ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 13: ರಾಜ್ಯದಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಆಡಳಿತ ನಡೆಸಿದ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇದ್ದುದು ಚುನಾವಣಾ ಫಲಿತಾಂಶದ ಮೂಲಕ ಸ್ಪಷ್ಟವಾಗಿದೆ. ಜನರ ಅಸಮಾಧಾನದ ಮುಂದೆ ಪ್ರಧಾನಿ ನರೇಂದ್ರ ಮೋದಿ ಎಷ್ಟೇ ಮೋಡಿ ಮಾಡಿದರೂ ಅದು ಮತದಾನರ ಮುಂದೆ ಕಮಾಲ್ ಮಾಡಲು ಸಾಧ್ಯವಾಗಿಲ್ಲ ಎಂಬುದು ನಿಜವಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಬಿಜೆಪಿಗೆ ಅತ್ಯಂತ ದೊಡ್ಡ ಧೈರ್ಯ ಮತ್ತು ಸ್ಥೈರ್ಯ. ಎಂತಹದ್ದೇ ಸಂದರ್ಭ ಇದ್ದರೂ ಅಹ ಕೊನೆಯಲ್ಲಿ ಅವರು ಬಂದು ಎಲ್ಲವನ್ನೂ ಸರಿ ಮಾಡುತ್ತಾರೆ ಎಂದು ಎಲ್ಲರೂ ಬಲವಾಗಿ ನಂಬಿದ್ದಾರೆ. ಅದರಂತೆ ಮೋದಿ ಅವರು ಈ ಬಾರಿ ಹಲವು ಸಮಾವೇಶಗಳು, ರೋಡ್ ಶೋ ಮಾಡಿದರೂ ಸಹ ರಾಜ್ಯದಲ್ಲಿ ಅದು ಪ್ರಭಾವ ಬೀರಿಲ್ಲ.
ಸದ್ಯ 70ರ ಆಸುಪಾಸಿನಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. 10ಕ್ಕೂ ಹೆಚ್ಚು ಹಾಲಿ ಸಚಿವರು ಸೋಲಿನ ಭೀತಿಯಲ್ಲಿದ್ದಾರೆ. ಇದು ಬಿಜೆಪಿ ಬಗ್ಗೆ ಇದ್ದ ಜನರ ಅಸಮಾಧಾನ ಇರುವುದು ಈ ಮೂಲ ಸ್ಪಷ್ಟವಾಗುತ್ತಿದೆ.
ಪ್ರಧಾನಿ ಮೋದಿ ಅವರು ಚುನವಣೆಗೆ ಇನ್ನೂ ಮೂರು ವಾರ ಬಾಕಿ ಇರುವಾಗಲೇ ರಾಜ್ಯ ಪ್ರವಾಸ ಆರಂಭಿಸಿದರು. ಹಿಂದೆಲ್ಲಾ ಪ್ರಧಾನಿಯಾದವರು ಕೇವಲ ಒಂದು ಅಥವಾ ಹೆಚ್ಚೆಂದರೆ ಎರಡು ಬಾರಿ ಬೆಂಗಳೂರಿಗೆ ಬಂದು ಹೋಗುತ್ತಿದ್ದರು.
ಆದರೆ, ಪ್ರಧಾನಿ ನರೇಂದ್ರ ಮೋದಿ ಅದನ್ನು ಸುಳ್ಳು ಮಾಡಿದರು. ಚುನಾವಣೆಗೆ ಇನ್ನೂ ಮೂರು ವಾರ ಬಾಕಿ ಇರುವಾಗಲೇ ರಾಜ್ಯ ಪ್ರವಾಸ ಪ್ರಾರಂಭಿಸಿದರು. ಹಳೆ ಮೈಸೂರು ಭಾಗದಿಂದ ಪ್ರವಾಸ ಆರಂಭಿಸಿದ ಪ್ರಧಾನಿ ಬಳಿಕ ಬೆಂಗಳೂರು, ಕಿತ್ತೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕರಾವಳಿ, ಹೀಗೆ ಎಲ್ಲಾ ಪ್ರದೇಶಗಳು ಮತ್ತು ಬಹುತೇಜ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದರು.
ಪ್ರಧಾನಿ ರೋಡ್ ಶೋ ಮಾಡಿದರೆ ಅದನ್ನು ನೋಡಲು ಲಕ್ಷೋಪಲಕ್ಷ ಜನ ಸೇರುತ್ತಿದ್ದರೂ ಸಹ ಅದು ಮತಗಳಾಗಿ ಪರಿವರ್ತನೆ ಆಗಿಲ್ಲ. ಕೇವಲ ಮೋದಿಯವನರನ್ನು ನೋಡಲು ಮಾತ್ರ ಜನ ಸೇರುತ್ತಿದ್ದರು ಎಂಬುದು ಈ ಮೂಲಕ ಸ್ಪಷ್ಟವಾಗಿದೆ.