ಸುದ್ದಿಮೂಲ ವಾರ್ತೆ ಮಸ್ಕಿ, ಜ.18:
ಮಸ್ಕಿಿ ತಾಲೂಕು ಮಟ್ಟದ ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನದ ಪ್ರಗತಿ ಪರಿಶೀಲನೆ ಸಭೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರುಗಿತು.
ಅನುಷ್ಠಾಾನದ ಅಧ್ಯಕ್ಷ ಮಹಿಬೂಬ್ ಸಾಬ್ ಮುದ್ದಾಪುರ ಅವರು ಮಾತನಾಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸಲೂ ಸಹ ಹಿಂದೇಟು ಹಾಕುವಂತಹ ವ್ಯವಸ್ಥೆೆ ಆಗಿನ ಕಾಲದಲ್ಲಿತ್ತು.ಈ ನಿಟ್ಟಿಿನಲ್ಲಿ ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ, ಲಿಂಗ ಅಸಮಾನತೆ ಮತ್ತು ಶೈಕ್ಷಣಿಕ ಅಸಮಾನತೆ ವ್ಯವಸ್ಥೆೆಯನ್ನು ಹೋಗಲಾಡಿಸಲು ಮತ್ತು ಉತ್ತಮ ಗುಣಮಟ್ಟದ ಜೀವನ ನಡೆಸಲು ಸರ್ಕಾರ ಹತ್ತು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅಷ್ಟೇ ಅಲ್ಲದೆ ಗ್ರಾಾಮೀಣ ಮಟ್ಟದಲ್ಲಿ ಇನ್ನೂ ಅಭಿವೃದ್ಧಿಿ ತರುವ ನಿಟ್ಟಿಿನಲ್ಲಿ ಗ್ಯಾಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.ಪ್ರತಿ ಮನೆಮನೆಗೂ ಜನಪರ ಯೋಜನೆಯಂತಹ ಪಂಚಗ್ಯಾಾರಂಟಿ ಯೋಜನೆಗಳು ಬಡಜನರನ್ನು ಆರ್ಥಿಕವಾಗಿ ಸಬಲೀಕರಿಸುವ ಉದ್ದೇಶ ಹೊಂದಿವೆ. ಅರ್ಹ ಲಾನುಭವಿಗಳಿಗೆ ಸೌಲಭ್ಯ ಒದಗಿಸುವಲ್ಲಿ ವಿಳಂಬ ಆಗಬಾರದು ಎಂದರು.
ಯೋಜನೆಯ ಶೇ 100 ಪ್ರಗತಿ ಸಾಧನೆಗೆ ಎಲ್ಲಾಾ ಅಧಿಕಾರಿಗಳು ಮತ್ತು ಸಮಿತಿ ಸದಸ್ಯರ ಸಹಕಾರ ಅತ್ಯಗತ್ಯ. ಸರ್ಕಾರದ ಸೌಲಭ್ಯಗಳಿಂದ ಅರ್ಹರು ಯಾರೂ ವಂಚಿತರಾಗಬಾರದು.ಉದ್ಯೋೋಗಾಧಿಕಾರಿಗಳು ಯುವನಿಧಿ ಯೋಜನೆಗೆ ಹೆಚ್ಚು ಗಮನ ಹರಿಸಬೇಕು ಎಂದು ಸೂಚಿಸಿದರು.
ಕೆಲವು ಕಡೆಗಳಲ್ಲಿ ಪಡಿತರ ಪಡೆಯಲು ಜನರು ಅಕ್ಕಪಕ್ಕದ ಗ್ರಾಾಮದಿಂದ ಬರಬೇಕಿದೆ. ಆಯಾ ಗ್ರಾಾಮಗಳಿಗೆ ಪಡಿತರ ಸರಬರಾಜು ಮಾಡುವ ಬಗ್ಗೆೆ ಕ್ರಮ ಕೈಗೊಳ್ಳುವ ಬಗ್ಗೆೆ ಸದಸ್ಯರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಪಡಿತರ ಚೀಟಿ ರದ್ದು ಮಾಡುತ್ತಿಿಲ್ಲ. ಆದಾಯ ಅಧಿಕವಿರುವ ಹಾಗೂ 7 ಎಕರೆ ಮೇಲ್ಪಟ್ಟು ಭೂಮಿ ಹೊಂದಿರುವ ರೈತರ ಕುಟುಂಬಗಳ ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸಲಾಗುತ್ತಿಿದೆ. 3 ಕಿ.ಮೀ ವ್ಯಾಾಪ್ತಿಿಯ ನ್ಯಾಾಯಬೆಲೆ ಅಂಗಡಿಗಳಲ್ಲಿ ಕಾರ್ಡ್ ದಾರರು ಆಹಾರ ಸಾಗ್ರಿಿಗಳನ್ನು ಪಡೆಯಬೇಕು. ಒಂದು ಗ್ರಾಾಮದಲ್ಲಿ 180ಕ್ಕೂ ಅಧಿಕ ಕಾರ್ಡ್ದಾರರ ಕುಟುಂಬಗಳಿವೆ. ಅಂತಹ ಗ್ರಾಾಮಗಳ ಇನ್ನೊೊಂದು ನ್ಯಾಾಯಬೆಲೆ ಅಂಗಡಿ ಆಹಾರ ಧಾನ್ಯಗಳು ವಿತರಿಸಲು ಜಿಲ್ಲಾಧಿಕಾರಿಗಳು ಪರವಾನಿಗೆ ನೀಡಬೇಕಾಗುತ್ತದೆ ಎಂದು ಸಿಂಧನೂರು ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದರು.ಈ ವಿಷಯವನ್ನು ಕಾರ್ಡ್ದಾರರಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದರು.
