರೈಕೆ ಮಾಡಲು ಯಾರೂ ಇಲ್ಲ ಎಂಬುದು ಗಮನಕ್ಕೆೆ ಬಂದಿತು. ಅವರಿಗೆ ಪ್ರಾಾಥಮಿಕ ಆರೋಗ್ಯ ತಪಾಸಣೆ ನಡೆಸಿ, ಶಕ್ತಿಿ ವೃದ್ಧಿಿಗಾಗಿ ಅಗತ್ಯ ಟ್ಯಾಾಬ್ಲೆೆಟ್ಗಳನ್ನು ನೀಡಲಾಯಿತು. ವೃದ್ಧಾಾಪ್ಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆೆ ಸಲಹೆ ನೀಡಿ, ಯಾವುದೇ ಆರೋಗ್ಯ ಸಮಸ್ಯೆೆ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸಲಾಯಿತು.
ಈ ಮೊಬೈಲ್ ಕ್ಲಿಿನಿಕ್ ಸೇವೆಯಿಂದ ಒಟ್ಟು 36 ಲಾನುಭವಿಗಳು ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಂಡರು. ಈ ಕಾರ್ಯದಲ್ಲಿ ಹಾಗೂ ಸಹಾಯಕರಾದ ಮರಿಯಮ್ಮ ಮತ್ತು ಬಸವರಾಜ್ ಸೇವೆ ಸಲ್ಲಿಸಿದರು.
ಮೊಬೈಲ್ ಕ್ಲಿಿನಿಕ್ ತಂಡದ ಈ ಕಾರ್ಯದಿಂದ ಗಿರಿನಾಡು ಕಾಲೋನಿ ಗ್ರಾಾಮದ ಬುಡಕಟ್ಟು ಜನಾಂಗದವರು ಸಂತಸ ವ್ಯಕ್ತಪಡಿಸಿದರು. ಗ್ರಾಾಮೀಣ ಮತ್ತು ಹಿಂದುಳಿದ ಪ್ರದೇಶಗಳಿಗೆ ನೇರವಾಗಿ ಆರೋಗ್ಯ ಸೇವೆ ತಲುಪಿಸುತ್ತಿಿರುವ ಮೊಬೈಲ್ ಕ್ಲಿಿನಿಕ್ ಕಾರ್ಯವು, ಗರ್ಭಿಣಿ ಮಹಿಳೆಯರು ಮತ್ತು ವೃದ್ಧರಿಗೆ ಅತ್ಯಂತ ಉಪಯುಕ್ತವಾಗಿದೆ ಎಂದು ಸ್ಥಳೀಯರು ಅಭಿಪ್ರಾಾಯ ವ್ಯಕ್ತಪಡಿಸಿದರು.
ಡಾನ್ ಬಾಸ್ಕೋ ಸಮಾಜ ಸೇವಾ ಕೇಂದ್ರದಿಂದ, ಯಾದಗಿರಿ – ಗಿರಿನಾಡು ಕಾಲೋನಿಯಲ್ಲಿ ಮೊಬೈಲ್ ಕ್ಲಿನಿಕ್ ಸೇವೆ

