ಸುದ್ದಿ ಮೂಲ ವಾರ್ತೆ
ಹೊಸಕೋಟೆ,ಆ.14:ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನನ್ನ ಮಣ್ಣು, ನನ್ನ ದೇಶ’ ಅಭಿಯಾನಕ್ಕೆ ಹೊಸಕೋಟೆ ತಾಲ್ಲೂಕಿನ ನಂದಗುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿ ವೆಂಕಟಮ್ಮ ಬಚ್ಚಪ್ಪ ನಂದಗುಡಿ ಮುತ್ಯಾಲಮ್ಮ ಕೆರೆಯಲ್ಲಿ ಸಸಿ ನೆಟ್ಟು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಜನತೆ ಸಸಿ ನೆಡುವ, ಪರಿಸರ ಸಂರಕ್ಷಿಸುವ ಮೂಲಕ ಭವಿಷ್ಯದ ಭಾರತಕ್ಕೆ ಕೊಡುಗೆ ನೀಡಬೇಕು ಎಂದರು.
ವಿದ್ಯಾರ್ಥಿಗಳು ಮೊಬೈಲ್ ದಾಸರಾಗದೇ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ತಂದೆ-ತಾಯಿ ಮತ್ತು ದೇಶಕ್ಕೆ ಒಳ್ಳೆಯ ಹೆಸರು ತರಬೇಕು. ಪ್ರತಿ ಗ್ರಾಮದ ಶಾಲಾ ಆವರಣದಲ್ಲಿ ಹಾಗೂ ಸರ್ಕಾರಿ ಜಾಗದಲ್ಲಿ ಕನಿಷ್ಠ 75 ಸಸಿ ನೆಟ್ಟು ಪೋಷಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಜಲ ಸಂರಕ್ಷಣೆ ಕುರಿತು ಪ್ರಬಂಧ ಸ್ಪರ್ದೆ ಏರ್ಪಡಿಸಲಾಗಿತ್ತು
ಇದೇ ವೇಳೆ ಮಕ್ಕಳೆಲ್ಲ ಮಣ್ಣನ್ನು ಮುಷ್ಟಿಯಲ್ಲಿ ಹಿಡಿದುಕೊಂಡು *ನನ್ನ ಮಣ್ಣು, ನನ್ನ ದೇಶ* ಘೋಷಣೆಯನ್ನು ಕೂಗಿ, ಕಾರ್ಯಕ್ರಮ ಆಚರಣೆ ಮಾಡಿದರು.
ನಂದಗುಡಿ ಗ್ರಾಮಸ್ಥರಿಂದ ನಮ್ಮ ದೇಶ ನಮ್ಮ ಮಣ್ಣು ಎಂದು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು
ಈ ಸಂದರ್ಭದಲ್ಲಿ ಗ್ರಾಮ ನರೇಗಾ ಇಂಜಿನಿಯರ್ ವಿನಯ ಶ್ರೀ ಪಂಚಾಯ್ತಿ ಸದಸ್ಯ ಎನ್ ಎನ್ ಮಂಜುನಾಥ್ ಶಾಂತಮ್ಮ ಹನುಮಂತಪ್ಪ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ವೆಂಕಟೇಶ್
ಲೆಕ್ಕ ಪರಿಶೋಧಕ ಸಂಪತ್ ಕುಮಾರ್ ಪಂಚಾಯ್ತಿ ಕರ ವಸೂಲಿಗಾರರಾದ ನಯನ ಮನೋಜ್ ಕುಮಾರ್ ಸಿಬ್ಬಂದಿಗಳು ಹಾಜರಿದ್ದರು.