ಸುದ್ದಿಮೂಲ ವಾರ್ತೆ ಮಸ್ಕಿ, ಜ.13:
ಪಟ್ಟಣದ ಸರ್ಕಾರಿ ಕೇಂದ್ರ ಪ್ರಾಾಥಮಿಕ ಶಾಲಾ ಕೊಠಡಿಗಳ ನಿರ್ಮಾಣಕ್ಕಾಾಗಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಮಂಗಳವಾರ ಭೂಮಿಪೂಜೆ ಮತ್ತು ಬಾಲಕಿಯರ ನೂತನ ಕಾಲೇಜ್ ಕೊಠಡಿ ಉದ್ಘಾಾಟಿಸಿದರು.
2025-26ನೇ ಸಾಲಿನ ಕೆಕೆಆರ್ಡಿಬಿ ಯೋಜನೆ ಅಡಿ 41 ಲಕ್ಷ ವೆಚ್ಚದಲ್ಲಿ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳ ಅನುಕೂಲಕ್ಕಾಾಗಿ 3 ಶಾಲಾ ಕೊಠಡಿಗಳ ನಿರ್ಮಿಸಲಾಗುವುದು ಎಂದರು.ಮಸ್ಕಿಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ 1.58 ಲಕ್ಷದ ವೆಚ್ಚದಲ್ಲಿ ನಬಾರ್ಡ್ ಆರ್ಐಡಿಎ್ ವತಿಯಿಂದ ನೂತನವಾಗಿ ನಿರ್ಮಾಣವಾಗಿರುವ 2ಕೊಠಡಿ, 2 ಪ್ರಯೋಗಾಲಯ ಕೊಠಡಿ, ಹೈಟೆಕ್ ಶೌಚಾಲಯ ಉದ್ಘಾಾಟನೆ ಮಾಡಿ ಅವರು ಮಾತನಾಡಿ, ಮುಖ್ಯಮಂತ್ರಿಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶಿಕ್ಷಣಕ್ಕೆೆ ಆದ್ಯತೆ ನೀಡುತ್ತಿಿದ್ದು, ಕಾಲೇಜಿಗೆ ಅಗತ್ಯವಾಗಿರುವ ಕೊಠಡಿಗಳನ್ನು ಅನುಕೂಲ ಮಾಡಿಕೊಡಲಾಗಿದೆ. ಈ ಕಾಲೇಜಿನಲ್ಲಿ ವ್ಯಾಾಸಂಗ ಮಾಡುತ್ತಿಿರುವ ವಿದ್ಯಾಾರ್ಥಿಗಳಿಗೆ ಆನೇಕ ಸವಲತ್ತುಗಳನ್ನು ಸರ್ಕಾರ ನೀಡುತ್ತಿಿದೆ. ಅದರ ಸದುಪಯೋಗ ಪಡೆದು ಉತ್ತಮ ವ್ಯಾಾಸಂಗ ಮಾಡಿ ಎಂದು ಹಾರೈಸಿದರು.
ಈ ವೇಳೆ ಆನಂದ ವೀರಾಪುರ, ಬಿ ಜಿ ನಾಯಕ, ಎಂ ಅಮರೇಶ, ಕೃಷ್ಣ ಡಿ ಚಿಗರಿ, ಆಂದಾನಪ್ಪ ಗುಂಡಳ್ಳಿಿ, ಕರಿಗೌಡ ಗುಡದೂರು, ನೀಲಕಂಠಪ್ಪ ಗೋನಾಳ, ಕಾಸಿಮಪ್ಪ ಮುರಾರಿ, ವೆಂಕಟೇಶ್ ಮತ್ತು ಕಾಂಗ್ರೆೆಸ್ ಮುಖಂಡರು, ಕಾರ್ಯಕರ್ತರು ಅಧಿಕಾರಿಗಳು, ಉಪನ್ಯಾಾಸಕರು, ಶಿಕ್ಷಕರು ಉಪಸ್ಥಿಿತರಿದ್ದರು.
ಮಸ್ಕಿ : ಶಾಸಕರಿಂದ ಬಾಲಕಿಯರ ಕಾಲೇಜ್ ನೂತನ ಕೊಠಡಿ ಉದ್ಘಾಟನೆ

