ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.8: ಕನ್ನಡ ಜನಶಕ್ತಿ ಕೇಂದ್ರ ಹಾಗೂ ನರಹಳ್ಳಿ ಪ್ರತಿಷ್ಠಾನದ ದಶಮಾನೋತ್ಸವ ಅಂಗವಾಗಿ ‘ನರಹಳ್ಳಿ ಪ್ರಶಸ್ತಿ’ ಮತ್ತು ‘ನರಹಳ್ಳಿ ದಶಮಾನೋತ್ಸವ ಪುರಸ್ಕಾರ’ ಪ್ರದಾನ ಕಾರ್ಯಕ್ರಮ ಭಾನುವಾರದಂದು ಬೆಂಗಳೂರಿನ ಎಚ್. ಎನ್ ಮಲ್ಟಿಮೀಡಿಯಾ ಹಾಲ್ನಲ್ಲಿ ನಡೆಯಿತು.
ಕವಿ ಚಂದ್ರಶೇಖರ ಕಂಬಾರ ಅವರು ಲೇಖಕ ಚ. ಹ ರಘುನಾಥ್ ಅವರಿಗೆ 2023ನೇ ಸಾಲಿನ ‘ನರಹಳ್ಳಿ ಪ್ರಶಸ್ತಿ’ ಹಾಗೂ ಇತ್ತೀಚಿನ ವರ್ಷಗಳಲ್ಲಿ ಹೊಸ ತಲೆಮಾರಿನ ಬರಹಗಾರರನ್ನು ರೂಪಿಸುತ್ತಿರುವ ಜೋಗಿ ಅವರಿಗೆ ‘ನರಹಳ್ಳಿ ದಶಮಾನೋತ್ಸವ ಪುರಸ್ಕಾರ’ವನ್ನು ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಎಚ್. ಎಸ್. ವೆಂಕಟೇಶಮೂರ್ತಿ ಅಧ್ಯಕ್ಷತೆ ವಹಿಸಿದ್ದು, ಅನೇಕ ಸಾಹಿತ್ಯಾಸಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.