ಸುದ್ದಿಮೂಲ ವಾರ್ತೆ ಸಿರವಾರ, ಡಿ.21:
ಪಟ್ಟಣದ ಪ್ರಾಾಥಮಿಕ ಕೃಷಿ ಪತ್ತಿಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಚನ್ನಪ್ಪ ಚೆನ್ನೂರು, ಉಪಾಧ್ಯಕ್ಷರಾಗಿ ಎಂ.ನಾಗರಾಜಗೌಡ ರವಿವಾರ ಸಹಕಾರಿ ಸಂಘದಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆೆಯಾದರು.
ಒಟ್ಟು 12ಸದಸ್ಯರಿದ್ದು ಇದರಲ್ಲಿ 8ಜನ ಬಿಜೆಪಿ, 2ಜೆಡಿಎಸ್, ಕೇವಲ 2 ಕಾಂಗ್ರೆೆಸ್ ಪಕ್ಷದ ಬೆಂಬಲ ಸದಸ್ಯರು ಆಯ್ಕೆೆಯಾಗಿದ್ದರಿಂದ ಸಹಕಾರಿ ಸಂಘ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಅಧಿಕಾರಕ್ಕೆೆ ಅವಕಾಶ ಮಾಡಿಕೊಟ್ಟಂತಾಗಿದೆ.
ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾಾನಕ್ಕೆೆ ತಲಾ ಒಂದು ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆೆಯಾದರು ಎಂದು ಚುನಾವಣೆಯ ಅಧಿಕಾರಿ ಪ್ರವೀಣ ಕುಮಾರ, ಸಂಘದ ಮುಖ್ಯ ಕಾರ್ಯದರ್ಶಿ ಗೌಸ್ ಪಾಷಾ ಇದ್ದರು. ಸಂಘದ ನಿರ್ದೇಶಕರಾದ ಬಸ್ಸಪ್ಪಗೌಡ ನಂದರಡ್ಡಿಿ, ಪಂಪಾಪತಿ ಸಾಹುಕಾರ, ದೇವಪುತ್ರಪ್ಪ, ಅಡಿವೆಪ್ಪ, ವಾಹಿದ ಸಾಬ್, ಬಸ್ಸಮ್ಮ ಹಿರೇಮಠ, ಗ್ಯಾಾನಪ್ಪ, ಆಂಜಿನಯ್ಯ ಬಿಚ್ಚಾಾಲಿ ಸೇರಿದಂತೆ ಅನೇಕರು ಇದ್ದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಜಿ.ಪಂ.ಮಾಜಿ ಸದಸ್ಯಜೆ.ಶರಣಪ್ಪಗೌಡ, ಮಹಾಂತೇಶ ಪಾಟೀಲ ಅತ್ತನೂರು, ಜೆ.ದೇವರಾಜಗೌಡ ಸೇರಿದಂತೆ ಅನೇಕ ಗಣ್ಯರು ಸನ್ಮಾಾನಿಸಿ ಶುಭಕೋರಿದರು.
ಸಿರವಾರ : ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಚನ್ನಪ್ಪ, ಉಪಾಧ್ಯಕ್ಷರಾಗಿ ನಾಗರಾಜಗೌಡ ಅವಿರೋಧ ಆಯ್ಕೆ

