ಸುದ್ದಿಮೂಲ ವಾರ್ತೆ ಬೆಂಗಳೂರು,ಅ.20:
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗಾಗಿ ಸಚಿವರು ಮತ್ತು ಅಧಿಕಾರಿಗಳಿಂದ ಹಣ ವಸೂಲಿ ಮಾಡಲಾಗುತ್ತಿಿದೆ ಎಂದು ಸಂಸದರಾದ ಜಗದೀಶ್ ಶೆಟ್ಟರ್ ಮತ್ತು ಬಿ.ವೈ. ರಾಘವೇಂದ್ರ ಅವರು ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿರುವ ಜಗದೀಶ ಶೆಟ್ಟರ್, ಮುಖ್ಯಮಂತ್ರಿಿ ಸಿದ್ದರಾಮಯ್ಯ ಇತ್ತೀಚಿಗೆ ತಮ್ಮ ಸಂಪುಟ ಸಹೋದ್ಯೋೋಗಿಗಳಿಗೆ ಆಯೋಜಿಸಿದ್ದ ಔತಣಕೂಟ ಏರ್ಪಡಿಸಿದ್ದರು. ಇದರ ಪ್ರಮುಖ ಉದ್ದೇಶ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಹಣ ಸಂಗ್ರಹಿಸುವುದಾಗಿತ್ತು. ಕಾಂಗ್ರೆೆಸ್ ಕರ್ನಾಟಕವನ್ನು ಚುನಾವಣೆಗೆ ಎಟಿಎಂ ಮಾಡಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಿಯಾಗಿ ಕಾರ್ಯನಿರ್ವಹಿಸುವಲ್ಲಿ ವಿಲರಾಗಿದ್ದು, ಆಡಳಿತದಲ್ಲಿ ಆಸಕ್ತಿಿಯನ್ನೂ ಕಳೆದುಕೊಂಡಿದ್ದಾರೆ. ಬಿಹಾರ ಚುನಾವಣೆಗೆ ಹಣ ಸಂಗ್ರಹಿಸಲು ಕಾಂಗ್ರೆೆಸ್ ಅವರನ್ನು ಕೇಳಿದೆ, ಆದ್ದರಿಂದ ಅವರು ಮಂತ್ರಿಿಗಳಿಗೆ ಔತಣಕೂಟ ಆಯೋಜಿಸಿದ್ದರು. ಅದರಲ್ಲಿ ಪ್ರತಿಯೊಬ್ಬರಿಗೂ ಚುನಾವಣೆಗೆ ಹಣ ನೀಡುವಂತೆ ಕೇಳಿಕೊಂಡಿದ್ದಾರೆ ಎಂದರು.
ಕಾಂಗ್ರೆೆಸ್ ರಾಜ್ಯ ಘಟಕದಲ್ಲಿ ಆಂತರಿಕ ಕಚ್ಚಾಾಟ ಹೆಚ್ಚಿಿದ್ದು, ಸಿಎಂ ಸ್ಥಾಾನದ ಬಗ್ಗೆೆ ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಉಪಮುಖ್ಯಮಂತ್ರಿಿ ಡಿ. ಕೆ .ಶಿವಕುಮಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದು, ನವೆಂಬರ್ನಲ್ಲಿ ಶಿವಕುಮಾರ್ ಅವರನ್ನು ಸಿಎಂ ಮಾಡಲಾಗುವುದು ಎಂದು ಬೆಂಬಲಿಗ ಶಾಸಕರು ಹೇಳಿದ್ದಾರೆ. ಈ ಹಿಂದೆ ಕೆ ಎನ್ ರಾಜಣ್ಣ ಅವರು ನವೆಂಬರ್ ಕ್ರಾಾಂತಿಯ ಬಗ್ಗೆೆ ಹೇಳಿಕೆ ನೀಡಿದ್ದರು. ಹೀಗಾಗಿ ಅವರು ಸಚಿವ ಸ್ಥಾಾನ ಕಳೆದುಕೊಳ್ಳಬೇಕಾಯಿತು ಎಂದು ಅವರು ಹೇಳಿದರು
ಮತ್ತೊೊಂದೆಡೆ ಶಿವಮೊಗ್ಗದಲ್ಲಿ ಮಾತನಾಡಿರುವ ಸಂಸದ ಬಿ.ವೈ. ರಾಘವೇಂದ್ರ, ಸಚಿವ ಸಂಪುಟ ಸಚಿವರು ಬಿಹಾರದ ಚುನಾವಣೆಗೆ ನಿಧಿ ಕಳುಹಿಸಬೇಕೆಂದು ಅಧಿಕಾರಿಗಳಿಂದ ಲೂಟಿ ಮಾಡುತ್ತಿಿದ್ದಾರೆ. ಸಚಿವರ ವಸೂಲಿಗೆ ಅಧಿಕಾರಿಗಳು ಕಣ್ಣೀರು ಹಾಕಿಕೊಂಡು ನಮ್ಮ ಎದುರಿಗೆ ಹೇಳುತ್ತಿಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ರಾಜ್ಯದಲ್ಲಿ ವರ್ಗಾವಣೆ ದಂಧೆ ಮುಗಿದಿದೆ. ಈಗ ನವೀಕರಣ ಎಂದು ಎಲ್ಲಾ ಇಲಾಖೆಯ ಮಂತ್ರಿಿಗಳು ವಸೂಲಿ ಮಾಡಿ ಬಿಹಾರ್ ಚುನಾವಣೆಗೆ ಹಣ ಸಂಗ್ರಹ ಮಾಡುತ್ತಿಿದ್ದಾರೆ. ಈಗ ದಂಧೆ ಆಗಿದೆ. ಅದು ಬಿಹಾರಕ್ಕೆೆ ತಲುಪಲ್ಲ, ಅದು ಎಲ್ಲಿ ತಲುಪಬೇಕೋ ಅಲ್ಲಿಗೆ ತಲುಪುತ್ತದೆ. ಬಿಹಾರದ ಚುನಾವಣೆ ಇಟ್ಟುಕೊಂಡು ರಾಜ್ಯದಲ್ಲಿ ಹಣ ವಸೂಲಿ ಮಾಡುತ್ತಿಿದ್ದಾರೆ ಎಂದು ದೂರಿದ್ದಾರೆ.
