ಸುದ್ದಿಮೂಲ ವಾರ್ತೆ ಮುದಗಲ್, ಡಿ.18:
ಪಟ್ಟಣದ ಲಿಂಗಸುಗೂರು ರಸ್ತೆೆಯ ವೃತ್ತದಲ್ಲಿ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಸಂಪೂರ್ಣ ಒಳಮೀಸಲಾತಿ ಜಾರಿಗೆ ಒತ್ತಾಾಯಿಸಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಜಿಲ್ಲಾ ಸಮಿತಿ ಎಮ್ಆರ್ಪಿಎಸ್ ವತಿಯಿಂದ ಹೆದ್ದಾರಿ ರಸ್ತೆೆ ತಡೆದು ಬುಧುವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಅಧ್ಯಕ್ಷ ನರಸಪ್ಪ ದಂಡೋರ ಮಾತನಾಡಿ 30 ವರ್ಷದಿಂದ ನಡೆಯುತ್ತಿಿರುವ ಸಂಪೂರ್ಣ ಮೀಸಲಾತಿ ಹೋರಾಟಕ್ಕೆೆ ರಾಜ್ಯ ಸರಕಾರ ಸ್ಪಂದಿಸಿ ಜಾರಿಗೆ ತರಬೇಕು. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸಂಪೂರ್ಣ ಮೀಸಲಾತಿ ಬಿಲ್ ಪಾಸ್ ಮಾಡಬೇಕು. ತೆಲಂಗಾಣ, ಆಂದ್ರಪ್ರದೇಶ, ಹರಿಯಾಣ ರಾಜ್ಯ ಸಂಪೂರ್ಣ ಮೀಸಲಾತಿ ಜಾರಿ ಮಾಡಿದ್ದಾರೆ. ರಾಜ್ಯ ಕಾಂಗ್ರೆೆಸ್ ಸರಕಾರ ವಿಳಂಬ ನೀತಿ ಅನುಸರಿಸುತ್ತಿಿದೆ. ರಾಜ್ಯದಲ್ಲಿ ಸರಕಾರ ಪೋಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಮೀಸಲಾತಿ ಹೋರಾಟ ಪ್ರತಿಭಟನೆಕಾರರನ್ನು ಹತ್ತಿಿಕ್ಕುವಂತ ಕೆಲಸ ಮಾಡುತ್ತಿಿದೆ. ಪ್ರತಿಭಟನಾಕಾರರು ಯಾವುದಕ್ಕೆೆ ಹಿಂಜರಿಯಬಾರದು. ಸರಕಾರ ಮಾದಿಗರ ಹೋರಾಟದ ಹಕ್ಕುಗಳಿಗೆ ನ್ಯಾಾಯ ನೀಡಬೇಕು. ರಾಜ್ಯದಲ್ಲಿ ಮಾದಿಗ ಸಮಾಜ ಕಾಂಗ್ರೆೆಸ್ ಸರಕಾರ ರಚನೆಗೆ ಮತದಾನ ನೀಡಿ ಬೆಂಬಲಿಸಿದೆ. ನ್ಯಾಾಯಯುತವಾಗಿ ಮಾದಿಗರ ಹಕ್ಕಿಿಗೆ ಸ್ಪಂದಿಸದಿದ್ದರೆ ಮುಂದೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಜಿಲ್ಲಾ ಅಧ್ಯಕ್ಷ ಮಾನಪ್ಪ ಮೇಸಿ, ಯಾದಗಿರಿ ಜಿಲ್ಲಾಧ್ಯಕ್ಷ ಕಾಶಪ್ಪ ಗಿಣಿಗೇರ, ಕೊಪ್ಪಳ ಜಿಲ್ಲಾಧ್ಯಕ್ಷ ಗಂಗಣ್ಣ, ಲಿಂಗಸುಗೂರು ಕೆಡಿಪಿ ಸದಸ್ಯ ರಾಘವೇಂದ್ರ ಕುದುರಿ ಮಾತನಾಡಿ ದಲಿತ ಸಮುದಾಯ ಒಳಮೀಸಲಾತಿ ಜಾರಿಯಾಗದೇ ಇರುವುದರಿಂತ ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕ ವಲಯದಲ್ಲಿ ಆಗುತ್ತಿಿರುವ ಅನ್ಯಾಾಯದ ವಿರುಧ್ಧ ಕಾಂಗ್ರೆೆಸ್ ಸರ್ಕಾರ ಗಮನಿಸಿ ಬಿಲ್ ಜಾರಿಗೆ ತರಬೇಕು ಎಂದರು.
ರಾಜ್ಯ ಹೆದ್ದಾರಿ ರಸ್ತೆೆ ತಡೆದು ಪ್ರತಿಭಟನೆಕಾರರು ಟೈಯರ್ಗಳಿಗೆ ಬೆಂಕಿ ಹಚ್ಚಿಿದರು. ಹಲಿಗಿ ಬಾರಿಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಮುಂಜಾಗ್ರತಾ ಕ್ರಮವಾಗಿ ಮಸ್ಕಿಿ ವೃತ್ತ ಸಿಪಿಐ ನೇತೃತ್ವದಲ್ಲಿ ಪೋಲಿಸರು ಪ್ರತಿಭಟನೆಕಾರರನ್ನು ಬಂಧಿಸಿ ವಶಕ್ಕೆೆ ಪಡೆದರು. ನಂತರ ಲಿಂಗಸುಗೂರು ಡಿವೈಎಸ್ಪಿಿ ಕಛೇರಿಗೆ ಕರೆದುಕೊಂಡು ಹೋಗಿ ಬಿಡುಗಡೆಗೊಳಿಸಿದರು.
ನವಭಾರತ ಹಿಂದೂ ದಲಿತ ಸಂಘದ ಅಧ್ಯಕ್ಷ ರವಿ ಕಟ್ಟಿಿಮನಿ, ವೆಂಕಟೇಶ ಹಿರೇಮನಿ, ಹನುಮಂತ, ಸಂತೋಷ ಮುದಗಲ್, ಮೋಹನ್ ಭಂಡಾರಿ, ವಿನೋದ್ ಕನ್ನಾಾಪೂರಹಟ್ಟಿಿ, ವಿಕಲಚೇತನ ಸಂಘಟನೆ ರಾಜ್ಯಾಾಧ್ಯಕ್ಷ ಸುರೇಶ ಭಂಡಾರಿ, ಬಸವರಾಜ ಬಂಕದಮನಿ, ಪರಶುರಾಮ, ಬಸವರಾಜ, ರಾಘವೇಂದ್ರ ಸೇರಿದಂತೆ ನೂರಾರು ದಲಿತ ಮುಖಂಡರಿದ್ದರು.
ಮುದಗಲ್: ಸಂಪೂರ್ಣ ಒಳಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ

