ಸುದ್ದಿಮೂಲ ವಾರ್ತೆ ನವದೆಹಲಿ, ಡಿ.13
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋೋಗ ಖಾತ್ರಿ ಕಾಯ್ದೆ(ನರೇಗಾ) ಹೆಸರನ್ನು ಬಾಪೂ ಗ್ರಾಮೀಣ ರೋಜ್ಗಾರ್ ಎಂದು ಹೆಸರು ಬದಲಾಯಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ವಿರೋಧಿಸಿದ್ದಾರೆ.
ಕಾಂಗ್ರೆೆಸ್ ಆಡಳಿತದ ವೇಳೆ ಜಾರಿಯಾದ ಈ ಯೋಜನೆಯನ್ನು ಮೋದಿ ಅವರು ಈ ಯೋಜನೆಯನ್ನು ವೈಲ್ಯ ಎಂದು ಜರಿದಿದ್ದರು. ಈಗ ಅವರಿಗೆ ಇಂದು ಕ್ರಾಾಂತಿಕಾರಿ ಯೋಜನೆ ಎಂದು ಅರಿವಾಗಿದ್ದು ಮಹಾತ್ಮಗಾಂಧಿ ಅವರ ಹೆಸರನ್ನು ಅಳಿಸಿ ಹಾಕಲು ಹೆಸರು ಮರು ನಾಮಕರಣ ಮಾಡಿದ್ದಾರೆ ಎಂದು ಅವರು ಆಕ್ರೋೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಸಂಪುಟ ಶುಕ್ರವಾರ ನರೇಗಾ ಹೆಸರನ್ನು ಮರುನಾಮಕರಣ ಮಾಡಿದೆ. ಅಲ್ಲದೆ ದುಡಿಯುವ ದಿನಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದೆ. ಯೋಜನೆ ಹೆಸರನ್ನು ಬಾಪು ಗ್ರಾಮೀಣ ರೋಜ್ಗಾರ ಯೋಜನೆ ಎಂದು ಹೆಸರಿಡಲಾಗಿದೆ.
ಒಮ್ಮೆ ನರೇಗಾವನ್ನು ವೈಲ್ಯ ಎಂದು ಕರೆದಿದ್ದ ಪ್ರಧಾನಿ ಇದೀಗ ಕ್ರಾಾಂತಿಕಾರಿ ಯೋಜನೆಯ ಕೀರ್ತಿ ಪಡೆಯಲು ಮರು ನಾಮಕರಣ ಮಾಡುತ್ತಿಿದ್ದಾರೆ ಎಂದು ಟೀಕಿಸಿದರು.
ಯೋಜನೆ ಹೆಸರು ಮರುನಾಮಕರಣ ಮಾಡುವ ಮೂಲಕ ಮಹಾತ್ಮ ಗಾಂಧಿ ಹೆಸರನ್ನು ದೇಶದ ಜನರ ಮನಸ್ಸಿಿನಿಂದ ಅದರಲ್ಲೂ ವಿಶೇಷವಾಗಿ ಹಳ್ಳಿಿಗಳೇ ಆತ್ಮ ಎನ್ನುತ್ತಿಿದ್ದ ಗ್ರಾಾಮಗಳಿಂದ ಮರೆಯಾಗಿಸಲು ಮುಂದಾಗಿದ್ದಾರೆ. ಈ ನಡೆಯು ಈ ಯೋಜನೆಯನ್ನು ಉದ್ದೇಶಪೂರ್ವಕ ನಿರ್ಲಕ್ಷ್ಯಿಿಸಿ ಕೇವಲ ಕಾಗದಕ್ಕೆೆ ಸೀಮಿತ ಮಾಡುವ ಬದಲಾವಣೆಯಾಗಿದೆ ಎಂದಿದ್ದಾರೆ.
ನರೇಗಾ ಕಾರ್ಮಿಕರು ಹೆಚ್ಚಿನ ಕೂಲಿ ಬೇಡುತ್ತಿಿದ್ದಾರೆ. ಆದರೆ, ಕೇಂದ್ರ ಸರ್ಕಾರ ಅದಕ್ಕೆೆ ಮೀಸಲಿಟ್ಟಿಿರುವ ನಿಧಿಯನ್ನು ವರ್ಷದಿಂದ ವರ್ಷಕ್ಕೆೆ ಕಡಿಮೆ ಮಾಡುತ್ತಿಿದೆ. ಈ ಯೋಜನೆಯನ್ನು ನಿಧಾನವಾಗಿ ಅಳಿಸಿ ಹಾಕುವ ಉದ್ದೇಶದಿಂದ ಎಚ್ಚರಿಕೆಯಿಂದ ನಡೆಸಲಾದ ಕಾರ್ಯತಂತ್ರ ಇದಾಗಿದೆ. ಈ ಸರ್ಕಾರಕ್ಕೆೆ ಕಲ್ಯಾಾಣ ಮಾಡುವ ಉದ್ದೇಶವಿಲ್ಲ. ಯಾವುದೇ ಆಲೋಚನೆಗಳಿಲ್ಲದೆ ಹೋದಾಗ ಕೇವಲ ನೆಪ ಹೇಳುತ್ತಾಾರೆ ಎಂದು ಅವರು ಹರಿಹಾಯ್ದರು.
ಮೋದಿ ಈ ಯೋಜನೆಯ ಮರುನಾಮಕರಣ ಮಾಡಬೇಕು ಎಂದು ಮಾತ್ರ ಬಯಸಿದ್ದಾರೆ. ಆದರೆ, ಜನರಿಗೆ ತಿಳಿದಿದೆ. ಭಾರತದ ಗ್ರಾಾಮೀಣ ಜೀವನದಲ್ಲಿ ಪರಿವರ್ತಕ ಬದಲಾವಣೆ ತರುವ ಉದ್ದೇಶದಿಂದ ಈ ಯೋಜನೆಯನ್ನು ಡಾ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಜಾರಿಗೆ ತಂದರು ಎಂದಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋೋಗ ಖಾತ್ರಿಿ ಯೋಜನೆ ನರೇಗಾ ಎಂಬ ಹೆಸರಿನಿಂದ ಜನಪ್ರಿಯವಾಗಿದೆ. ಇದು ಗ್ರಾಮೀಣ ಪ್ರದೇಶದ ಜನರಿಗೆ 100 ದಿನಗಳ ಉದ್ಯೋಗ ನೀಡುವ ಮೂಲಕ ಅವರ ಜೀವನೋಪಾಯವನ್ನು ಆರ್ಥಿಕವಾಗಿ ಬಲಗೊಳಿಸುವ ಉದ್ದೇಶ ಹೊಂದಿರುವ ಸರ್ಕಾರದ ಯೋಜನೆಯಾಗಿದೆ.

