ಸುದ್ದಿಮೂಲ ವಾರ್ತೆ
ಮೈಸೂರು, ಜೂ.6: ಈಗಲೂ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ ಮೈಸೂರು ವಿಶ್ವವಿದ್ಯಾಲಯ ದೇಶದ ಟಾಪ್ 100 ವಿವಿಗಳಲ್ಲಿ ಮೈಸೂರು ವಿವಿಗೆ 44 ನೇ ಸ್ಥಾನ ಪಡೆದಿದೆ.
ಇದು ವಿಶ್ವವಿದ್ಯಾಲಯದ ಹಿರಿಮೆಗರಿಮೆಯನ್ನು ಹೆಚ್ಚಿಸಿದೆ. ಈ ಪಟ್ಟಿಯನ್ನು ಎನ್ಐಆರ್ಎಫ್ ರ್ಯಾಂಕಿಂಗ್ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ.
1916 ರಲ್ಲಿ ಮೈಸೂರು ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿತ್ವದಲ್ಲಿ ಸ್ಫಾಪಿತವಾದ .ಈ ವಿಶ್ವವಿದ್ಯಾಲಯಕ್ಕೆ ರಾಷ್ಟ್ರಕವಿ ಕುವೆಂಪು ಸೇರಿದಂತೆ ಮಹಾನ್ ವಿದ್ವಾಂಸರು ಉಪಕುಲಪತಿಗಳಾಗಿದ್ದರು ಎಂಬುದು ಈಗಲೂ ಸ್ಮರಣೀಯ.