ಸಾಂಸ್ಕೃತಿಕ ರಕ್ಷಣೆಗೆ ಮುನ್ನೂರು ಕಾಪು ಸಮಾಜ ಮಾದರಿ- ನರಸಮ್ಮ ಮಾಡಿಗಿರಿ
ಸುದ್ದಿಮೂಲ ವಾರ್ತೆ ರಾಯಚೂರು, ಸೆ.24:
ಮುನ್ನೂರುಕಾಪು ಸಮಾಜದ 8 ದಿನಗಳ ನವರಾತ್ರಿಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಇಂದು ಭಾರೀ ಅದ್ದೂರಿಯಾಗಿ ಆರಂಭಗೊಂಡಿತು.
ಸೆ.24 ರಿಂದ ಅ.1 ವರೆಗೆ 8 ದಿನಗಳ ಕಾಲ ನಡೆಯುವ ಈ ನವರಾತ್ರಿಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಗದ್ವಾಾಲ್ ರಸ್ತೆೆಯಲ್ಲಿರುವ ಶ್ರೀಲಕ್ಷ್ಮಮ್ಮದೇವಿ ಮತ್ತು ಕಾಳಿಕಾಂಬ ದೇವಸ್ಥಾಾನದಲ್ಲಿ ಆಯೋಜಿಸಲಾಗಿತ್ತು. ನವರಾತ್ರಿಿ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ಅದ್ದೂರಿ ಮತ್ತು ವೈಭವೀಕರಣದಿಂದ ಆರಂಭಗೊಂಡಿತ್ತು.
ಮಹಾನಗರ ಪಾಲಿಕೆ ಮಹಾಪೌರರು ನರಸಮ್ಮ ನರಸಿಂಹಲು ಮಾಡಗಿರಿ ಅವರು ಮಾತನಾಡಿ,
ಮುನ್ನೂರುಕಾಪು ಸಮಾಜ ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ಪರಂಪರೆಯನ್ನು ಸಂರಕ್ಷಿಸುವುದರೊಂದಿಗೆ ಇಂದಿನ ಪೀಳಿಗೆಗೆ ಮುಂದುವರೆಸುವಲ್ಲಿ ಮಹತ್ವದ ಕಾರ್ಯನಿರ್ವಹಿಸುತ್ತಿಿದೆ. ಇವರ ಈ ಚಟುವಟಿಕೆಗಳು ಅತ್ಯಂತ ಶ್ಲಾಾಘನೀಯವಾಗಿದೆ. ಈ ರೀತಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುವ ಮೂಲಕ ಹಬ್ಬ ಹರಿದಿನಗಳನ್ನು ನಿರ್ವಹಿಸುವ ಅಗತ್ಯವಿದೆಂದರು.
ಮುನ್ನೂರು ಕಾಪು ಸಮಾಜದಿಂದ ಆಯೋಜಿಸುವ ಮುಂಗಾರು ಹಬ್ಬವನ್ನು ರೈತರ ಹಬ್ಬವನ್ನಾಾಗಿ ಆಚರಣೆ ಮಾಡುವುದರ ಮೂಲಕ ರಾಜ್ಯದ ಗಮನ ಸೆಳೆದು ರಾಜ್ಯದಲ್ಲೇ ಮುನ್ನೂರು ಕಾಪು ಮಾದರಿಯಾಗಿದೆ ಎಂದರು. ಪಾಪಾರೆಡ್ಡಿಿ ನೇತೃತ್ವದಲ್ಲಿ ಮುನ್ನೂರು ಕಾಪು ಸಮಾಜ ಮುಂಗಾರು ಹಬ್ಬಕ್ಕೆೆ ಮಾತ್ರ ಸೀಮಿತವಾಗದೆ ಹಿಂದೂ ಧರ್ಮದ ಜನಪ್ರಿಿಯ ಹಬ್ಬವಾದ ನವರಾತ್ರಿಿ ಉತ್ಸವವನ್ನು ಅತ್ಯಂತ ಅದ್ದೂರಿ ಮತ್ತು ವೈಭವೀಕರಣದಿಂದ ಆಚರಣೆ ಮಾಡುತ್ತಿಿದೆ ಅವರ ಸಾಮಾಜಿಕ ಕಾರ್ಯ ಶ್ಲಾಾಘನೀಯ ಎಂದರು.
ನವರಾತ್ರಿಿ ಹಬ್ಬದ 8 ದಿನಗಳಲ್ಲಿ ವಿವಿಧ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಿಸುವುದರ ಮೂಲಕ ರಾಯಚೂರು ಜನತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಸಿಕೊಳ್ಳುವಂತೆ ಮಾಡುವ ಕೀರ್ತಿ ಮುನ್ನೂರು ಕಾಪು ಸಮಾಜಕ್ಕೆೆ ಸಲ್ಲುತ್ತದೆ ಎಂದರು. ನಶಿಸಿ ಹೋಗುತ್ತಿಿರುವ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಣೆ ಮಾಡುವಲ್ಲಿ ಮುನ್ನೂರು ಕಾಪು ಸಮಾಜ ಮುಂಚೂಣಿಯಲ್ಲಿದೆ ಎಂದರು. ಮುನ್ನೂರು ಕಾಪು ಸಮಾಜ ಇತರೇ ಸಮಾಜಕ್ಕೆೆ ಮಾದರಿಯಾಗಿದೆ. ಎಲ್ಲ ರಂಗದಲ್ಲಿ ಮುನ್ನೂರು ಕಾಪು ಸಮಾಜ ಅಭಿವೃದ್ಧಿಿ ಹೊಂದಿದೆ ಎಂದು ಶ್ಲಾಾಘಿಸಿದರು.
