ಸುದ್ದಿಮೂಲ ವಾರ್ತೆ ರಾಯಚೂರು, ಡಿ.21:
ರಾಯಚೂರು ನಗರದ ಅಭಿವೃದ್ಧಿಿಗೆ ಪ್ರಾಾಮಾಣಿಕವಾಗಿ ಪ್ರಯತ್ನಿಿಸುತ್ತೇನೆ ಎಂದು ಸಂಸದ ಜಿ.ಕುಮಾರ ನಾಯಕ ಹೇಳಿದರು.
ನಗರದ ವಾರ್ಡ್ ನಂಬರ್ 14 ಮಂಗಳವಾರ ಪೇಟೆಯ ವೀರ ಮಾರುತಿ ದೇವಸ್ಥಾಾನದ ಆವರಣದಲ್ಲಿ ಸಮುದಾಯ ಭವನಕ್ಕೆೆ ಸಂಸದರ ಪ್ರಾಾದೇಶಿಕ ಅಭಿವೃದ್ಧಿಿ ಅನುದಾನದ ಅಡಿಯಲ್ಲಿ ಸುಮಾರು 10 ಲಕ್ಷ ಅನುದಾನ ನೀಡಿ ಸಮುದಾಯ ಭವನಕ್ಕೆೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನನ್ನ ಅನುದಾನದಲ್ಲಿ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು. ಸಾರ್ವಜನಿಕರ ಬೇಡಿಕೆಯ ಆದ್ಯತೆ ಮೇರೆಗೆ ಈ ಕಾಮಗಾರಿ ತೆಗೆದುಕೊಂಡಿದ್ದು ಸ್ಥಳೀಯ ಮಟ್ಟದಲ್ಲಿ ನಾಮಕರಣ, ಮದುವೆ ಹಾಗು ಇನ್ನಿಿತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವ ದೃಷ್ಟಿಿಯಿಂದ ಈ ಅನುದಾನ ನೀಡಲಾಗಿದ್ದು ಸ್ಥಳೀಯರು ಹಾಗೂ ಎಲ್ಲಾ ಸಮುದಾಯದವರು ಈ ಸಮುದಾಯ ಭವನದ ಸದುಪಯೋಗ ಪಡೆದುಕೊಳ್ಳಿಿ ಎಂದು ಹೇಳಿ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಎಂದು ಸಲಹೆ ನೀಡಿದರು.
ಸಚಿವ ಎನ್.ಎಸ್ ಬೋಸರಾಜ್, ಕಾಂಗ್ರೆೆಸ್ ಮುಖಂಡರಾದ ಮೊಹ್ಮದ್ ಶಾಲಂ, ಕೆ ಶಾಂತಪ್ಪ, ಜಯಣ್ಣ, ಸಾಜೀದ್ ಸಮೀರ, ನರಸಿಂಹಲು ಮಾಡಿಗಿರಿ, ತಾಯಣ್ಣ ನಾಯಕ, ರಾಮು ಗಿಲೇರಿ, ಜಯಂತರಾವ್ ಪತಂಗಿ, ಜಿ.ಶಿವಮೂರ್ತಿ ಸೇರಿದಂತೆ ಕಾಂಗ್ರೆೆಸ್ ಪಕ್ಷದ ಮುಖಂಡರು ಹಿರಿಯರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು.
ನಗರಾಭಿವೃದ್ದಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ – ಸಂಸದ

