ಅಮರೇಶ ಪತ್ತಾಾರ ಮಸ್ಕಿಿ, ಅ.15:
ನಗರದಲ್ಲಿರುವ ಸರ್ಕಾರಿ ತರಬೇತಿ ಸಂಸ್ಥೆೆಯನ್ನು ಸ್ಥಳದ ಅಭಾವದಿಂದಾಗಿ ಹಾಲಾಪುರ ಗ್ರಾಾಮಕ್ಕೆೆ ಸ್ಥಳಾಂತರ ಮಾಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಧರಿಸಿದ್ದಾಾರೆ. ಆದರೆ, ಇದಕ್ಕೆೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದಿಂದ 10 ರಿಂದ12 ಕಿ.ಮೀ ದೂರದಲ್ಲಿರುವ ಹಾಲಾಪುರ ಗ್ರಾಾಮಕ್ಕೆೆ ಕೈಗಾರಿಕಾ ತರಬೇತಿ ಸಂಸ್ಥೆೆಯ ವರ್ಗಾವಣೆಯು ಅವೈಜ್ಞಾನಿಕವಾಗಿದ್ದು, ಆ ಸ್ಥಳಕ್ಕೆೆ ಸರಿಯಾದ ಸಮಯಕ್ಕೆೆ ಹಾಗೂ ಸಮರ್ಪಕವಾದ ಸಾರಿಗೆ ಸೌಲಭ್ಯವೂ ಇಲ್ಲ. ಇದರಿಂದ ವಿದ್ಯಾಾರ್ಥಿಗಳಿಗೆ ಅನಾನುಕೂಲವಾಗಲಿದೆ ಎಂದು ಜನರು ಆರೋಪಿಸಿದ್ದಾರೆ.
ಮಸ್ಕಿಿ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆೆಗೆ ಸ್ವಂತ ಕಟ್ಟಡ ಇಲ್ಲ. ಹಾಗಾಗಿ ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜ್ ನಾಲ್ಕು ಕೊಠಡಿಯಲ್ಲಿ ವಿದ್ಯಾಾರ್ಥಿಗಳು ಕಲಿಯುತ್ತಿಿದ್ದಾರೆ. ಮಸ್ಕಿಿ ನೂತನ ತಾಲೂಕು ಇರುವುದರಿಂದ ನಗರಕ್ಕೆೆ ವಿವಿಧ ಭಾಗಗಳಿಂದ ಸಾರಿಗೆ ಸಂಪರ್ಕವಿರುವ ಕಾರಣ ಇಲ್ಲಿ ಕಲಿಯುತ್ತಿಿರುವ ವಿದ್ಯಾಾರ್ಥಿಗಳಿಗೆ ಯಾವುದೇ ಸಮಸ್ಯೆೆ ಇಲ್ಲ. ಆದರೆ, ಸಂಸ್ಥೆೆಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಮಸ್ಕಿಿ ನಗರದಿಂದ ದೂರದ ಹಾಲಾಪುರ ಗ್ರಾಾಮದ ಹತ್ತಿಿರ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಆದರೆ, ಇಲ್ಲಿಗೆ ತೆರಳಲು ಸಾರಿಗೆ ಸೌಲಭ್ಯ ವ್ಯವಸ್ಥೆೆ ಇಲ್ಲ. ಇದರಿಂದ ವಿದ್ಯಾಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ವಿದ್ಯಾಾರ್ಥಿಗಳು ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಸ್ಕಿಿ ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಕೈಗಾರಿಕಾ ಸಂಸ್ಥೆೆಯಲ್ಲಿ ಫಿಟ್ಟರ್, ಎಲೆಕ್ಟ್ರಿಿಷಿಯನ್ ಸೇರಿದಂತೆ ಎಲ್ಲ ವಿಭಾಗದ ತರಬೇತಿ 80 ವಿದ್ಯಾಾರ್ಥಿಗಳು ತರಬೇತಿ ಪಡೆಯುತ್ತಿಿದ್ದಾರೆ. ಈ ಎಲ್ಲ ವಿದ್ಯಾಾರ್ಥಿಗಳು ಮಸ್ಕಿಿ ನಗರದಲ್ಲಿರುವ ಐಟಿಐ ಕಾಲೇಜಿನಲ್ಲೇ ತಮ್ಮ ಸಂಪೂರ್ಣ ವಿದ್ಯಾಾಭ್ಯಾಾಸ ಪೂರ್ಣಗೊಳಿಸುವ ಆಕಾಂಕ್ಷೆಯಲ್ಲಿದ್ದರು.
