ಸುದ್ದಿಮೂಲ ವಾರ್ತೆ ರಾಯಚೂರು , ಡಿ.10:
ಜಿಲ್ಲೆಯ ಮುದಗಲ್ ಪೊಲೀಸ್ ಠಾಣೆಯ ವ್ಯಾಾಪ್ತಿಿಯ ಮಟ್ಟೂರು ತಾಂಡದಲ್ಲಿ ರಾಮಪ್ಪ ಮತ್ತು ಸಕ್ಕುಬಾಯಿ ಎಂಬುವವರ ಮೇಲೆ ನಡೆದ ಹಲ್ಲೆ ಘಟನೆ ಸಂಬಂಧಿಸಿದಂತೆ ಠಾಣೆಯಲ್ಲಿ ಪ್ರತಿದೂರು ದಾಖಲಾದರೂ ಆರೋಪಿಗಳನ್ನು ಬಂಧಿಸದೇ ಪೊಲೀಸ್ ಇಲಾಖೆ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ವಕೀಲ ಈಶ್ವರ ಜಾಧವ ಆರೋಪಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಈ ಪ್ರಕರಣದಲ್ಲಿ ಹಳೆ ದ್ವೇಷಕ್ಕೆೆ ಸಂಬಂಧಿಸಿದಂತೆ ರೈಲ್ವೆೆ ಪೊಲೀಸ್ ರಾಘವೇಂದ್ರ ಪೊಲೀಸರೊಂದಿಗೆ ಹೊಂದಿರುವ ಸ್ನೇಹದಿಂದ ಸುಳ್ಳು ಆರೋಪ ಮಾಡಿ ಪೊಲೀಸರ ಮೇಲೆ ಹಲ್ಲೆ ಪ್ರಕರಣ ದಾಖಲಿಸಲಾಗಿತ್ತು. ಮುದಗಲ್ ಪಿಎಸ್ಐ ತನ್ನ ಸ್ನೇಹಿತ ರಾಘವೇಂದ್ರನ ರಕ್ಷಿಸಲು ಆರೋಪಿಗಳನ್ನು ಬಂಧಿಸದೇ ಸಹಕರಿಸುತ್ತಿಿದ್ದಾರೆ. ಮಾರಣಾಂತಿಕ ಹಲ್ಲೆ ನಡೆಸಿದ ಬಗ್ಗೆೆ ಠಾಣೆಗೆ ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಹಾಗೂ ಡಿವೈಎಸ್ಪಿಿ ಅವರಿಗೂ ದೂರು ನೀಡಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಈಗಾಗಲೇ ರಾಮಪ್ಪ ಮತ್ತು ಸಕ್ಕುಬಾಯಿ ಇವರನ್ನು ಬಂಧಿಸಿರುವ ಪೊಲೀಸರು ಇನ್ನೊೊಂದು ಗುಂಪಿನವರನ್ನು ಬಂಧಿಸದೇ ತಾರತಮ್ಯ ಮಾಡುತ್ತಿಿದ್ದಾರೆ. ಕೂಡಲೇ ಆರೋಪಿಗಳ ಬಂಧಿಸದೆ ಹೋದಲ್ಲಿ ನ್ಯಾಾಯಾಂಗದ ಮೊರೆ ಹೋಗುವುದಾಗಿ ತಿಳಿಸಿದರು.
ಅಲ್ಲದೇ ರಾಮಪ್ಪ ಮತ್ತು ಸಕ್ಕು ಬಾಯಿ ಅನಾರೋಗ್ಯದಿಂದ ಬಳಲುತ್ತಿಿದ್ದಾರೆ. ಪೊಲೀಸರು ಶಾಂತಿ ಸುವ್ಯವಸ್ಥೆೆ ವಿಚಾರದಲ್ಲಿ ಇಬ್ಬರಿಗೂ ಒಂದೇ ನ್ಯಾಾಯ ಅನುಸರಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಿಯಲ್ಲಿ ಲಾಲಮ್ಮ, ಶಿಲ್ಪಾಾ ಇದ್ದರು.
ಮಟ್ಟೂರು ತಾಂಡಾ ಪ್ರಕರಣ, ಆರೋಪಿಗಳ ಬಂಧಿಸುವಲ್ಲಿ ಮುದಗಲ್ ಪಿಎಸ್ಐ ತಾರತಮ್ಯ ಆರೋಪ

