ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.30:
ಬಳ್ಳಾಾರಿಯ ಕೌಲ್ಬಜಾರ್ನಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿಿನ ಬಾಂಗ್ಲಾ ನಿವಾಸಿಗಳು ಅಕ್ರಮವಾಗಿ ನೆಲೆಸಿದ್ದು ತನಿಖೆ ನಡೆಸಿ ಅವರನ್ನು ತಕ್ಷಣವೇ ತೆರವುಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಬಿಜೆಪಿ ಮುಖಂಡ, ಮಾಜಿ ಸಚಿವ ಬಿ. ಶ್ರೀರಾಮುಲು ಅವರು ತಿಳಿಸಿದ್ದಾಾರೆ.
ಗೃಹ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ಕೌಲ್ಬಜಾರ್ನಲ್ಲಿ ಇರುವ ಅಕ್ರಮವ ವಲಸಿಗರು ಓಟರ್ ಐಡಿ, ಆಧಾರ್ ಕಾರ್ಡ್ ಸೇರಿ ಇನ್ನಿಿತರೆಗಳನ್ನು ಅಕ್ರಮವಾಗಿ ಪಡೆದಿದ್ದಾಾರೆ. ಬಿಜೆಪಿಯ ಕಾರ್ಯಕರ್ತರು ಈ ಅಕ್ರಮ ನಿವಾಸಿಗಳನ್ನು ಗುರುತಿಸಿದ್ದು, ಜಿಲ್ಲೆೆಯಲ್ಲಿ ಎಸ್ಐಆರ್ ಆಗುವಾಗ ಅಕ್ರಮ ನಿವಾಸಿಗಳನ್ನು ಹೊರ ಹಾಕಬೇಕಿದೆ ಎಂದರು.
ಪಂಜಾಬ್ನಂತೆಯೇ ಬಳ್ಳಾಾರಿಯೂ ಡ್ರಗ್ಸ್ ಮಾಫಿಯಾದ ಜಾಲಕೇಂದ್ರವಾಗುತ್ತಿಿದೆ. ಬಳ್ಳಾಾರಿ ನಗರದಲ್ಲೂ ವ್ಯಾಾಪಕವಾಗಿ ಡ್ರಗ್ಸ್ ಮಾರಾಟ ಆಗುತ್ತಿಿರುವ ಮಾಹಿತಿ ಇದೆ. ಬಹುತೇಕ ಕಾಲೇಜುಗಳು – ಶಿಕ್ಷಣ ಸಂಸ್ಥೆೆಗಳಲ್ಲಿ ಡ್ರಗ್ಸ್ ಮಾರಾಟ ಮತ್ತು ಬಳಕೆ ವ್ಯಾಾಪಕವಾಗುತ್ತಿಿರುವ ಆತಂಕ ಅನೇಕ ಪೋಷಕರಲ್ಲಿದೆ. ರಾಜ್ಯಾಾದ್ಯಂತ ಡ್ರಗ್ಸ್ ಮಾಫಿಯಾವನ್ನು ಮಟ್ಟಹಾಕದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸಚಿವ ಸ್ಥಾಾನಕ್ಕೆೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಬಳ್ಳಾಾರಿ ನಗರಾದ್ಯಮತ ‘ಮನೆ ಮನೆಗೂ ಮಟಕಾ’ ಜಾರಿಯಲ್ಲಿದೆ. ಅಲ್ಲೀಪುರ ಗ್ರಾಾಮದ ರಸ್ತೆೆಗಳಲ್ಲಿ ಮಟಕಾ ವ್ಯಾಾಪಕವಾಗಿ – ಬಹಿರಂಗವಾಗಿ ನಡೆದಿದೆ. ಇಸ್ಪೇಟ್ ಜೂಜಾಟ ಹೆಚ್ಚಾಾಗಿದೆ. ಜಿಲ್ಲೆೆಯಲ್ಲಿ ಅದರಲ್ಲೂ ಬಳ್ಳಾಾರಿ ನಗರದಲ್ಲಿ ಅಕ್ರಮಗಳೇ ಹೆಚ್ಚಾಾಗಿ ನಡೆದಿವೆ. ಪೊಲೀಸ್ ತಕ್ಷಣವೇ ಕ್ರಮಕೈಗೊಳ್ಳದೇ ಹೋದಲ್ಲಿ ಬಳ್ಳಾಾರಿಗರ ಪರಿಸ್ಥಿಿತಿ ಗಂಭೀರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಂಗ್ರೆೆಸ್ ಮುಖಂಡ ಕೆ.ಸಿ. ವೇಣುಗೋಪಾಲ್ ಅವರು ಕರ್ನಾಟಕದ ಆಡಳಿತದಲ್ಲಿ ಮೂಗು ತೂರಿಸುತ್ತಿಿರುವುದು ಸರಿಯಲ್ಲ. ಬೆಂಗಳೂರಿನ ಕೋಗಿಲೆಯ ಕೇರಳದ ನಿರಾಶ್ರಿತರಿಗೆ ಕರ್ನಾಟಕ ಸರ್ಕಾರ ಪುನರ್ವಸತಿ ಕಲ್ಪಿಿಸುತ್ತಿಿರುವುದು ಮತಗಳ ತುಷ್ಠೀಕರಣಕ್ಕೆೆ ಸಾಕ್ಷಿಯಾಗಿದೆ. ಅಲ್ಲದೇ, ಅಕ್ರಮ ನೆಲೆಸುವಿಕೆಯನ್ನು ಪ್ರೋೋತ್ಸಾಾಹಿಸಿದಂತೆ ಆಗಲಿದೆ. ಇಲ್ಲವಾದಲ್ಲಿ ಸರ್ಕಾರ ಕರ್ನಾಟಕ ಸರ್ಕಾರದ ಎಲ್ಲಾಾ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ಸರ್ಕಾರ ನೀಡಬೇಕು ಎಂದರು.
