ಸುದ್ದಿಮೂಲ ವಾರ್ತೆ
ಕುಕನೂರು ಏ.02 :ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಮಾತೆಯರ ಪಾತ್ರ ಹಿರಿದು, ತಾಯಂದಿರು ಗಂಡು ಹೆಣ್ಣು ಎನ್ನದೇ ಇಬ್ಬರನ್ನು ಸಮನಾಗಿ ಕಂಡು ಅವರ ಭವಿಷ್ಯವನ್ನು ರೂಪಿಸುವಲ್ಲಿ ತಾಯಂದಿರ ಪಾತ್ರವೇ ಹಿರಿದು ಎಂದು ಹಿರಿಯ ಪತ್ರಕರ್ತ ಕೊಟ್ರಪ್ಪ ತೋಟದ ಹೇಳಿದರು.
ತಾಲೂಕಿನ ಮಂಗಳೂರು ಗ್ರಾಮದ ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೋದಯ, ಚಾಣಕ್ಯ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರ ಉಧ್ಘಾಟನೆಯನ್ನು ನೇರವೇರಿಸಿದ ಹಿರಿಯ ಪತ್ರಕರ್ತ ಹಾಗೂ ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲೆ ಅಧ್ಯಕ್ಷ ಕೊಟ್ರಪ್ಪ ತೋಟದ ಮಾತನಾಡಿ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ತಾಯಂದಿರೆ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ತಾಯಂದಿರು ಗಂಡು ಹೆಣ್ಣು ಎನ್ನದೇ ಇಬ್ಬರನ್ನು ಸಮನಾಗಿ ಕಂಡು ಅವರ ಭವಿಷ್ಯಕ್ಕಾಗಿ ದುಡಿಯುತ್ತಾರೆ.
ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಶೈಕ್ಷಣಿಕವಾಗಿ ಮಕ್ಕಳು ಸ್ಪರ್ಧಾತ್ಮಕ ಮನೋಭಾವವನ್ನು ಬೆಳಸಿಕೊಳ್ಳುವ ಮೂಲಕ ಅವಿರತ ಪ್ರಯತ್ನವನ್ನು ಮಾಡುವುದು ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ ಅವರಿಗೆ ಅವಶ್ಯಕತೆಗೆ ತಕ್ಕ ತರಬೇತಿಯನ್ನು ನೀಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸುರೇಶ ಮಡಿವಾಳರ, ಶ್ಯಾಹೀದಾಬೇಗಂ ಹೊಸಮನಿ, ಶರಣಪ್ಪ ಕುಂಬಾರ, ಮಂಜುನಾಥ ಆರೇರ, ರವೀಂದ್ರನಾಥ ತೋಟದ, ದೇವಪ್ಪ ದೇಸಾಯಿ, ವೀರೇಶ ಕುಂಬಾರ, ಶರಣಪ್ಪ ಚಕ್ರಸಾಲಿ, ಕಾವ್ಯ ಬಂಡಿˌ ಶ್ರೀದೇವಿ ಸೋಂಪುರˌ ಲಕ್ಷ್ಮಿˌ ವಿಶಾಲಾಕ್ಷಿˌ ರೇಷ್ಮಾˌ ಮಂಜುಳಾˌ ಸುಜಾತ ಕಂದಗಲ್ˌ ˌ ಗೀತಾ ತೊದ್ಲರ ಹಾಗೂ ಇತರರಿದ್ದರು.