ಸುದ್ದಿಮೂಲ ವಾರ್ತೆ ಮುದಗಲ್ , ಡಿ.09:
ಪಟ್ಟಣದ ಹಳೇಪೇಟೆಯ ವೀರಭದ್ರೇೇಶ್ವರ ಕಾರ್ತಿಕೋತ್ಸವ ಅತ್ಯಂತ ಅದ್ಧೂರಿ ಯಾಗಿ ಮಂಗಳವಾರ ಜರುಗಿತು.
ಬೆಳಿಗ್ಗೆೆ ವೀರಭದ್ರೇೇಶ್ವರ ದೇವರ ಶಿಲಾಮೂರ್ತಿಗೆ ರುದ್ರಾಾಭಿಷೇಕ, ಬಿಲ್ವಾಾರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಾನವನ್ನು ಮಟ್ಟೂರಿನ ಬಸಲಿಂಗಯ್ಯ ಚೆನ್ನಬಸಯ್ಯ ಸ್ವಾಾಮಿ ನೆರವೇರಿಸಿದರು.
ನಂತರ ಹಳೇಪೇಟೆಯ ದೇವರ ಬಾವಿಯಿಂದ ಕಳಸಗಳಿಗೆ ಪೂಜೆ ಸಲ್ಲಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.
ಮೆರವಣಿಗೆಯಲ್ಲಿ ಮಹಿಳೆಯರ ಕಳಸ- ಕನ್ನಡಿ, ವಿವಿಧ ವಾದ್ಯಗಳ ಜತೆಗೆ ಪುರವಂತಿಕೆ ಸೇವೆ ಜರುಗಿತು. ಪುರವಂತಿಕೆ ಸೇವೆ ನೋಡುಗ ಭಕ್ತರ ಮನ ಬೆರಗುಗೊಳಿಸಿತು. ಭಕ್ತರು ಭಕ್ತಿಿಯ ಪರಾಕಾಷ್ಠೆೆ ಮೆರೆದರು.
ಶರಣಪ್ಪ ಚಿತ್ರನಾಳ, ಈರಣ್ಣ ಗುಡೂರು, ಚಂದ್ರಶೇಖರಯ್ಯ ರೇವಳಮಠ, ರಾಚಪ್ಪ ಗುಡೂರು, ಚಂದ್ರಯ್ಯ, ತೋಟಪ್ಪ ವಂದಲಿ, ವೀರಯ್ಯ ರೇವಳಮಠ, ಮಹಾಂತೇಶ ಬನ್ನಿಿಗೋಳ, ಶರಣಗೌಡ ಡಾಬಾ, ಶಶಿ ವಂದಲಿ, ಬಸವರಾಜ ವಂದಲಿ, ಶಿವಯ್ಯ, ದೊಡ್ಡಬಸವ, ಮಹೇಶ ಹಾಗೂ ಮಹಿಳೆಯರು, ಮಕ್ಕಳು, ಸಕಲ ಸದ್ಭಕ್ತರು ಇದ್ದರು.
ಮುದಗಲ್: ವೀರಭದ್ರೇಶ್ವರ ಕಾರ್ತಿಕೋತ್ಸವ

