ಸುದ್ದಿಮೂಲ ವಾರ್ತೆ ಅರಕೇರಾ, ಡಿ.13:
ಅರಕೇರಾ ತಾಲ್ಲೂಕಿನ ನಾಗೋಲಿ ಗ್ರಾಾಮದ ಆರಾಧ್ಯ ದೈವ ಶ್ರೀ ಬಸವೇಶ್ವರ ಜಾತ್ರಾಾ ಮಹೋತ್ಸವವು ಡಿ.15 ರಂದು ಸೋಮವಾರ ಜರುಗಲಿದೆ. ಅಭಿನವ ಶ್ರೀ ರಾಚೋಟಿವೀರ ಶಿವಾಚಾರ್ಯ ಮಹಾಸ್ವಾಾಮಿಗಳು ಸೋಮವಾರ ಪೇಟೆ ಹಿರೇಮಠ ರಾಯಚೂರು ಇವರು ದಿವ್ಯಸಾನಿಧ್ಯ ವಹಿಸಲಿದ್ದಾಾರೆ.
ಜಾತ್ರಾಾ ನಿಮಿತ್ಯ ಪ್ರತಿದಿನ ಬೆಳಿಗ್ಗೆೆ ಎಲೆ ಪೂಜೆಯೊಂದಿಗೆ ದೇವಸ್ಥಾಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಸೋಮವಾರ ಬೆಳಿಗ್ಗೆೆ ಉದಯ 6 ಗಂಟೆಗೆ ಶ್ರೀ ಬಸವೇಶ್ವರ ಮೂರ್ತಿಗೆ ಮಹಾ ರುದ್ರಾಾಭೀಷೇಕ ಹಾಗೂ ಈಶ್ವರ ಮೂರ್ತಿಗೆ ಸಹಸ್ರ ಬಿಲ್ವಾಾರ್ಚನೆ ನಡೆಯಲಿದೆ. ಬೆಳಿಗ್ಗೆೆ 10 ಗಂಟೆಗೆ ಮಂಗಳ ವಾದ್ಯಗಳೊಂದಿಗೆ ಗ್ರಾಾಮದ ಚನ್ನಪ್ಪ ಸಾಹುಕಾರ ಮನೆಯಿಂದ ಸಕಲ ಸದ್ಭಕರಿಂದ ಕಳಸಗಳು ಮೆರವಣಿಗೆ ಮೂಲಕ ದೇವಸ್ಥಾಾನ ತಲುಪಲಿವೆ. ನಂತರ ಶಿಖರದ ಮೇಲೆ ಕಳಸಾರೋಹಣ ಕಾರ್ಯಕ್ರಮ ನೆರವೇರಲಿದೆ.11 ಗಂಟೆಗೆ ಉತ್ಸವ (ಉಚ್ಚಾಾಯ) ಪೂಜೆ ಮಧ್ಯಾಾಹ್ನ 12 ರಿಂದ ಭಕ್ತರಿಂದ ಪ್ರಸಾದ ವಿತರಣೆ ನಡೆಯಲಿದೆ.
ಮಧ್ಯಾಾಹ್ನ 2 ಗಂಟೆಯಿಂದ ಸಾಯಂಕಾಲ 5 ರ ತನಕ ನಂದಿಮಠದಿಂದ ಬಸವೇಶ್ವರ ದೇವಸ್ಥಾಾನದ ವರಗೆ ನಂದಿಯ ಮೂರ್ತಿ ಮೆರವಣಿಗೆ ಮತ್ತು ಬೂದಿಬಸವ ಸ್ವಾಾಮಿ ಹೇಮನೂರು ಇವರಿಂದ ವಡವು, ವಚನ, ಪುರವಂತಿಗೆ ಸೇವೆ, ಭಕ್ತರಿಂದ ನಂದಿಕೋಲು ಕುಣಿತ ಅದ್ಧೂರಿಯಾಗಿ ಜರುಗಲಿದೆ. 5.30 ಕ್ಕೆೆ ಮಹಾ ಉತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಲಿದೆ. ಸಕಲ ಭಕ್ತರು ತನು, ಮನದಿಂದ ಜಾತ್ರಾಾ ಮಹೋತ್ಸವದಲ್ಲಿ ಪಾಲ್ಗೊೊಂಡು ಶ್ರೀ ಬಸವೇಶ್ವರನ ಕೃಪಾ ಆಶೀರ್ವಾದಕ್ಕೆೆ ಪಾತ್ರರಾಗುವಂತೆ ದೇವಸ್ಥಾಾನದ ಸಮಿತಿ ಪತ್ರಿಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾಾರೆ.
ನಾಗೋಲಿ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ

