ಸುದ್ದಿಮೂಲ ವಾರ್ತೆ ಮುದಗಲ್, ಡಿ.02:
ಪಟ್ಟಣದ ಅನ್ನದಾನಗೌಡ ಪಾಟೀಲ ಬಯ್ಯಾಾಪೂರು ಸ್ಮಾಾರಕ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನಾಚರಣೆ ಸೋಮವಾರ ಜರುಗಿತು.
ಕರ್ನಾಟಕ ರಾಜ್ಯ ಏಡ್ಸ್ ಪ್ರಿಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಾಡಳಿತ ಮತ್ತು ಜಿಲ್ಲಾಾ ಪಂಚಾಯತ್ ರಾಯಚೂರು, ಜಿಲ್ಲಾಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆ ರಾಯಚೂರು, ಜಿಲ್ಲಾಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ರಾಯಚೂರು, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಲಿಂಗಸುಗೂರು ಮುದಗಲ್ ಐಸಿಟಿಸಿ ಕೇಂದ್ರ ಸುಮುದಾಯ ಆರೋಗ್ಯ ಕೇಂದ್ರ ಮುದಗಲ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿತು.
ಐಸಿಟಿಸಿ ಸಮಾಲೋಚಕಿ ರಾಜೇಶ್ವರಿ ಕುಲಕರ್ಣಿ ವಿದ್ಯಾಾರ್ಥಿಗಳಿಗೆ ಏಡ್ಸ ತಡೆಗಟ್ಟಲು ಪ್ರತಿಜ್ಞಾಾ ವಿಧಿ ಬೋಧನೆ ಮಾಡಿ ಮಾತನಾಡಿದರು. ವಿದ್ಯಾಾರ್ಥಿಗಳು ಏಡ್ಸ್ ಬಗ್ಗೆೆ ಭಯಪಡಬಾರದು, ರೋಗ ಬರದಂತೆ ಜಾಗೃತಿ ವಹಿಸಬೇಕು. ಏಡ್ಸ್ ರೋಗಿಗಳನ್ನು ಕೀಳಾಗಿ ಕಾಣಬೇಡಿ. ಸಾರ್ವಜನಿಕರಿಗೆ ಏಡ್ಸ್ ಬಗ್ಗೆೆ ಜಾಗೃತಿ ಮೂಡಿಸಬೇಕು. ಏಡ್ಸ್ ತಡೆಗಟ್ಟಲು ತಾವೆಲ್ಲರು ಸಹಕಾರ ನೀಡಬೇಕು ಎಂದು ಹೇಳಿದರು.
ಆರೋಗ್ಯ ಇಲಾಖೆ ಸಿಬ್ಬಂದಿ ಬಿ. ಶಾರದಾ, ಅನ್ನದಾನಗೌಡ ಪಾಟೀಲ್ ಬಯ್ಯಾಾಪೂರು ಸ್ಮಾಾರಕ ಪದವಿ ಪೂರ್ವ ಕಾಲೇಜ್ ಪ್ರಾಾಚಾರ್ಯ ಸೂಗರೆಡ್ಡಿಿ ಮೇಟಿ ಹಾಗೂ ಇತರರು ಇದ್ದರು.
ಮುದಗಲ್: ವಿಶ್ವ ಏಡ್ಸ್ ದಿನಾಚರಣೆ

