ಆನೇಕಲ್,ಆ.14:ಅವರದು ಮುದ್ದಾದ ಕುಟುಂಬ ಆ ಕುಟುಂಬದಲ್ಲಿ ಸಂತೋಷಕ್ಕೆ ಪಾರವೇ ಇರಲಿಲ್ಲ ಅವರ ಸಂತೋಷಕ್ಕೆ ಒಂದು ಮುದ್ದಾದ ಮಗು ಸಹ ಇತ್ತು ದೂರದ ಆಂಧ್ರದಿಂದ ಬಂದು ಮೊಬೈಲ್ ಶಾಪ್ ಇಟ್ಕೊಂಡು ಜೀವನ ಸಾಗ್ತಿದ್ರು. ಆದರೆ ಆ ಕುಟುಂಬದ ಮೇಲೆ ಯಾರ್ ಕಣ್ಣು ಬಿತ್ತೊ ಗೊತ್ತಿಲ್ಲ ವಿಧಿಯಾಟ ರಸ್ತೆ ಅಪಘಾತದಲ್ಲಿ ಗಂಡ ತೀರಿಕೊಂಡಿದ್ದು ದುರಂತ ಅಂದ್ರೆ ಎರಡು ವರ್ಷದ ಬಳಿಕ ಅದೇ ದಿನವೇ ಮಗುವಿನ ಜೊತೆಗೆ ಪತ್ನಿ ಸಹ ಆತ್ಮಹತ್ಯೆ ಮಾಡಿಕೊಂಡು ಬಾರದ ಲೋಕಕ್ಕೆ ಹೋಗಿದ್ದಾರೆ ಅಷ್ಟಕ್ಕೂ ಇಂತಹ ಹೃದಯ ವಿದ್ರಾವಕ ಘಟನೆ ನಡೆದಿದ್ದರೂ ಎಲ್ಲಿ ಅಂತೀರಾ ಈ ಸ್ಟೋರಿ..
ಪತಿ ತೀರಿಕೊಂಡ ದಿನವೇ ಮಗುವಿನ ಜೊತೆಗೆ ಆತ್ಮಹತ್ಯೆಗೆ ಶರಣಾದ ತಾಯಿ..
ದೇವರ ಆಟ ಬಲ್ಲವರಾರು ಆತನ ಎದುರು ನಿಲ್ಲವರ ಯಾರು ಕೇಳದ ಸುಖವ ಕೊಡುವ ಹೇಳದ ದುಃಖವ ಕೊಡುವ ತನ್ನ ಮನದಂತೆ ಹಾಡಿ ಕುಣಿಯುವ ಈ ಸಾಂಗ್ ಕೇಳಿದಿರಲ್ಲ ಅಂಥದ್ದೇ ಒಂದು ಘಟನೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಸಕಲವಾರದಲ್ಲಿ ನಡೆದಿದೆ ಹೀಗೆ ಫೋಟೋದಲ್ಲಿ ಕಾಣ್ತಿದ್ದಲ್ಲ ಈಕೆ ಹೆಸರು ವಿಜಯಲಕ್ಷ್ಮಿ ಅಂತ ಮಗ ಹರಿಹರನ್ ಅಂತ . ಸುಮಾರು ಎಂಟು ವರ್ಷಗಳ ಹಿಂದೆ ಆಂಧ್ರದಿಂದ ಬಂದ ಗಣೇಶ್ ಮತ್ತು ವಿಜಯಲಕ್ಷ್ಮಿ ದಂಪತಿಗಳು ಸಿಕೆಪಾಳ್ಯದಲ್ಲಿ ವಾಸವಾಗಿದ್ದರು.. ಇನ್ನು ಈ ದಂಪತಿಗಳಿಗೆ ಏಳು ವರ್ಷದ ಹರಿಹರ ಅಂತ ಮಗ ಸಹ ಇದ್ದು ಇನ್ನು ಜೀವನಕ್ಕಾಗಿ ಮೊಬೈಲ್ ಶಾಪ್ ಇಟ್ಕೊಂಡು ಸಂಸಾರ ನಡೆಸಿದ್ದರು ಎನ್ನಲಾಗಿದೆ , ಆದರೆ ವಿಧಿ ಆಟ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಕೊಡತಿಯಲ್ಲಿ ಗಂಡ ಗಣೇಶ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಗಂಡ ಸತ್ತ ಬಳಿಕ ವಿಜಯಲಕ್ಷ್ಮಿ ಮಾನಸಿಕವಾಗಿ ನೊಂದಿದ್ರಂತೆ ಹಾಗಾಗಿ ವಿಜಯಲಕ್ಷ್ಮಿಗೆ ಸುಮಾರು ಆರು ತಿಂಗಳ ಹಿಂದೆ ಸಕಲವಾರದ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುತ್ತಿದ್ದರಂತೆ. ಆದರೆ ರಾತ್ರಿ ಊಟ ಮುಗಿಸಿ ಮಲಗಿದ್ರಂತೆ, ಆದರೆ ಬೆಳಗ್ಗೆ ತಾಯಿ ಮತ್ತು ಮಗ ಕೆರೆಯಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾಗಿರುವುದಾಗಿ ಬೆಳಕಿಗೆ ಬಂದಿದೆ.
: ಶ್ರೀಕಾಂತ್ ಮೃತಾಳ ತಮ್ಮ
ಇನ್ನೂ ವಿಜಯಲಕ್ಷ್ಮಿ ಮತ್ತು ಮಗು ಮನೆಯಲ್ಲಿ ಇಲ್ಲದಿದ್ದಾಗ ತಮ್ಮ ಶ್ರೀಕಾಂತ್ ಹುಡುಕಾಟ ನಡೆಸಿದ್ದಾರೆ ಅಲ್ಲಿನ ಸ್ಥಳೀಯ ಮಾಹಿತಿ ಪ್ರಕಾರ ಕೆರೆಯಲ್ಲಿ
ತಾಯಿ ಮತ್ತು ಮಗ ಮೃತಪಟ್ಟಿರುವ ಮಾಹಿತಿ ಅವರಿಗೆ ನೀಡಿದ್ದಾರೆ
ಇನ್ನು ವಿಜಯಲಕ್ಷ್ಮಿ, ಪತಿ ತೀರಿಕೊಂಡ ಬಳಿಕ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳಂತೆ, ಆಕೆಗೆ ಸುಮಾರು ಆರು ತಿಂಗಳ ಹಿಂದೆಯೇ ಆತ್ಮಹತ್ಯೆಗೆ ಯತ್ನ ಮಾಡಿದ್ದಂತೆ ಮತ್ತೀಗ ಪತಿ ತೀರಿಕೊಂಡಿದ್ದ ದಿನವೇ ತಾಯಿ ಮತ್ತು ಮಗ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ..
ಇನ್ನು ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ತನಿಖೆ ಮುಂದುವರಿಸಿದ್ದಾರೆ ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ನಲ್ಲಿ ತಾಯಿ ಸತ್ರೆ ಮಗನನ್ನು ಯಾರು ನೋಡಿಕೊಳ್ಳುತ್ತಾರೆ ಅಂತ ಮಗನನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ಮಾತ್ರ ವಿಪರ್ಯಸವೇ ಸರಿ ಬದುಕು ಬಾಳಬೇಕಾದ ವಯಸ್ಸಿನಲ್ಲಿ ಮಸಣ ಸೇರುವುದು ದುರುಂತ.
ಆತ್ಮಹತ್ಯೆ ತಡೆಗಟ್ಟಲು ಮತ್ತು ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ಸಹಯೋಗದೊಂದಿಗೆ SAHAI ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ. ಸಂಪರ್ಕಸಂಖ್ಯೆ: 080 – 25497777