ಸುದ್ದಿಮೂಲ ವಾರ್ತೆ;
ಮಸ್ಕಿ:ನಗರದ ಮಸ್ಕಿ ಬಿಜೆಪಿ ಕಾರ್ಯಾಲಯದಲ್ಲಿಂದು ಹಾಲಾಪುರ ಗ್ರಾಮದ 30 ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಹಾಗೂ ಯುವಕರು ಕಾಂಗ್ರೆಸ್ ಪಕ್ಷ ತೊರೆದು, ಬಿಜೆಪಿ ಸೇರ್ಪಡೆಯಾದರು.
ಬಿಜೆಪಿಯ ಮಂಡಲ ಅಧ್ಯಕ್ಷರಾದ ಶಿವಪುತ್ರಪ್ಪ ಹರಳಹಳ್ಳಿ, ಮಾದೇವಪ್ಪ ಗೌಡ ಪೊಲೀಸ್ ಪಾಟೀಲ್, ಜಗದೀಶ್ ತಾತ ಹಾಲಾಪುರ ಇವರ ಸಮ್ಮುಖದಲ್ಲಿ,ಮಲ್ಲಯ್ಯ ಸ್ವಾಮಿ ಮಾಜಿ ಎಸ್ ಎಸ್ ಎನ್ ನಿರ್ದೇಶಕರು ಹಾಗೂ ಗೂಳಯ್ಯ ಸ್ವಾಮಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು, ಮಲ್ಲಣ್ಣ ಬಡಿಗೇರಿ, ಸುರೇಶ್ ಕಟ್ಟಿಮನಿ, ಯಂಕಪ್ಪ ಮಡಿವಾಳ, ಅಮರಪ್ಪ ಮಾಲಿಪಾಟೀಲ್, ಶಾಂತಯ್ಯ ಸ್ವಾಮಿ ದಿನ್ನಿ, ಎಲ್ಲಪ್ಪ ದೇಸಾಯಿ, ಮರಾಠ ಸಮಾಜದ ತಾಲೂಕು ಉಪಾಧ್ಯಕ್ಷರಾದ ಮೌನೇಶ್ ಮರಾಠ, ವೀರನಗೌಡ ಮಾಲಿಪಾಟೀಲ್ ಹಾಲಾಪುರ
ಅವರನ್ನು ಪಕ್ಷದ ಶಾಲು ಹೊದಿಸಿ, ಬರಮಾಡಿಕೊಂಡ ಶರಣಬಸವ ಸೊಪ್ಪಿ ಮಠ ಅವರು, ಪಕ್ಷ ಸೇರಿದ ಯುವಕರೆಲ್ಲರನ್ನು ಸ್ವಾಗತಿಸುತ್ತಾ ಈ ಬಾರಿ ಕಮಲದ ಚಿನ್ಹೆಗೆ ಮತ ನೀಡಿ ಗೆಲ್ಲಿಸುವಂತೆ ಕರೆ ನೀಡಿದರು.
ಮಲ್ಲಯ್ಯ ಸ್ವಾಮಿ ಮಾಜಿ PSSN ನಿರ್ದೇಶಕರು ಹಾಗೂ ಗೂಳಯ್ಯ ಸ್ವಾಮಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಮಲ್ಲಣ್ಣ ಬಡಿಗೇರಿ ಸುರೇಶ್ ಕಟ್ಟಿಮನಿ ಯಂಕಪ್ಪ ಮಡಿವಾಳ ಅಮರಪ್ಪ ಮಾಲಿಪಾಟೀಲ್ ಶಾಂತಯ್ಯ ಸ್ವಾಮಿ ದಿನ್ನಿ ಎಲ್ಲಪ್ಪ ದೇಸಾಯಿ ಮರಾಠ ಸಮಾಜದ ತಾಲೂಕು ಉಪಾಧ್ಯಕ್ಷರಾದ ಮೌನೇಶ್ ಮರಾಠ ವೀರನಗೌಡ ಮಾಲಿಪಾಟೀಲ್ ಹಾಲಾಪುರ ಹಾಗೂ ಇತರರು ಸೇರ್ಪಡೆ ಆದರೂ.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ, ಗವಿಸಿದ್ದಪ್ಪ ಸಾಹುಕಾರ, ಚೇತನ್ ಪಾಟೀಲ್, ಯೋಗೀಶ್ ದಣಿ ಹಾಲಾಪುರ, ಮಲ್ಲಣ್ಣ,ರೇವಣಕಿ ಹಾಲಪುರ, ಚಂದಪ್ಪ ಹಾಲಾಪುರ, ಗ್ರಾಮದ ಪಕ್ಷದ ಹಿರಿಯ ಮುಖಂಡರಾದ ವೀರನಗೌಡ ಮಾಲಿ ಪಾಟೀಲ್, ಗ್ರಾಮ ಪಂಚಾಯತಿ ಸದಸ್ಯರು ಶಂಕ್ರಪ್ಪ ಗೌಡ, ವೆಂಕಪ್ಪ ನಾಯಕ, ನಾಗೇಶ ನಾಯಕ ಉಪಸ್ಥಿತರಿದ್ದರು.