ಸುದ್ದಿಮೂಲ ವಾರ್ತೆ ರಾಯಚೂರು , ಡಿ.20:
ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆೆ ಕಾಪಾಡುವ ಉದ್ದೇಶದ 13ನೇ ಕೆಎಸ್ಆರ್ಪಿ ಪಡೆ ಜಿಲ್ಲೆಯಲ್ಲಿ ಸ್ಥಾಾಪಿಸುವ ಅಗತ್ಯವಿದೆ ಎಂದು ಜೆಡಿಎಸ್ ಪಕ್ಷದ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ. ಸಣ್ಣ ನರಸಿಂಹ ನಾಯಕ ಒತ್ತಾಾಯಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೆಎಸ್ಆರ್ಪಿ ಪಡೆ ಸ್ಥಾಾಪಿಸುವಂತೆ 25ಕ್ಕೂ ಹೆಚ್ಚು ಶಾಸಕರು, ಸಚಿವರು ಹಾಗೂ ವಿವಿಧ ಸಂಘಟನೆಗಳ ನಾಯಕರು ಸರ್ಕಾರಕ್ಕೆೆ ಪತ್ರ ಬರೆದಿದ್ದರೂ, ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಅಭಿಪ್ರಾಾಯಕ್ಕೆೆ ಒತ್ತು ನೀಡಿ 2ನೇ ಬಾರಿ ಬೇಡಿಕೆ ತಿರಸ್ಕರಿಸಿರುವುದು ಅಚ್ಚರಿ ತಂದಿದೆ ಎಂದು ದೂರಿದರು.
ಕಾನೂನು ಸುವ್ಯವಸ್ಥೆೆ ಕಾಪಾಡಲು ಅವಶ್ಯಕತೆ ಇರುವ ಕೆ ಎಸ್ ಆರ್ ಪಿ ಪಡೆ ಸ್ಥಾಾಪನೆಯಾದರೆ ಜಿಲ್ಲೆಯಲ್ಲಿ 5000ಕ್ಕೂ ಹೆಚ್ಚು ಉದ್ಯೋೋಗಗಳು ಸಿಗುತ್ತವೆ ಎಂಬ ಮಾಹಿತಿ ಇದೆ. ಜಿಲ್ಲೆಯಲ್ಲಿ ಬಂದೋಬಸ್ತ್, ಗಣ್ಯರ ಭದ್ರತೆ ಕರ್ತವ್ಯಕ್ಕೆೆ ಕೆಎಸ್ಆರ್ಪಿ ತುಕಡಿ ಸುಮಾರು 200 ಕ್ಕೂ ಹೆಚ್ಚಿಿನ ಕಿಲೋಮೀಟರ್ ದೂರದ ಕಲಬುರಗಿಯಿಂದ ಅಥವಾ ಮುನಿರಾಬಾದ್ನಿಂದ ತಕ್ಷಣ ನಿಯೋಜಿಸುವುದು ಸಾಧ್ಯವಿಲ್ಲಘಿ.ಅಗತ್ಯವಿರುವ ಭೂಮಿ ಗುರುತಿಸಲಾಗಿದೆ. ಬೇಕಾದ ವೆಚ್ಚವನ್ನು ಕೆಕೆಆರ್ಡಿಬಿ ಮೂಲಕ ಭರಿಸಬಹುದೆಂದು ಸಚಿವರು ಹಾಗೂ ಶಾಸಕರು ಹೇಳಿದ್ದಾಾರೆ.
ಈ ಬಗ್ಗೆೆ ಜಿಲ್ಲೆೆಯ ಯಾವ ಶಾಸಕರೂ ಸಹಿತ ಬೆಳಗಾವಿ ಅಧಿವೇಶನದಲ್ಲಿ ಧ್ವನಿಯತ್ತದೆ ಇರುವುದು ನಾಚಿಕೆಗೇಡಿನ ವಿಷಯ ಹೀಗಾಗಿ, ಜನ ವಿರೋಧಿ ನಿಲುವು ಹೊಂದಿರುವ ಜಿಲ್ಲೆೆಯ ಶಾಸಕರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಆದ್ದರಿಂದ ಸರ್ಕಾರ ಕೂಡಲೇ ಈ ವಿಷಯವನ್ನು ಪುನರ್ ಪರಿಶೀಲಿಸಿ, 13ನೇ ಕೆಎಸ್ಆರ್ಪಿ ಪಡೆಯ ಸ್ಥಾಾಪನೆಗೆ ಅನುಮತಿ ಆದೇಶ ಹೊರಡಿಸಲು ಆಗ್ರಹಿಸಿದರು.
ಸುದ್ದಿಗೋಷ್ಠಿಿಯಲ್ಲಿ ಗ್ರಾಾಮಾಂತರ ಘಟಕದ ಅಧ್ಯಕ್ಷ ಹಂಪಯ್ಯ ನಾಯಕ, ನಾಗರಾಜಗೌಡ, ಅಮರೇಶಗೌಡ ಆಶಾಪೂರು, ಯಲ್ಲಾಾರೆಡ್ಡಿಿ ಸಾಹುಕಾರ್ , ಬಸವರಾಜ್ ಇನ್ನಿಿತರರಿದ್ದರು.

