ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಮಾ.25: ನಗರದ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಹೂವಿನ ಕರಗ ಮಹೋತ್ಸವದ ಪ್ರಯುಕ್ತವಾಗಿ ಮೋದಿ ಬ್ರಿಗೇಡ್ ಹಾಗೂ ಬಜರಂಗದಳ ವತಿಯಿಂದ ನಗರದ ಕೆ ಎಸ್ ಆರ್ ಟಿ ಸಿ ಬಸ್ ಸ್ಟಾಂಡ್ ಮುಂಭಾಗದಲ್ಲಿ ಕಾವ್ಯ ಮೆಲೋಡಿಸ್ ವಾದ್ಯಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಈ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರಿಗೆ ಶಾಲು ಒದಿಸಿ ಹಾರ ಹಾಕಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಶಿಡ್ಲಘಟ್ಟ ತಾಲ್ಲೂಕು ಬಜರಂಗದಳ ಸಂಯೋಜಕರಾದ ವೆಂಕಟೇಶ್.ಡಿ ರವರ ನೇತೃತ್ವದಲ್ಲಿ ಕಾವ್ಯ ಮೆಲೋಡಿಸ್ ವಾದ್ಯಗೋಷ್ಠಿ ಹಾಗೂ ಸುಮಾರು 5000 ಜನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಸಹ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡರಾದ ಎನ್.ದೇವರಾಜ್ ರವರು ಇವತ್ತು ಮೋದಿ ಬ್ರಿಗೇಡ್ ಹಾಗೂ ಬಜರಂಗದಳ ಈ ಕಾರ್ಯಕ್ರಮವನ್ನು ಸತತವಾಗಿ ಆರು ಏಳು ವರ್ಷಗಳಿಂದ ನಡೆಸಿಕೊಂಡು ಬಂದಿರುತ್ತಾರೆ. ಇವತ್ತಿನ ದಿನಗಳಲ್ಲಿ ರಾಜಕೀಯ ಮುಖಂಡರು ಚುನಾವಣೆ ಬಂದಾಗ ಕಾರ್ಯಕ್ರಮಗಳು ಹಾಗು ಮಹೋತ್ಸವಗಳ ಮಾಡುತ್ತಾರೆ. ಆದರೆ, ಮೋದಿ ಬ್ರಿಗೇಡ್ ರವರು ಆ ರೀತಿ ಮಾಡಿಲ್ಲ. ಸತತವಾಗಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿರುತ್ತಾರೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ಮೇಲೂರು ಅನಿಲ್, ಶೋರೂಮ್ ದೇವರಾಜ್, ನಗರಸಭಾ ಸದಸ್ಯ ನಾರಾಯಣಸ್ವಾಮಿ,ಎನ್.ಕೃಷ್ಣಮೂರ್ತಿ, ಯುವ ಮುಖಂಡರಾದ ಆಪಲ್ ಹರೀಶ್, ರಂಜಿತ್ ರೈನಾ, ಪ್ರಜ್ವಲ್, ತೇಜ್, ಜಯಂತ್, ದಿವಾಕರ್, ಮರಳಿ,ಆನಂದ್,ನಾರಾಯಣಸ್ವಾಮಿ ಹಾಗೂ ಇನ್ನು ಮುಂತಾದವರು ಹಾಜರಿದ್ದರು.