ಕೋಗಿಲುಯಲ್ಲಿ ಅಕ್ರಮವಾಗಿ ನೆಲೆಸಿರುವ ಕೇರಳಿಗರ ಮೂಲ, ಉದ್ಧೇಶ, ವೃತ್ತಿಿ ಮತ್ತು ದೈನಂದಿನ ಚಟುವಟಿಕೆಗಳ ಕುರಿತು ಸಮಗ್ರ ತನಿಖೆ ನಡೆಯಲಿ. ಸ್ಥಳೀಯ ಶಾಸಕ, ಸಚಿವ ಕೃಷ್ಣ ಭೈರೇಗೌಡ ಅವರು ಈ ಕುರಿತು ವಿಶೇಷ ಗಮ ನೀಡಿ, ನಾಡಿನ ಜನತೆಗೆ ಉತ್ತರ ನೀಡಬೇಕು ಎಂದರು.
‘ವಾಲ್ಮೀಕಿ ಪುತ್ಥಳಿ’
ಬಳ್ಳಾಾರಿಯ ವಾಲ್ಮೀಕಿ ವೃತ್ತ (ಎಸ್ಪಿಿ ಸರ್ಕಲ್)ದಲ್ಲಿ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಯನ್ನು ಈಗಾಗಲೇ ಪ್ರತಿಷ್ಠಾಾಪಿಸಲಾಗಿದೆ. ಶಾಸಕ ಭರತರೆಡ್ಡಿಿ ಅವರು ಈ ವೃತ್ತದಲ್ಲಿ ಮತ್ತೊೊಂದು ವಾಲ್ಮೀಕಿ ಪುತ್ಥಳಿಯನ್ನು ಪ್ರತಿಷ್ಠಾಾಪಿಸುತ್ತಿಿರುವುದು ಸೂಕ್ತವಲ್ಲ. ಹಳೆಯ ಪುತ್ಥಳಿಯನ್ನು ತೆಗೆದು ಅದೇ ಸ್ಥಳದಲ್ಲಿ ಹೊಸ ಪುತ್ಥಳಿಯನ್ನು ಪ್ರತಿಷ್ಠಾಾಪಿಸಬಹುದಾಗಿತ್ತು. ಈ ವೃತ್ತದ ವಿಚಾರದಲ್ಲಿ ಆಗುತ್ತಿಿರುವ ಬೆಳವಣಿಗೆ ಸರಿಯಾದುದ್ದಲ್ಲ. ಜನವರಿ 3, 2026 ರಂದು ನಡೆಯುವ ಪುತ್ಥಳಿ ಪ್ರತಿಷ್ಠಾಾಪನೆ ಸರ್ಕಾರದ ಕಾರ್ಯಕ್ರಮ. ಕಾರಣ ನಾನು ಪಾಲ್ಗೊೊಳ್ಳುತ್ತಿಿಲ್ಲ ಎಂದು ಬಿ. ಶ್ರೀರಾಮುಲು ಅವರು ಸ್ಪಷ್ಟಪಡಿಸಿದರು.
ಬಳ್ಳಾಾರಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಶ್ರೀನಿವಾಸ ಮೋತ್ಕರ್, ಕಾರ್ಪೊರೇಟರ್ಗಳಾದ ಇಬ್ರಾಾಹಿಂಬಾಬು, ಕೆ. ಹನುಮಂತಪ್ಪ, ಎನ್. ಗೋವಿಂದರಾಜುಲು, ಜನತಾ ಬಜಾರ್ ಅಧ್ಯಕ್ಷರಾದ ಕೆ. ವೇಮಣ್ಣ, ಮಲ್ಲನಗೌಡ ಇನ್ನಿಿತರರು ಈ ಸಂದರ್ಭದಲ್ಲಿ ಉಪಸ್ಥಿಿತರಿದ್ದರು.
ಬಳ್ಳಾರಿಯ ಕೌಲ್ಬಜಾರ್ನಲ್ಲಿ 10 ಸಾವಿರಕ್ಕೂ ಹೆಚ್ಚಿನ ಬಾಂಗ್ಲಾಾ ನಿವಾಸಿಗಳು ; ಬಿ. ಶ್ರೀರಾಮುಲು

