ಸುದ್ದಿಮೂಲ ವಾರ್ತೆ ಮಾನ್ವಿ, ಡಿ.30:
ವಿದ್ಯಾಾರ್ಥಿಗಳು ವೇಳಾ ಪಟ್ಟಿಿಯಂತೆ ಪ್ರತಿನಿತ್ಯ ಅಭ್ಯಾಾಸ ಮಾಡುವ ರೂಢಿಮಾಡಿಕೊಂಡರೆ ಉತ್ತಮ ಲಿತಾಂಶ ಬರುತ್ತದೆ ಎಂದು ನೇತಾಜಿ ಶಿಕ್ಷಣ ಸಂಸ್ಥೆೆಯ ಅಧ್ಯಕ್ಷ ಕೆ.ಈ.ನರಸಿಂಹ ಹೇಳಿದರು.
ನೇತಾಜಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿಿತೀಯ ಪಿ.ಯು.ವಿದ್ಯಾಾರ್ಥಿಗಳಿಗಾಗಿ ಹಮ್ಮಿಿಕೊಂಡಿದ್ದ ಅಂತರ್ ಕಾಲೇಜು ರಸಪ್ರಶ್ನೆೆ ಸ್ಪರ್ಧೆ ಉದ್ಘಾಾಟಿಸಿ ಮಾತನಾಡಿದರು.
ವಿದ್ಯಾಾರ್ಥಿ ಬದುಕಿನಲ್ಲಿ ದ್ವಿಿತೀಯ ಪಿ.ಯು.ಲಿತಾಂಶಕ್ಕೆೆ ಒಂದು ಮಹತ್ವವಿದೆ. ಇಲ್ಲಿ ಉತ್ತಮ ಲಿತಾಂಶ ಪಡೆದುಕೊಂಡರೆ ಮುಂದಿನ ಉನ್ನತ ಅಭ್ಯಾಾಸ ಉತ್ತಮವಾಗಿರುತ್ತದೆ. ಅಲ್ಲದೇ ಭದ್ರ ಭವಿಷ್ಯ ನಿರ್ಮಾಣವಾಗುತ್ತದೆ ಈ ಉದ್ದೇಶದಿಂದಲೇ ಪ್ರತಿವರ್ಷ ಹತ್ತನೇ ತರಗತಿಯ ಮಕ್ಕಳಿಗೆ ಹಾಗೂ ಪಿ.ಯು.ವಿದ್ಯಾಾರ್ಥಿಗಳಿಗೆ ಈ ರಸಪ್ರಶ್ನೆೆ ಸ್ಪರ್ಧೆ ಏರ್ಪಡಿಸಲಾಗುತ್ತಿಿದೆ. ಎಂದು ಅವರು ಹೇಳಿದರು.
ರಸಪ್ರಶ್ನೆೆ ಸ್ಪರ್ಧೆಯಲ್ಲಿ ವೆಂಕಟೇಶ್ವರ ಕಾಲೇಜು, ಎಸ್.ಆರ್,ಎಸ್.ವಿ ( ಗಾಂಧಿ ಕಾಲೇಜು), ಶ್ರೀ ಪಂಪಾವಿರೂಪಾಕ್ಷೇಶ್ವರ ಕಲ್ಮಠ ಕಾಲೇಜು, ಶಾರದಾ ಕಾಲೇಜು, ಕಾತರಕಿ ಮಹಾಲಿಂಗಪ್ಪ ಪಿ.ಯು.ಕಾಲೇಜು, (ಕೆ.ಎಂ.ಪಿ.ಯು ಕಾಲೇಜು), ನೇತಾಜಿ ಪಿ.ಯು.ಕಾಲೇಜು, ಬಾಲಕಿಯರ ಸರ್ಕಾರಿ ಪ.ಪೂ.ಕಾಲೇಜು ಸೇರಿದಂತೆ ಕಲಾ ಮತ್ತು ವಾಣಿಜ್ಯ ವಿಭಾಗದ 12 ತಂಡಗಳು ಭಾಗವಹಿಸಿದ್ದವು.
ಈ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಜ.10 ರಂದು ನಡೆಯುವ ನೇತಾಜಿ ವಿಜ್ಞಾನ ಪ.ಪೂ.ಕಾಲೇಜಿನ ಉದ್ಘಾಾಟನಾ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುತ್ತದೆ. ಎಂದು ಸಂಸ್ಥೆೆಯ ಕಾರ್ಯದರ್ಶಿ ಕೆ.ವಿಜಯಲಕ್ಷ್ಮಿಿ ಹೇಳಿದರು.
ಈ ಸಂದರ್ಭದಲ್ಲಿ ಸಹ ಕಾರ್ಯದರ್ಶಿ ಕೆ.ರವಿವಮಾರ್, ಕಾಲೇಜು ಮೆಂರ್ಟ ಆರ್ೀ, ಉಪನ್ಯಾಾಸಕರಾದ ಚಂದ್ರುಜಾಧವ್, ರಮೇಶ್, ಸದ್ದಾಂ, ವೀರನಗೌಡ, ಹನುಮಂತ, ತ್ರಿಿವೇಣಿ, ಕಾವ್ಯಶ್ರೀ, ನಾಗರಾಜ, ಹನುಮಂತಿ ಸೇರಿದಂತೆ ಕಾಲೇಜಿನ ಉಪನ್ಯಾಾಸಕರು ಇದ್ದರು.
ನೇತಾಜಿ ಕಾಲೇಜಿನಲ್ಲಿ ಅಂತರ್ ಕಾಲೇಜು ರಸಪ್ರಶ್ನೆ ಸ್ಪರ್ಧೆ ಸತತ ಅಭ್ಯಾಸ ಉತ್ತಮ ಲಿತಾಂಶಕ್ಕೆ ನಾಂದಿ – ಕೆ.ಈ.ನರಸಿಂಹ

