ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ. 8 : ನಂದಗುಡಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಮುನಿವೆಂಕಟಮ್ಮ ಬಚ್ಚಪ್ಪ, ಉಪಾಧ್ಯಕ್ಷರಾಗಿ ಮಜರ್ ಉನ್ನಿಸಾ ಅವಿರೋಧ ಆಯ್ಕೆಯಾಗಿದ್ದಾರೆ.
2ನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಎಸ್ಸಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಎಲ್ಲಾ ಸದಸ್ಯರು ಪರಸ್ಪರ ಚರ್ಚೆ ನಡೆಸಿ ಎಲ್ಲರ ಒಪ್ಪಿಗೆ ಮೇರೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆಂದು ಚುನಾವಣಾಧಿಕಾರಿ ರೇಖಾ ಘೋಷಿಸಿದರು.
ತಾಪಂ. ಮಾಜಿ ಅಧ್ಯಕ್ಷ ಬಿ.ವಿ. ರಾಜಶೇಖರಗೌಡ ಮಾತನಾಡಿ, ನೂತನವಾಗಿ ಅಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭಕೋರಿದರು. ಗ್ರಾಮ ಪಂಚಾಯಿತಿ ಮುಖೇನ ಜನತೆಗೆ ಮೂಲಭೂತ ಸೌಲಭ್ಯಗಳಾದ
ಕುಡಿಯುವ ನೀರು, ಚರಂಡಿ, ಬೀದಿ ದೀಪ ಸೇರಿದಂತೆ ಸಮರ್ಪಕವಾಗಿ ಸೇವೆ ಒದಗಿಸುವಲ್ಲಿ ಪಕ್ಷ ಬೇಧ ಮರೆತು ಪ್ರಾಮಾಣಿಕವಾಗಿ ಸೇವೆ ಮಾಡುವ ಮೂಲಕ ಮತದಾರರ ಋಣ ತೀರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಎನ್. ಧರ್ಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಸಗೀರ್ ಅಹಮದ್, ಟಿಎಪಿಸಿಎಂಎಸ್ ನಿರ್ದೇಶಕ ಆರ್. ರವೀಂದ್ರ, ನಾರಾಯಣಪ್ಪ. ತಾ.ಪಂನ ಮಾಜಿ ಅಧ್ಯಕ್ಷ ಕೆಂಚೇಗೌಡ, ಮಾಜಿ ಸದಸ್ಯ ಬೀರಪ್ಪ, ನೆಲವಾಗಿಲು ಎಸ್ಎಫ್ಸಿಎಸ್ ಅಧ್ಯಕ್ಷರಾದ ಎಸ್
ಮಂಜುನಾಥ್, ನಾರಾಯಣಪ್ಪ, ನಿರ್ದೇಶಕರಾದ ಎನ್.ಡಿ. ರಮೇಶ್, ಎ.ಆರ್. ಕೃಷ್ಣಪ್ಪ, ಮುಖಂಡರಾದ ಶಂಕರ್ನಾರಾಯಣ್, ಲಕ್ಷ್ಮೀನಾರಾಯಣ್, ಗ್ರಾ.ಪಂ ಸದಸ್ಯರಾದ ಮಂಜುಳ ನಾಗೇಶ್, ಗಾಯತ್ರಿ ನಾಗೇಶ್, ಶಾರದಮ್ಮ ಮೋಹನ್, ಕಮಲಶಿವು, ಚಂದ್ರಪ್ಪ, ಎನ್.ಎನ್. ಮಂಜುನಾಥ್, ವೀರರಾಜ್,
ಮುನೇಗೌಡ, ಚೇತನ್, ಶಿವಕುಮಾರ್, ನಾಗಮ್ಮ, ಸುನಿತಾ, ಜಯರಾಮ್, ನಾರಾಯಣಸ್ವಾಮಿ, ಅಯೂಬ್ಬೇಗ್, ಪಿಡಿಒ ಇಸಾಕ್ ಸಿಬ್ಬಂದಿ ವರ್ಗ ಹಾಗೂ ಮುಖಂಡರು ಹಾಜರಿದ್ದರು.