ಸುದ್ದಿಮೂಲ ವಾರ್ತೆ ರಾಯಚೂರು, ಅ.02:ರಾಯಚೂರು ತಾಲೂಕಿನ ವಿವಿಧ ಗ್ರಾಾಮಗಳಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ನಾರಾಯಣ ಸ್ವಾಾಮಿ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು.
ಬುಧವಾರ ಬೆಳಿಗ್ಗೆೆ ತಾಲೂಕಿನ ವಿವಿಧ ಗ್ರಾಾಮಗಳಿಗೆ ತೆರಳಿದ ಅವರು ಮಳೆಯಿಂದ ಆದ ಹಾನಿ ಬಗ್ಗೆೆ ಪರಿಶೀಲಿಸಿದರು ಅಲ್ಲದೆ, ಹತ್ತಿಿಘಿ, ಸಜ್ಜೆೆ, ತೊಗರಿ ಬೆಳೆಗಳಿಗೆ ಅತಿವೃಷ್ಟಿಿಯಿಂದ ಆದ ಹಾನಿಯ ಮಾಹಿತಿ ಪಡೆದ ಅವರು ರೈತರ ಸಮಸ್ಯೆೆ ಆಲಿಸಿದರು.
ಕೈಗೆ ಬಂದ ತುತ್ತು ಬಾಯಿಗೆ ಬರುವುದರೊಳಗೆ ಮಳೆ ಅಡ್ಡಿಿಯಾಗಿ ಬದುಕು ದುಸ್ತರಗೊಳಿಸಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರಗೆ ನೆರವಾಗಬೇಕು. ಸೂಕ್ತ ಪರಿಹಾರ ಒದಗಿಸಲು ಸರ್ಕಾರದ ಮೇಲೆ ಒತ್ತಡ ಹಾಕಲು ರೈತರು ಮನವಿ ಮಾಡಿದರು.
ಈ ಬಗ್ಗೆೆ ಸರ್ಕಾರಗಳಿಗೆ ಪತ್ರ ಬರೆದು ಕಣ್ಣಾಾರೆ ಕಂಡ ಹಾನಿಯ ಮಾಹಿತಿ ನೀಡಿ ಶೀಘ್ರವೇ ಸಮೀಕ್ಷೆೆ ಮಾಡಿಸಿ ಹಾನಿಯ ಲೆಕ್ಕ ಹಾಕಿ ಪರಿಹಾರ ರೈತರಿಗೆ ಒದಗಿಸಲು ಒತ್ತಾಾಯಿಸುವುದಾಗಿ ನಾರಾಯಣಸ್ವಾಾಮಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾಾರ್, ರವೀಂದ್ರ ಜಲ್ದಾಾರ್, ಗ್ರಾಾಮಾಂತರ ಅಧ್ಯಕ್ಷ ಮಹಾಂತೇಶ ಮುಕ್ತಿಿ ಮಟಮಾರಿ, ಶಂಕರರೆಡ್ಡಿಿ ಮಿರ್ಜಾಪೂರ, ನವೀನಕುಮಾರ ಕುರ್ಡಿ ಮತ್ತಿಿತರ ಮುಖಂಡರಿದ್ದರು.
ಮಳೆಯಿಂದ ಬೆಳೆ ಹಾನಿ ಪರಿಶೀಲಿಸಿದ ನಾರಾಯಣಸ್ವಾಾಮಿ
