ಸುದ್ದಿಮೂಲ ವಾರ್ತೆ
ಬಳ್ಳಾರಿ, ಏ. ೧೧:
ಅಂತೂ ಇಂತೂ, ತೂಗಿ ಅಳೆದು ಏನೆಲ್ಲಾ ಲೆಕ್ಕಾಚಾರ ಹಾಕಿಬಿಟ್ಟು ಕಾಂಗ್ರೆಸ್ ಅಂತಿಮವಾಗಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ಅಧಿಕೃತವಾಗಿ ಯಾವುದೇ ಕ್ಷಣದಲ್ಲಿ ಹೆಸರು ಪ್ರಕಟವಾಗಲಿದೆ.
ಅಂತಿಮವಾಗಿ ಜೆ.ಎಸ್. ಆಂಜನೇಯಲು ಮತ್ತು ಎನ್. ಭರತ್ರೆಡ್ಡಿಯ ಮಧ್ಯೆ ಟಿಕೇಟ್ಗಾಗಿ ತೀವ್ರ ಪೈಪೋಟಿ ನಡೆದಿತ್ತು. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಸಕ್ತರಾಗಿದ್ದ ಜೆ.ಎಸ್. ಆಂಜನೇಯಲು, ಎನ್. ಭರತ್ರೆಡ್ಡಿ ಮತ್ತು ರಾವೂರು ಸುನೀಲ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿಗೆ ಕರೆಯಿಸಿಕೊಂಡಿದ್ದರು. ಆದರೆ, ನಿಗಧಿತ ಸಮಯದಲ್ಲಿ ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ.
ಕಾರಣ ಮಂಗಳವಾರ ಮಧ್ಯಾಹ್ನ ದೆಹಲಿಗೆ ಹೋಗುವ ಮೊದಲು ಕೆಂಪೇಗೌಡ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಎನ್. ಭರತ್ರೆಡ್ಡಿ ಅವರಿಗೆ ಚುನಾವಣೆ ನಡೆಸುವ ಕುರಿತು ಅನೇಕ ಮಾರ್ಗದರ್ಶನಗಳನ್ನು ನೀಡಿ, ರಾಜ್ಯ ಮತ್ತು ಕೇಂದ್ರ ನಾಯಕರೊಂದಿಗಿನ ಸಂಪರ್ಕಹೊAದುವ ಕುರಿತು ಬುದ್ದಿವಾದ ಹೇಳಿ, ಅಂತಿಮವಾಗಿ `ಎಂಎಲ್ಎ ಬಿ ಫಾರಂ ನಿನಗೇ ನೀಡುವೆ’ ಎನ್ನುವ ಭರವಸೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.
ಅಷ್ಟೇ ಅಲ್ಲ, ಜೆ.ಎಸ್. ಆಂಜನೇಯಲು ಮತ್ತು ಎನ್. ಭರತರೆಡ್ಡಿ ಅವರ ಮಧ್ಯೆ ಇದ್ದಿದ್ದ ವ್ಯಕ್ತಿಗತ ಗೊಂದಲಗಳು, ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಇಬ್ಬರನ್ನೂ ಸಮಾಧಾನಿಸಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಲಾಗಿದೆ. ಆದರೂ, ಕಾಂಗ್ರೆಸ್ನ ಅಧಿಕೃತಪಟ್ಟಿ ಪ್ರಕಟಣೆಗಾಗಿ ಕಾಯಬೇಕಿದೆ.