ಇತ್ತೀಚೆಗೆ ಹಾಲಾಪುರ ಗ್ರಾಾಮದ ಹತ್ತಿಿರ ಐಟಿಐ ಕಾಲೇಜು ಸ್ಥಳಾಂತರ ಮಾಡುತ್ತಿಿರುವುದಕ್ಕೆೆ ಬಹುತೇಕ ವಿದ್ಯಾಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ತಾಲ್ಲೂಕಿನ 15ವರ್ಷಗಳಿಂದಲೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆೆ ಕಾರ್ಯ ನಿರ್ವಹಿಸುತ್ತಿಿದೆ. ಹೀಗಿರುವಾಗ ನಗರದ ಕೈಗಾರಿಕಾ ತರಬೇತಿ ಸಂಸ್ಥೆೆಯನ್ನೂ ಅಲ್ಲಿಗೇ ವರ್ಗಾಯಿಸುತ್ತಿಿರುವುದು ಅವೈಜ್ಞಾನಿಕ ಎಂಬುದು ವಿದ್ಯಾಾರ್ಥಿಗಳ ವಾದ.
ತಾಲ್ಲೂಕಿನ ಬಳಗಾನೂರು, ಗುಡದೂರು, ಮೆದಿಕಿನಾಳ ಪಾಮನ ಕಲ್ಲೂರ, ಸಂತೆಕಲ್ಲೂರ, ಮತ್ತಿಿತರರ ಹೋಬಳಿ ಹಾಗೂ ತಾಲೂಕಿನ ವಿವಿಧ ಗ್ರಾಾಮಗಳಿಂದ ಬರುವ ವಿದ್ಯಾಾರ್ಥಿಗಳಿಗೆ ತೊಂದರೆಯಾಗಲಿದೆ. ಅಲ್ಲದೆ, ಐಟಿಐ ಕಾಲೇಜು ಹಾಲಾಪುರ ಗ್ರಾಾಮಕ್ಕೆೆ ಸ್ಥಳಾಂತರಗೊಂಡಲ್ಲಿ ಪ್ರತಿನಿತ್ಯ ವಿದ್ಯಾಾರ್ಥಿಗಳು ಎರಡು ಬಸ್ ಬದಲಿಸಬೇಕಿದೆ ಎಂದು ವಿದ್ಯಾಾರ್ಥಿಗಳು ದೂರಿದರು.
ಮಸ್ಕಿಿ ನಗರದ ಸರ್ಕಾರಿ ಕೈಗಾರಿಕಾ ಸಂಸ್ಥೆೆಯನ್ನು ನಗರದಲ್ಲೇ ಉಳಿಸಿಕೊಳ್ಳಬೇಕು.
-ಪ್ರಭಾಕರ ಮಸ್ಕಿಿ ,ವಿದ್ಯಾಾರ್ಥಿ ಪೋಷಕರು ಮಸ್ಕಿಿ .
ನಗರಕ್ಕೆೆ ದಿನ ಪೂರ್ತಿ ಸಾರಿಗೆ ಸೌಲಭ್ಯವಿದೆ ಎಂಬ ಕಾರಣಕ್ಕೆೆ ನಗರದ ಸರ್ಕಾರಿ ಕೈಗಾರಿಕಾ ಸಂಸ್ಥೆೆಯಲ್ಲಿ ವಿಧ್ಯಾಾಭ್ಯಾಾಸ ಮಾಡುತ್ತಿಿದ್ದೇವೆ. ಕಾಲೇಜು ಸ್ಥಳಾಂತರಗೊಂಡರೆ ವೆಚ್ಚಗಳು ಹೆಚ್ಚಲಿದೆ
-ಹೆಸರು ಹೇಳಲು ಇಚ್ಛಿಿಸದ ವಿದ್ಯಾಾರ್ಥಿ
ಐಟಿಐ ಕಾಲೇಜು ಸ್ಥಳಾಂತರ ಅವೈಜ್ಞಾನಿಕ ಮಸ್ಕಿಿ ನಗರದ ಅತಿಹೆಚ್ಚು ಜನಸಂಖ್ಯೆೆ ವ್ಯಾಾಪಾರ ವಹಿವಾಟು ಮತ್ತು ಜನದಟ್ಟಣೆ ಹೊಂದಿದ ತಾಲೂಕು ಕೇಂದ್ರವಾಗಿದೆ. ಹೀಗಾಗಿ ಹಾಲಾಪುರ ಗ್ರಾಾಮಕ್ಕೆೆ ಸ್ಥಳಾಂತರಿಸಲು ಇಲ್ಲಿನ ಶಾಸಕರು ಹಾಗೂ ಅಧಿಕಾರಿಗಳು ಮುಂದಾಗಿರುವದು ಸರಿಯಲ್ಲ ಒಂದು ವೇಳೆ ಮಸ್ಕಿಿಯಿಂದ ಹಾಲಾಪುರ ಗ್ರಾಾಮಕ್ಕೆೆ ಐಟಿಐ ಕಾಲೇಜ್ ಸ್ಥಳಾಂತರ ಮಾಡಿದರೆ ನಮ್ಮ ಸಂಘಟನೆಯಿಂದ ಉಗ್ರ ಹೋರಾಟ ಹಮ್ಮಿಿಕೊಳ್ಳಲಾಗುವುದು .
-ಸುರೇಶ್ ಕಟ್ಟಿಿಮನಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಅಧ್ಯಕ್ಷ ಎಚ್ಚರಿಸಿದ್ದಾರೆ.