ಸುದ್ದಿಮೂಲ ವಾರ್ತೆ ಮಸ್ಕಿ, ಜ.07:
ಲೋಕಾಯುಕ್ತ ಅಧಿಕಾರಿಗಳಿಂದ ಬುದುವಾರ ಪುರಸಭೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು, ಖಾತಾ, ಮುಟೇಷನ್, ಕುಡಿಯುವ ನೀರಿನ ಸಂಪರ್ಕ್ಙ ಸೇರಿದಂತೆ ಸಾರ್ವಜನಿಕರ ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ಮಾಹಿತಿ ಪಡೆದರು. ಪುರಸಭೆ ಕಚೇರಿಯಲ್ಲಿ ಜನರು ನೀಡುವ ದೂರುಗಳು, ಅರ್ಜಿಗಳು ಬಗ್ಗೆೆ ಪರಿಶೀಲನೆ ಮಾಡಿ ಪ್ರಶ್ನಿಿಸಿದರು.
ಕುಡಿಯುವ ನೀರು ಹಾಗೂ ಬೀದಿ ದೀಪಗಳ ನಿರ್ವಹಣೆ ಹಾಗೂ ಕಂದಾಯ ಸಂಗ್ರಹದ ಕುರಿತಾಗಿ ಇಲಾಖೆ ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ನಿತ್ಯದ ಕೆಲಸಗಳಿಗೆ ಕಚೇರಿಗೆ ಅಲೆಯದಂತೆ ನೋಡಿಕೋಬೇಕು.ಲೋಪ ಕಂಡು ಬಂದರೆ ಕ್ರಮಕ್ಕೆೆ ಶಿಾರಸ್ಸು ಮಾಡುವುದಾಗಿಯೂ ಎಚ್ಚರಿಸಿದರು. ಪುರಸಭೆ ವಿವಿಧ ವಿಭಾಗಗಳಲ್ಲಿ ಕಡತಗಳ ಮಾಹಿತಿ ನೀಡುವಂತೆ ಸೂಚಿಸಿದರು.
ಈ ವೇಳೆ ಪುರಸಭೆ ಮುಖ್ಯಾಾಧಿಕಾರಿ ಕೊಠಡಿಯಲ್ಲಿ ಕಸ ಇರುವುದು ಕಂಡು ಕಚೇರಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದವರು, ಪಟ್ಟಣವನ್ನು ಯಾವ ರೀತಿ ಸ್ವಚ್ಛತೆ ಇಟ್ಟುಕೊಳ್ಳುತ್ತೀರಿ ಎಂದು ಗರಂ ಆದರು ಹಾಗೂ ಆರ್ ಓ ಪ್ಲಾಾಂಟ್ ದುರಸ್ತಿಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಹಾಗೂ ಸಾರ್ವಜನಿಕರಿಂದ ರಸ್ತೆೆಯಲ್ಲಿ ಕಸ ಆಗಿದ್ದರೆ ಅವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಬೇಕು ಎಂದುರು.
ನಂತರ ಪಟ್ಟಣದ ಸರ್ಕಾರಿ ಪ್ರಾಾಥಮಿಕ ಆರೋಗ್ಯ ಕೇಂದ್ರಕ್ಕೆೆ ಭೇಟಿ ನೀಡಿ, ಔಷಧಿ ಉಗ್ರಾಾಣ, ಆಪರೇಷನ್ ಕೋಣೆ, ಹೆರಿಗೆ ಕೋಣೆ, ಔಷಧ ವಿತರಕರ ಕೋಣೆ, ಲಸಿಕೆ ವಿತರಣೆ ಕೋಣೆ, ಪ್ರಥಮ ಚಿಕಿತ್ಸೆೆ ಕೋಣೆ, ಸಾಮಾನ್ಯ ವಾರ್ಡ್ಗಳು, ಪ್ರಯೋಗಾಲಯ, ಕಾರ್ಯಾಲಯ ಭೇಟಿ ನೀಡಿ ಪರೀಶೀಲಿಸಿದರು ನಂತರ ಸಿಬ್ಬಂದಿಗಳ ಹುದ್ದೆ, ನೇಮಕ, ಕರ್ತವ್ಯ, ಬ್ಯಾಾಂಕ್ ಖಾತೆ, ವ್ಯಹಹಾರ ಮಾಹಿತಿ ಸಂಗ್ರಹಿಸಿ ಪರಿಶೀಲಿಸಿದರು. ರೈತರಿಗೆ, ಸಾರ್ವಜನಿಕರಿಗೆ ಹಾವುಕಡಿತ, ನಾಯಿ ಮತ್ತು ಕೋತಿ ಕಡಿತ ತುರ್ತು ಚಿಕಿತ್ಸೆೆ ನೀಡುವ ಔಷದಿ ಮತ್ತು ಇತರೆ ಲಸಿಕೆಗಳ ಸಂಗ್ರಹ ಕುರಿತು ಮಾಹಿತಿ ಸಂಗ್ರಹಿಸಿದರು ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಚಿಕಿತ್ಸೆೆ ನೀಡುವುದು ಸೇರಿ ಇತರೆ ಕಾಯಿಲೆಗಳ ಚಿಕಿತ್ಸೆೆ ಕುರಿತು ಮಾಹಿತಿ ಪಡೆದರು. ಕೇಂದ್ರಕ್ಕೆೆ ಚಿಕಿತ್ಸೆೆಗೆ ಆಗಮಿಸಿದ ರೋಗಿಗಳಿಂದ ವೈದ್ಯಾಾಧಿಕಾರಿಗಳ ಮತ್ತು ಸಿಬ್ಬಂದಿಗಳ ಸೇವೆ ಕರ್ತವ್ಯ ನಿಷ್ಠೆೆಯ ಬಗ್ಗೆೆ ಮಾಹಿತಿ ಹಾಗೂ ಆಸ್ಪತ್ರೆೆಯ ಸುತ್ತಮುತ್ತಲಿನ ಸ್ವಚ್ಛತೆ ಸೇರಿದಂತೆ ಅನೇಕ ಮಾಹಿತಿಗಳನ್ನು ಪಡೆದರು.
ಡಿ ವೈ ಎಸ್ ಪಿ ಮಧುಸೂದನ್, ಇನ್ಸ್ಪೆಕ್ಟರ್ ರಾಮಣ್ಣ ಸವಳಿಗಿ ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು.
ಮಸ್ಕಿ: ಲೋಕಾಯುಕ್ತ ಅಧಿಕಾರಿಗಳಿಂದ ಪುರಸಭೆ, ಆಸ್ಪತ್ರೆಗೆ ಭೇಟಿ, ಪರಿಶೀಲನೆ