ಮುದ್ದಾಪುರು ಗ್ರಾಾಮಕ್ಕೆೆ ಪ್ರತಿಯೊಂದು ಬಸ್ ನಿಲುಗಡೆಗೆ ಅನುಕೂಲ ಮಾಡಿಕೊಡಬೇಕು, ತಲೆಕಾನ್ ಗ್ರಾಾಮಕ್ಕೆೆ ಮೆದಿಕಿನಾಳ ಮೂಲಕ ಮತ್ತು ಗೋನಾಳ ಗ್ರಾಾಮಕ್ಕೆೆ ಸರಕಾರಿ ಬಸ್ ಸೇವೆ ಒದಗಿಸಿಕೊಡುವುದರ ಬಗ್ಗೆೆ ಸದಸ್ಯರು ಚರ್ಚಿಸಿದರು.
ಶಕ್ತಿಿ ಯೋಜನೆ ವ್ಯಾಾಪಕ ಪ್ರಚಾರ ಮತ್ತು ಮಾಹಿತಿ ನೀಡಲು ಸೂಚಿಸಿ, ಪ್ರತಿ ಬಸ್ ನಲ್ಲಿ ಮಹಿಳೆಯರು ಪ್ರಯಾಣ ಮಾಡಲು ದಾಖಲಾತಿಗಳ ಬಗ್ಗೆೆ ಕರ ಪತ್ರ ಗಳು ಹಾಗೂ ಬಸ್ಸ್ ನಿಲ್ದಾಾಣದ ಹತ್ತಿಿರ ಬ್ಯಾಾನರ್ ಅಳವಡಿಸಲೂ ತಿಳಿಸಿದರು.
ಗೃಹಜ್ಯೋೋತಿ ಯೋಜನೆಯಡಿ ಸೌಲಭ್ಯವನ್ನು ಎಲ್ಲ ಅರ್ಹ ಗ್ರಾಾಹಕರಿಗೆ ಸಮರ್ಪಕವಾಗಿ ತಲುಪಿಸಬೇಕು. ಈ ನಿಟ್ಟಿಿನಲ್ಲಿ ಜೆಸ್ಕಾಾಂ ಅಧಿಕಾರಿ ಹಾಗೂ ಸಿಬ್ಬಂದಿ ಸೂಕ್ತ ಕ್ರಮಕೈಗೊಳ್ಳಬೇಕು. ರೈತರ ಭೂಮಿಯಲ್ಲಿ ಕಂಬ ಅಳವಡಿಸುವ ಸಂದರ್ಭದಲ್ಲಿ ಬದುವಿನಲ್ಲಿ ಕಂಬ ಬರುವಂತೆ ಕ್ರಮ ವಹಿಸಬೇಕು ಹಾಗೂ ವಿದ್ಯುತ್ ಪರಿವರ್ತಕ ನೀಡಬೇಕಾದರೆ ರೈತರಿಂದ ಹಣ ವಸೂಲಿ ಮಾಡಬಾರದು, ತಕ್ಷಣವೇ ವಿದ್ಯುತ್ ಪರಿವರ್ತಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.
ಜೆಸ್ಕಾಾಂ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಿ ಇಲಾಖೆ, ಆಹಾರ ಇಲಾಖೆ, ಕರ್ನಾಟಕ ರಾಜ್ಯ ರಸ್ತೆೆ ಸಾರಿಗೆ ನಿಗಮ ಮತ್ತು ಗೃಹಜ್ಯೋೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿಿ ಹಾಗೂ ಯುವನಿಧಿ ಯೋಜನೆಗಳಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಮತ್ತು ಸವಲತ್ತು ಪಡೆದ ಲಾನುಭವಿಗಳ ಸಂಖ್ಯೆೆಯನ್ನು ಪರಿಶೀಲಿಸಲಾಯಿತು.
ಈ ಸಂದರ್ಭದಲ್ಲಿ ಸೋಮನಗೌಡ ಪಾಟೀಲ್ ತಾ ಪಂ ಸ ನಿರ್ದೇಶಕರು (ಪಂಚಾಯತ್ ರಾಜ್) ತಾಲೂಕು ಮಟ್ಟದ ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಸಮಿತಿಯ ಸರ್ವ ಸದಸ್ಯರು, ತಾಲೂಕು ಮಟ್ಟದ ಅನುಷ್ಠಾಾನ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಯವರು, ಹಾಗೂ ಇತರರು ಉಪಸ್ಥಿಿತರಿದ್ದರು.
ಮಸ್ಕಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ ಸಭೆ

