ಸುದ್ದಿಮೂಲ ವಾರ್ತೆ
ಆನೇಕಲ್, ಆ. 1 : ಕಳೆದ ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುವಾಗ ವ್ಯಕ್ತಿಯನ್ನು ಡ್ರ್ಯಾಗನ್ ನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.
ಆನೇಕಲ್ ತಾಲೂಕಿನ ವನಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇನೇಸಿಗನಹಳ್ಳಿ ಗ್ರಾಮದ ಜಯರಾಮ್ ಮತ್ತು ಪಾರಿಜಾತ ದಂಪತಿಗಳ ಪುತ್ರ ಹೇಮಂತ್ ಕುಮಾರ್ ಕೊಲೆಯಾದವನು.
ಕಳೆದ ರಾತ್ರಿ ಮೃತ ಹೇಮಂತ್ ಕುಮಾರ್ ಅತ್ತಿಬೆಲೆಯಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ಮನೆಗೆ ಟೈಲ್ಸ್ ತರಲು ಆನೇಕಲ್ ನಿಂದ ದೊಮ್ಮಸಂದ್ರ ಕಡೆಗೆ ಬರುವಾಗ ಕಾರ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಏಕಾಏಕಿ ಹೇಮಂತ್ ಮೇಲೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಮಾಡಿ ಮಾರಕಸ್ತ್ರಗಳಿಂದ 15 ಬಾರಿ ಚುಚ್ಚಿ ಕೊಲೆ ಮಾಡಿದ್ದಾರೆ. ಸುತ್ತಮುತ್ತಲು ಇದ್ದ ರೈತರು ಕೊಲೆಯನ್ನು ಕಣ್ಣಾರೆ ಕಂಡು ಬೆಚ್ಚಿಬಿದ್ದಿದ್ದಾರೆ.
ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ್ ಬಾಲದಂಡಿ ಹಾಗೂ ತಂಡ ಕೊಲೆಯಾದ ವ್ಯಕ್ತಿಯ ಮನೆಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.