ಸುದ್ದಿ ಮೂಲ ವಾರ್ತೆ
ಬೆಂಗಳೂರು,ಮಾ.25: ಕೆ.ಆರ್ ಪುರಂನಿಂದ ವೈಟ್ಫೀಲ್ಡ್ ಮಾರ್ಗವಾಗಿ ಸಂಚಾರಿಸುವ ಮೆಟ್ರೋವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
ಮೋದಿ ಅವರು ಇಂದು ಕೆ.ಆರ್ ಪುರಂ- ವೈಟ್ ಫೀಲ್ಡ್ ಗೆ ಸಂಚಾರಿಸುವ ಮೆಟ್ರೋನಲ್ಲಿ ಮಕ್ಕಳು, ಮೇಟ್ರೊ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳ ಜೊತೆಗೆ 4 ಕಿ.ಮಿ ಸಂಚರಿಸಿದರು. ಈ ಸಂದರ್ಭದಲ್ಲಿ ಮೇಟ್ರೊ ಸಿಬ್ಬಂದಿಯೊಂದಿಗೆ ಮತ್ತು ಮಕ್ಕಳೊಂದಿಗೆ ಚರ್ಚೆ ನಡೆಸಿದರು.
13.71 ಕಿ,ಮೀ ದೂರದ ವರೆಗೂ ಸಂಚರಿಸುವ ಮೆಟ್ರೋ ಇದಾಗಿದೆ ಎಂದ ಅವರು ಸುಮಾರು 4.500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕೆ.ಆರ್ ಪುರಂ ಮೆಟ್ರೋ ದೇಶದ ಎರಡನೇ ಅತಿ ದೂರ ಸಂಚಾರಿಸುವಂತಹ ಮೆಟ್ರೋವಾಗಿದೆ ಎಂದರು.