ಸುದ್ದಿಮೂಲ ವಾರ್ತೆ ರಾಯಚೂರು , ನ.23:
ಗ್ರಾಾಮ ಪಂಚಾಯತಿ ನೌಕರರ ಬೇಡಿಕೆಗಳ ಕುರಿತು ಸಚಿವ, ಶಾಸಕರುಗಳಿಗೆ ಮಾಡಿದ ಮನವಿಗೆ ಚಳಿಗಾಲ ಅಧಿವೇಶನದಲ್ಲಿ ಸ್ಪಂದನೆ ಸಿಗದೆ ಹೋದರೆ ಡಿ.21 ಬೆಂಗಳೂರಿನಲ್ಲಿ ಅನಿರ್ಧಿಷ್ಟಾಾವಧಿ ಚಳವಳಿ ನಡೆಸಲು ನಿರ್ಧರಿಸಲಾಗಿದೆ ಎಂದು ಗ್ರಾಾಮ ಪಂಚಾಯತಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ. ಡಿ. ನಾಡಗೌಡ ಹೇಳಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಈಗಾಗಲೇ ರಾಜ್ಯದ ಎಲ್ಲ ಕ್ಷೇತ್ರದ ಶಾಸಕರಿಗೆ, ಸಚಿವರಿಗೆ ಹಾಗೂ ಪರಿಷತ್ ಸದಸ್ಯರಿಗೂ ರಾಜ್ಯದಲ್ಲಿ ಸುಮಾರು 63 ಸಾವಿರ ಗ್ರಾಾಮ ಪಂಚಾಯತ ನೌಕರರು, ಕರ ವಸೂಲಿಗಾರರಾಗಿ, ಕ್ಲರ್ಕ ಕಂ ಡಾಟಾ ಎಂಟ್ರಿಿ ಅಪರೇಟರಗಳಾಗಿ, ಸ್ವಚ್ಚತಾಗಾರರು, ಸಿಪಾಯಿ ಮತ್ತು ವಾಟರಮನ್ಗಳಾಗಿ ಕೆಲಸ ನಿರ್ವಹಿಸುತ್ತಿಿದ್ದು ಅವರ ಸಮಸ್ಯೆೆಗಳ ಬಗ್ಗೆೆ ಮನವರಿಕೆ ಮಾಡಿಕೊಟ್ಟಿಿದ್ದೇವೆ ಈ ಬಗ್ಗೆೆ ನ.8ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಅವರು ವಿಷಯ ಪ್ರಸ್ತಾಾಪಿಸಿ ಸರ್ಕಾರದಿಂದ ಸ್ಪಂದನೆ ಕೊಡಿಸದೆ ಹೋದರೆ ಹೋರಾಟ ಆರಂಭಿಸುವುದು ನಿಶ್ಚಿಿತ ಎಂದರು.
ಸ್ವಚ್ಚವಾಹಿನಿ ನೌಕರರು ಎಂದು ಸರಕಾರ ತರಬೇತಿ ನೀಡಿ ಸಂಜೀವಿನಿ ಒಕ್ಕೂಟದಿಂದ ನೇಮಕಾತಿ ಮಾಡಿಕೊಂಡು ಗುತ್ತಿಿಗೆ ಆಧಾರದಲ್ಲಿ ಗುಲಾಮರಂತೆ ದುಡಿಸಿಕೊಳ್ಳುತ್ತಿಿರುವುದು ಸರಿಯಲ್ಲ ಇವರಿಗೆ ನೌಕರರೆಂದು ಪರಿಗಣಿಸಿ ನಿಗದಿತ ವೇತನ ನೀಡಲು ಕೋರಿದರು. ಕ್ಲರ್ಕ ಕಂ ಡಾಟಾ ಎಂಟ್ರಿಿ ಅಪರೇಟರ್, ನೀರುಗಂಟಿಗಳು, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆೆ ಸರಕಾರಿ ನೌಕರರೆಂದು ಘೋಷಿಸಿ ಬೆಲೆ ಏರಿಕೆಯ ಆಧಾರದಲ್ಲಿ ಪಂಚಾಯತ ನೌಕರರಿಗೆ 36 ಸಾವಿರ ವೇತನ, ಸೇವಾ ಹಿರಿತನ ಪರಿಗಣಿಸಿ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆಯಲು ಆಗ್ರಹಿಸಿದರು.
ಸುದ್ದಿಗೋಷ್ಠಿಿಯಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ, ಆಂಜನೇಯ ಮಾಡಗಿರಿ, ಡಿ ಎಸ್ ಶರಣಬಸವ, ವೀರೇಶ ಇತರರಿದ್ದರು.
ಪಂಚಾಯತ್ ನೌಕರರ ಬೇಡಿಕೆಗೆ ಸ್ಪಂದಿಸದಿದ್ದರೆ ಡಿ.21ರಿಂದ ಹೋರಾಟ ನಿಶ್ಚಿಿತ – ನಾಡಗೌಡ

