ಸುದ್ದಿಮೂಲವಾರ್ತೆ
ಕೊಪ್ಪಳ ಅ 30: ಕೊಪ್ಪಳ ಜಿಲ್ಲೆಯಲ್ಲಿ ಕೆಲಸ ಮಾಡುವ ಅತಿಥಿ ಶಿಕ್ಷಕರು ಸರಿಯಾಗಿ ಶಾಲೆಗೆ ಬರುತ್ತಾರಾ? ಅವರ ಪಾಠ ಹೇಗೆ ಮಾಡುತ್ತಾರೆ ಎಂಬ ಬಗ್ಗೆ ನಿಗಾ ವಹಿಸಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ ಪಿ ಮೋಹನರಾಜ್ ಸೂಚನೆ ನೀಡಿದರು.
ಅವರು ಇಂದು ಕೊಪ್ಪಳ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿಪರಿಶೀಲನೆ ಮಾಡಿದರು. ಜಿಲ್ಲೆಯಲ್ಲಿ ಒಟ್ಟು 2300 ಜನ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ. ಕೆಕೆಆರ್ ಡಿಬಿಯಿಂದ ಜಿಲ್ಲೆಯಲ್ಲಿ ಅವಶ್ಯವಿರುವಷ್ಟು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಹೊಸದಾಗಿ ಜಿಲ್ಲೆಗೆ 590 ಜನ ಶಿಕ್ಷಕರು ಬರುತ್ತಿದ್ದಾರೆ. ಜಿಲ್ಲೆಯಲ್ಲಿ 38 ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲ. ಅಂಥ ಕಡೆ ಎರವಲು ಸೇವೆಯನ್ನು ನಿಯೋಜನೆ ಮಾಡಲಾಗಿದೆ ಎಂದು ಡಿಡಿಪಿಐ ತಿಳಿಸಿದರು.
ಜಿಲ್ಲೆಯಲ್ಲಿ ಶಾಲೆಗಳಲ್ಲಿ ಶೌಚಾಲಯಗಳ ಬಳಕೆಗೆ ನೀರು ಸರಬರಾಜು ಮಾಡಬೇಕು. ನೀರು ಸರಬರಾಜು ಮಾಡಿದರೆ ಮಾತ್ರ ನೀರು ಶೌಚಾಲಯಗಳು ಬಳಕೆಯಾಗಬೇಕು ಎಂದು ಮೋಹನರಾಜ್ ತಿಳಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ 1950 ಅಂಗನವಾಡಿಗಳಲ್ಲಿ 382 ನಗರ ಹಾಗು 1572 ಗ್ರಾಮೀಣ ಭಾಗದಲ್ಲಿ 1213 ಸ್ವಂತ ಕಟ್ಟಡಗಳಿವೆ. 20 ಹಾಗು 61 ಕಡೆ ಸರಕಾರಿ ಕಟ್ಟಡಗಳಲ್ಲಿ ಅಂಗನವಾಡಿಗಳಿವೆ. 321 ಖಾಸಗಿ ಕಟ್ಟಡಗಳಲ್ಲಿ ಅಂಗನವಾಡಿಗಳು ನಡೆಯುತ್ತಿವೆ. ಅವಶ್ಯವಿರುವ ಕಡೆ ಅಂಗನವಾಡಿಗಳ ನಿರ್ಮಿಸಬೇಕು ಎಂದು ಸೂಚನೆ ನೀಡಿದರು.
172 ಕಡೆ ಅಂಗನವಾಡಿಗಾಗಿ ಕಟ್ಟಿರುವ ಕಟ್ಟಡಗಳಿಗೆ ಕೆಕೆಆರ್ ಡಿಬಿಯಿಂದ ಕಟ್ಟಡ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಗಂಗಾವತಿ ನಗರದಲ್ಲಿ 35 ವಾರ್ಡಗಳಲ್ಲಿ 116 ಅಂಗನವಾಡಿಗಳಿವೆ. ಇಲ್ಲಿ ಅವಶ್ಯರುವಷ್ಟು ದೊಡ್ಡ ಅಂಗನವಾಡಿಗಳನ್ನು ಮರ್ಜ್ ಮಾಡಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ 23 ರಷ್ಟು ಅಂಗನವಾಡಿ ಕಾರ್ಯಕರ್ತೆಯರ ಕೊರತೆ ಇದೆ. 129 ಅಂಗನವಾಡಿ ಕಾರ್ಯಕರ್ತೆಯರ ನೇಮಿಸಬೇಕು. ಅಲ್ಲಿಯವರೆಗೂ ಪ್ರತ್ಯೇಕವಾಗಿ ಅಂಗನವಾಡಿ ಕಾರ್ಯಕರ್ತೆಯರ ಹಾಗು ಸಹಾಯಕಿಯರು ಇರಬೇಕು ಈ ಕುರಿತು ಕ್ರಮ ಕೈಗೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ರತ್ನಂ ಪಾಂಡೆಯಾ ಇದ್ದರು.