ಸುದ್ದಿಮೂಲವಾರ್ತೆ
ಮುದಗಲ್ ಏ,08: ಸಮೀಪದ ಗುಡಿಹಾಳ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಂಕೇತವಾದ ಹಜರತ್ ಸೈಯದ್ ಷಾ ಮೋದಿನ್ ಪೀರಾ ಖಾದ್ರಿ ರಹೇಮತ್ ತುಲ್ಲಾ ಅಲೆರ 57 ನೇ ಉರುಸ್ ಶನಿವಾರ ಜರುಗಿತು.
ಸೈಯದ್ ಗೌಸ್ ಮೊಹಿದ್ದೀನ್ ಖಾದ್ರಿ ನಿವಾಸದಿಂದ ಪ್ರಮುಖ ಬೀದಿಗಳಲ್ಲಿ ಗಂಧದ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ದೇವರ ನಾಮಸ್ಮರಣೆ ಹಾಡುತ್ತಾ, ಡೊಳ್ಳು ವಾದ್ಯಗಳೊಂದಿಗೆ ಹಜರತ್ ಷರೀಫ್ ದರ್ಗಾ ತಲುಪಿತು.
ಗಂಧದ ಲೇಪನವನ್ನು ಸಜ್ಜಾದೇ ಸೈಯದ್ ನಯೀಮ್, ಖಾದ್ರಿ ಹಾಗೂ ಸೈಯದ್ ಸಿರಾಜ್ ಹುಸೇನಿ ರವರು ನಡೆಸಿಕೊಟ್ಟರು. ಜಹಗೀರ್ದಾರ್ ರಿಂದ ಫತೇಹಾ ಕಾರ್ಯಕ್ರಮ ಜರುಗಿತು.
ಹಿಂದೂ ಸಮಾಜದವರು ಉರುಸ್ ನಲ್ಲಿ ಪಾಲ್ಗೊಂಡು ಸಂಭ್ರಮಿಸಿ ಭಾವೈಕ್ಯತೆ ಮೆರೆದರು.
ದರ್ಗಾದಲ್ಲಿ ಅನ್ನ ದಾಸೋಹ ನಡೆಯಿತು.
ಎಸ್ ಎ ನಯೀಮ್, ಜಮೀರ್, ಗೌಸ್ ಚಿತ್ರನಾಳ, ಸಾಬು ಹುಸೇನ್, ಪಾಷಾ ಹಾಗೂ ಗ್ರಾಮದ ಗುರು ಹಿರಿಯರು ಇದ್ದರು