ನಂತರ ನರಸಿಂಹಲು ಮಾಡಗಿರಿ ಅವರು ಮಾತನಾಡಿ, ಮುನ್ನೂರು ಕಾಪು ಸಮಾಜ ರಾಜ್ಯ ಸೇರಿ ಜಿಲ್ಲೆಯಲ್ಲಿ ಬಲಿಷ್ಠ ಸಮಾಜವಾಗಿ ಗುರುತಿಸಿಕೊಂಡಿದೆ.ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡ ಪಾಪಾರೆಡ್ಡಿಿ ಅವರ ನೇತೃತ್ವದಲ್ಲಿ ಮುನ್ನೂರು ಕಾಪು ಸಮಾಜ ಸಾಂಸ್ಕೃತಿಕ ರಾಯಭಾರಿಯಾಗಿ ಹೆಗ್ಗಳಿಕೆ ಪಡೆದುಕೊಂಡಿದೆ.
ಮೊದಲ ದಿನದ ಕಾರ್ಯಕ್ರಮದಲ್ಲಿ ಶಾಲಾ, ಕಾಲೇಜು ಮಕ್ಕಳು ಅತ್ಯಂತ ಅದ್ಭುತವಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ನವರಾತ್ರಿಿ ಉತ್ಸವದ ಧಾರ್ಮಿಕ ಚರಿತ್ರೆೆಯ ಕಥನಗಳೊಂದಿಗೆ ನೃತ್ಯರೂಪಕಗಳನ್ನು ಆಯೋಜಿಸಲಾಗಿತ್ತು. ನೃತ್ಯ ರೂಪಕಗಳು ಸಭಿಕರ ಗಮನ ಸೆಳೆಯಿತು. ಮಕ್ಕಳ ವೃತ್ತಕ್ಕೆೆ ಪ್ರೇೇಕ್ಷಕರು ಕರತಾಡನ ಮಾಡಿ, ಸಂತಸ ವ್ಯಕ್ತಪಡಿಸಿದರು. ಮೊದಲ ದಿನದ ಈ ಕಾರ್ಯಕ್ರಮ ಭಾರೀ ಜನಮನ್ನಣೆಗೆ ಸಾಕ್ಷಿಿಯಾಗಿತ್ತು.
ಉಪನ್ಯಾಾಸಕರಾಗಿ ಆಗಮಿಸಿದ ಸಾಹಿತಿ ಅಯ್ಯಪ್ಪ ಹುಡಾ ಅವರು ಮಾತನಾಡಿ, ಮುನ್ನೂರು ಕಾು ಸಮಾಜ ನವರಾತ್ರಿಿ ಉತ್ಸವಕ್ಕೆೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ.ಕಲಾವಿದರಿಗೆ ಮತ್ತು ಸಾಹಿತಿಗಳಿಗೆ ಪ್ರೋೋತ್ಸಾಾಹಿಸುವ ಮುನ್ನೂರು ಕಾಪು ಸಮಾಜದ ಜನಪ್ರಿಿಯವಾಗಿ ಶ್ರೀಮಂತಿಕೆ ಹೊಂದಿದೆ.ನವರಾತ್ರಿಿ ಉತ್ಸವದ ಬಗ್ಗೆೆ ವಿಸ್ತಾಾರವಾಗಿ ವಿವರಿಸಿದರು.
ಜಿ. ಶೇಖರ್ರೆಡ್ಡಿಿ ಅವರು ಕಾರ್ಯಕ್ರಮಕ್ಕೆೆ ಸ್ವಾಾಗತ ಕೋರಿದರು. ಈ ಸಂದರ್ಭದಲ್ಲಿ ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡ ಮಾಜಿ ಶಾಸಕ ಎ.ಪಾಪಾರೆಡ್ಡಿಿ, ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿಿ, ಉಟ್ಕೂರು ಕೃಷ್ಣಮೂರ್ತಿ, ಗದಾರ್,ಬೆಟ್ಟಪ್ಪ, ಕಡಗೋಳ್ ಆಂಜನೇಯ, ಬಂಗಿ ನರಸರೆಡ್ಡಿಿ,ಎನ್ ಶ್ರೀನಿವಾಸ್ ರೆಡ್ಡಿಿ, ಗುಡ್ಸಿಿ ಪ್ರತಾಪ್ ರೆಡ್ಡಿಿ, ನರಸಿಂಹಲು ಮಾಡಗಿರಿ, ಎಸ್. ಜನಾರ್ದನ ರೆಡ್ಡಿಿ, ಬಿ. ಶೇಖರ್ರೆಡ್ಡಿಿ, ಪುಂಡ್ಲ ರಾಜೇಂದ್ರರೆಡ್ಡಿಿ, ಮುನ್ನೂರು ಕಾಪು ಸಮಾಜದ ಮುಖಂಡರು ಸೇರಿದಂತೆ ಉಪಸ್ಥಿಿತರಿದ್ದರು.
ಮುನ್ನೂರುಕಾಪು ಸಮಾಜದ 8 ದಿನಗಳ ನವರಾತ್ರಿಿ ಸಾಂಸ್ಕೃತಿಕ ಉತ್ಸವ ಅದ್ದೂರಿ ಆರಂಭ ಸಾಂಸ್ಕೃತಿಕ ರಕ್ಷಣೆಗೆ ಮುನ್ನೂರು ಕಾಪು ಸಮಾಜ ಮಾದರಿ- ನರಸಮ್ಮ ಮಾಡಿಗಿರಿ

