ಸುದ್ದಿಮೂಲವಾರ್ತೆ
ಕೊಪ್ಪಳ ನ 08:-ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳು ಹೆಚ್ಚಿನ ಲಾಭದಾಯಕವಾಗಿದೆಂದು ಕೊಪ್ಪಳ ಜಿ.ಪಂ ಯೋಜನಾ ನಿರ್ದೇಶಕ ಟಿ.ಕೃಷ್ಷಮೂರ್ತಿ ಹೇಳಿದರು.
ಇಂದು ಬಹದ್ದೂರಬಂಡಿ ಗ್ರಾ.ಪಂಯ ಚುಕನಕಲ್ ಗ್ರಾಮ ಹಾಗು ಇರಕಲ್ಲಗಡಾ ಗ್ರಾಮದ 2ನೇ ವಾರ್ಡನಲ್ಲಿ 2024-25ನೇ ಸಾಲಿನ ನರೇಗಾ ಯೋಜನೆಯ ಕ್ರಿಯಾ ತಯಾರಿಕೆಯ ಕುರಿತು ಜರುಗಿದ ವಾರ್ಡಸಭೆಯಲ್ಲಿ ಭಾಗಿವಹಿಸಿ ಮಾತನಾಡಿದರು.
ಗ್ರಾ.ಪಂ ಹಾಗು ಅನುಷ್ಠಾನ ಇಲಾಖೆಗಳಾದ ತೋಟಗಾರಿಕೆ, ಕೃಷಿ, ಅರಣ್ಯ,ರೇಷ್ಮೆ ಇಲಾಖೆಗಳಿಂದ ನರೇಗಾದಡಿ ಕಾಮಗಾರಿಗಳನ್ನು ಅನುಷ್ಠಾನಿಸಬಹುದಾಗಿದ್ದು ಮೊದಲ ಆದ್ಯತೆ ಮೇರೆಗೆ ರೈತರು ವೈಯಕ್ತಿಕ ಕಾಮಗಾರಿ ಅನುಷ್ಠಾನಿಸಿರಿ.ಇದರಿಂದ ಆರ್ಥಿಕ ಸದೃಢರಾಗಲು ಸಾಧ್ಯವೆಂದರು. ವೈಯಕ್ತಿಕ ಕಾಮಗಾರಿಗಳಿಗೆ ಬೇರೆ ಬೇರೆ ಮೊತ್ತ ನಿಗದಿಪಡಿಸಲಾಗಿರುತ್ತದೆ. ವೈಯಕ್ತಿಕ ಕಾಮಗಾರಿಗೆ ಕೂಲಿ&ಸಾಮಗ್ರಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳುವದರಿಂದ ಉಪಚಟುವಟಿಕೆಗಳಿಗೆ ಸಹಕಾರಿಯಾಗಲಿದೆ ಎಂದರು.
ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್ ಎಚ್ ಮಾತನಾಡಿ ಸಂಜಿವಿನಿ ಸಂಘದವರು ಸಾಮುದಾಯಿಕ ಆಧಾರಿತ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಿರಿ. ಇದರಿಂದ ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡು ಆರ್ಥಿಕ ಸಬಲರಾಗಲು ಸಾಧ್ಯವಾಗುತ್ತದೆಂದರು.
ವಾರ್ಡಸಭೆಯಲ್ಲಿ ತೋಟಗಾರಿಕೆ, ರೇಷ್ಮೆ ಇಲಾಖೆಗಳಿಂದ ಒಗ್ಗೂಡಿಸುವಿಕೆ ಕಾಮಗಾರಿಗಳ ಕುರಿತು ಕ್ಷೇತ್ರಮಟ್ಟದ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್, ಬಹದ್ದೂರಬಂಡಿ ಗ್ರಾಮ ಪಂಚಾಯತ ಅಧ್ಯಕ್ಷ ಯಲ್ಲಪ್ಪ ತಳವಾರ, ಗ್ರಾಮ ಪಂಚಾಯತ ಸದಸ್ಯರಾದ ಮರಿಯಪ್ಪ ಪಿನ್ನಿ, ರಾಮಣ್ಣ ಗೋಸಲದೊಡ್ಡಿ, ವಿದ್ಯಾಶ್ರೀ, ಪಂಚಾಯತ ಅಭಿವೃದ್ದಿ ಅಧಿಕಾರಿ ಸಿದ್ದಮ್ಮ ಮಠದ, ಕಾರ್ಯದರ್ಶಿ ರುದ್ರಯ್ಯ ಹಿರೇಮಠ, ತಾಂತ್ರಿಕ ಸಂಯೋಜಕ ಯಮನೂರಪ್ಪ, ಐಇಸಿ ಸಂಯೋಜಕ ದೇವರಾಜ ಪತ್ತಾರ, ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಚಂದ್ರಪ್ಪ, ತಾಂತ್ರಿಕ ಸಹಾಯಕರಾದ ಶಿವಪ್ರಸಾದ, ಮಲ್ಲಿಕಾರ್ಜುನ ರಡ್ಡಿ, ಕೊಪ್ಪಳ ಹೊಬಳಿ ಸಹಾಯಕ ತೋಟಗಾರಿಕೆ ಅಧಿಕಾರಿ ಮಲ್ಲಿಕಾರ್ಜುನ ಬಂಡಿ, ತೋಟಗಾರಿಕೆ ಸಹಾಯಕ ತಾಜುದ್ದೀನ್, ಕರವಸೂಲಿಗಾರ ಕೊಟ್ರೇಶ್ ಹಾಗು ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಗ್ರಾಮ ಕಾಯಕ ಮಿತ್ರರು ಸಂಜಿವಿನಿ ಯೋಜನೆಯ ಮಹಿಳೆಯರು, ರೈತರು ಹಾಜರಿದ್ದರು.