ಚಿತ್ತಾಾಪುರದ ಘಟನೆಯೂ ಅಷ್ಟೇ, ಶಾಸಕ ಗುತ್ತೇದಾರ್ ಅವರು ಹೇಳಿದ್ದಾರೆ, ದೀಪಾವಳಿ ಪ್ರಯುಕ್ತ ನನ್ನ ಕಚೇರಿ ಸ್ವಚ್ಛಗೊಳಿಸುವ ಕೆಲಸ ಆಗಿದೆ. ಯಾವುದೇ ದುರುದ್ದೇಶ ಇಲ್ಲ ಎಂದಿದ್ದಾರೆ. ಬಿಹಾರದಲ್ಲಿ ಚುನಾವಣೆ ನಡೆಯುತ್ತಿಿದೆ. ಅಲ್ಲಿ ರಾಹುಲ್ ಗಾಂಧಿ ಅವರು ಪಾದಯಾತ್ರೆೆ ನಡೆಸುತ್ತಿಿದ್ದಾರೆ. ಅದಕ್ಕೆೆ ಪೂರಕವಾದ ದಾಖಲೆ ಹುಡುಕಲು ಅವರ ಹೈಕಮಾಂಡ್ ಹೇಳಿದೆಯೆನೋ ಗೊತ್ತಿಿಲ್ಲ ಎಂದು ತಿಳಿಸಿದ್ದಾರೆ.
ಪುರಾವೆ ಒದಗಿಸಲು ಡಿಕೆಶಿ ಆಗ್ರಹ:
ರಾಜ್ಯದಲ್ಲಿ ಹಣ ಸಂಗ್ರಹಿಸುವ ಕೆಲಸವನ್ನು ಕಾಂಗ್ರೆೆಸ್ ಸರ್ಕಾರದ ಸಚಿವರು ಮತ್ತು ಅಧಿಕಾರಿಗಳಿಗೆ ವಹಿಸಲಾಗಿದೆ ಎಂದು ವಿರೋಧ ಪಕ್ಷ ಬಿಜೆಪಿ ಆರೋಪಿಸಿದ್ದು, ಈ ಸಂಬಂಧ ಪುರಾವೆ ಒದಗಿಸುವಂತೆ ಉಪಮುಖ್ಯಮಂತ್ರಿಿ ಡಿ.ಕೆ .ಶಿವಕುಮಾರ್ ಸವಾಲು ಹಾಕಿದ್ದಾರೆ.
ಬಿಹಾರ ಚುನಾವಣೆಗೆ, ಆಡಳಿತಾರೂಢ ಕಾಂಗ್ರೆೆಸ್ ಪಕ್ಷವು ನಿಧಿಸಂಗ್ರಹಣೆಯಲ್ಲಿ ಭಾಗಿಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಭ್ರಷ್ಟಾಾಚಾರ ಹೆಚ್ಚಾಾಗಿದೆ ಎಂದು ಬಿಜೆಪಿ ಸಂಸದರಾದ ಜಗದೀಶ್ ಶೆಟ್ಟರ್ ಮತ್ತು ಬಿ.ವೈ. ರಾಘವೇಂದ್ರ ಆರೋಪಿಸಿದ್ದಾರೆ. ಅವರ ಬಳಿ ಏನಾದರೂ ಪುರಾವೆಗಳಿದ್ದರೆ, ಅವರು ಅದನ್ನು ಬಿಡುಗಡೆ ಮಾಡಲಿ. ರಾಘವೇಂದ್ರ ಎಂದರೆ ಸುಳ್ಳಿಿಗೆ ಸಮಾನಾರ್ಥಕವಾಗಬಾರದು. ಹಿಟ್ ಅಂಡ್ ರನ್ ಮಾಡುವ ಕೆಲವು ನಾಯಕರು ಇದ್ದಾರೆ. ರಾಘವೇಂದ್ರ ಕೂಡ ಅವರಂತೆ ಆಗಬಾರದು ಎಂದು ಶಿವಕುಮಾರ್ ಹೇಳಿದರು.