ಸುದ್ದಿಮೂಲ ವಾರ್ತೆ ಸಿಂಧನೂರು, ಜ.13:
ತಾಲೂಕಿನಲ್ಲಿ ಜೋಳದ ಬೆಳೆ ಕಟಾವಿಗೆ ಬಂದಿದೆ. ಆದರೂ ನೊಂದಣಿ ಆರಂಭವಾಗಿಲ್ಲ. ಕೂಡಲೇ ನೋಂದಣಿ ಮಾಡಿಕೊಂಡು ಖರೀದಿ ಮಾಡಬೇಕು ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಬಸವರಾಜ ನಾಡಗೌಡ ಒತ್ತಾಾಯಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಿಯಲ್ಲಿ ಅವರು ಮಾತನಾಡಿದರು. ಕಳೆದ ವರ್ಷ ಜೋಳ ಖರೀದಿ ವಿಳಂಬವಾದ ಹಿನ್ನಲೆಯಲ್ಲಿ ರೈತರು ತೊಂದರೆ ಅನುಭವಿಸಿದರು. ರೈತರು ಹೋರಾಟ ಮಾಡಿದ ನಂತರ ಖರೀದಿ ಮಾಡಲಾಯಿತು. ಈ ಬಾರಿ ಅದು ಆಗಬಾರದು. ಕೂಡಲೇ ಜೋಳ ನೊಂದಣಿ ಆರಂಭಿಸಿ, ಖರೀದಿಗೆ ಮುಂದಾಗಬೇಕು ಎಂದು ತಾಲೂಕಾ, ಜಿಲ್ಲಾಾಡಳಿತ, ಶಾಸಕರಿಗೆ ಆಗ್ರಹಿಸಿದರು.
ಕಳೆದ ವರ್ಷ ಮೊದಲಿಗೆ ಎಕರೆಗೆ 20 ಕ್ವಿಿಂಟಾಲ್ ಮಿತಿ ನಿಗದಿ ಮಾಡಿತ್ತು. ಮಧ್ಯದಲ್ಲಿ 10 ಕ್ವಿಿಂಟಾಲ್ ಖರೀದಿಗೆ ಇಳಿಸಿತು. ಈ ಬಾರಿ ಯಾವುದೇ ಗೊಂದಲಕ್ಕೆೆ ಅವಕಾಶ ನೀಡದೇ ಎಕರೆಗೆ 15 ಕ್ವಿಿಂಟಾಲ್ನಂತೆ ಎಷ್ಟು ಎಕರೆ ಹೊಲ ಇದೆ ಎಷ್ಟು ಖರೀದಿ ಮಾಡಬೇಕು. ಒಂದು ವಾರದಲ್ಲಿ ನೋಂದಣಿ ಪ್ರಕ್ರಿಿಯೆ ಆರಂಭಿಸದಿದ್ದರೆ ಜೆಡಿಎಸ್ ಅನಿವಾರ್ಯವಾಗಿ ಹೋರಾಟಕ್ಕಿಿಳಿಯಲಿದೆ ಎಂದು ಎಚ್ಚರಿಕೆ ನೀಡಿದರು.
ಬಸನಗೌಡರಿಗೆ ನಾಡಗೌಡ ಟಾಂಗ್:
ಕಾಂಗ್ರೆೆಸ್ ನಾಯಕರು ಅಸಂವಿಧಾನಿಕ ಶಬ್ದಗಳನ್ನು ಬಳಸಿ ಆರೋಪ ಮಾಡುವಂಥದ್ದು ಶೋಭೆ ತರುವದಿಲ್ಲ. ಶಾಸಕರೊಂದಿಗೆ ವಿಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿಲ್ಲ. ಕ್ಷೇತ್ರದಲ್ಲಿ ವಿಪಕ್ಷಗಳು ಮಾಡುವ ಕೆಲಸಗಳನ್ನು ಎಂಎಲ್ಸಿ ಬಸನಗೌಡ ಮಾಡುತ್ತಿಿದ್ದಾಾರೆ. ಅವರಿಗೆ ಧಮ್ ಹತ್ತಿಿದ ಮೇಲೆ ನಾವು ಆ ಕೆಲಸ ಮಾಡ್ತೀವಿ ಎಂದು ಟಾಂಗ್ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಗದ್ರಟಗಿ, ನಗರ ಘಟಕದ ಅಧ್ಯಕ್ಷ ರವಿಕುಮಾರ ಪನ್ನೂರು, ಜಿ.ಸತ್ಯನಾರಾಯಣ, ಡಿ.ಸತ್ಯನಾರಾಯಣ, ಜಿಲಾನಿಪಾಷಾ, ಎಸ್.ಬಿ.ಟೇಲರ್, ವೆಂಕಟೇಶ ನಂಜಲದಿನ್ನಿಿ, ಆಸ್ೀ ಇತರರು ಇದ್ದರು.
ಜೋಳ ಖರೀದಿಗೆ ನೋಂದಣಿ ಆರಂಭಿಸಲು ನಾಡಗೌಡ ಒತ್ತಾಯ

