ಸುದ್ದಿಮೂಲ ವಾರ್ತೆ ನವದೆಹಲಿ, ಡಿ.23:
ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆ್ ಮೆಡಿಕಲ್ ಸೈನ್ಸ್ (ಏಮ್ಸ್) ಮಾದರಿಯಲ್ಲಿ ಸೂಪರ್ ಸ್ಪೆೆಷಾಲಿಟಿ ಆಸ್ಪತ್ರೆೆಯನ್ನು ಮಂಡ್ಯ ಜಿಲ್ಲೆಯಲ್ಲಿ ಆರಂಭಿಸಲು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದಾರೆ.
ಮಂಡ್ಯ ಸಂಸದರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಾಮಿ ಕೋರಿಕೆ ಮೇರೆಗೆ ಮೋದಿ ಅವರು, ಪ್ರಧಾನಮಂತ್ರಿಿ ಸ್ವಾಾಸ್ಥ್ಯ ಯೋಜನೆಯಡಿ 311 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆೆ ನಿರ್ಮಾಣಕ್ಕೆೆ ಅನುಮತಿ ನೀಡಿದ್ದಾರೆ ಎನ್ನಲಾಗಿದೆ.
ಸೂಪರ್ ಸ್ಪೆೆಷಾಲಿಟಿ ಆಸ್ಪತ್ರೆೆ ನಿರ್ಮಾಣಕ್ಕೆೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ 10 ಎಕರೆ ಜಾಗ ನೀಡುವಂತೆ ರಾಜ್ಯ ಸರ್ಕಾರಕ್ಕೆೆ ಕುಮಾರಸ್ವಾಾಮಿ ಪತ್ರ ಬರೆದಿದ್ದಾರೆ.
ಬಹುತೇಕ ಮಂಡ್ಯ ಮತ್ತು ಮದ್ದೂರು ನಡುವೆ ಆಸ್ಪತ್ರೆೆ ನಿರ್ಮಾಣ ಮಾಡಲು ಚಿಂತನೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಂಡ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆೆ ಆವರಣದಲ್ಲೇ ಅತ್ಯಾಾಧುನಿಕ ಆಸ್ಪತ್ರೆೆ ನಿರ್ಮಿಸಬಹುದೇ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆ ಕೇಂದ್ರ ಸಚಿವರನ್ನು ಕೇಳಿದೆ. ಮಂಡ್ಯಕ್ಕೆೆ ಹೊಂದಿಕೊಂಡಂತೆ 10 ಎಕರೆ ವಿಸ್ತೀರ್ಣ ಭೂಮಿ ನೀಡಿದರೆ ಮುಂದಿನ ದಿನಗಳಲ್ಲೂ ಆಸ್ಪತ್ರೆೆ ಉನ್ನತೀಕರಣಕ್ಕೆೆ ಸಹಕಾರಿಯಾಗಲಿದೆ.
ನಾವು ಕೋರಿರುವ ಸ್ಥಳದಲ್ಲಿ ಅವಕಾಶ ಮಾಡಿಕೊಟ್ಟರೆ ನೆರೆಯ ತುಮಕೂರು, ರಾಮನಗರ ಜಿಲ್ಲೆಗಳ ರೋಗಿಗಳು ಈ ಅತ್ಯಾಾಧುನಿಕ ಆಸ್ಪತ್ರೆೆ ಸೌಲಭ್ಯ ಪಡೆಯಲು ಅವಕಾಶ ಇರಲಿದೆ ಎಂದು ಕುಮಾರಸ್ವಾಾಮಿ ರಾಜ್ಯ ಸರ್ಕಾರಕ್ಕೆೆ ತಿಳಿಸಿದ್ದಾರೆ.
ಏಮ್ಸ್ ಮಾದರಿ ಆಸ್ಪತ್ರೆೆಯಲ್ಲಿ ದಿನದ 24 ಗಂಟೆ ತುರ್ತು ಚಿಕಿತ್ಸಾಾ ಘಟಕ, ಟ್ರಾಾಮಾ ಸೆಂಟರ್, ಮಾರಣಾಂತಿಕ ರೋಗಗಳಾದ ಕ್ಯಾಾನ್ಸರ್, ಹೃದಯಾಘಾತ ಸೇರಿದಂತೆ ಎಲ್ಲ ಬಗೆಯ ರೋಗಗಳಿಗೂ ಚಿಕಿತ್ಸೆೆ ಲಭ್ಯವಿರುತ್ತದೆ.
ಇದೇ ಸಂದರ್ಭದಲ್ಲಿ 1,000 ಕೋಟಿ ರೂ. ವೆಚ್ಚದಲ್ಲಿ ಮಂಡ್ಯ ಹೊರವರ್ತುಲ ರಸ್ತೆೆ ನಿರ್ಮಾಣ ಯೋಜನೆ ಕೈಗೆತ್ತಿಿಕೊಳ್ಳಲು ಕೇಂದ್ರ ಭೂಸಾರಿಗೆ ಇಲಾಖೆ ನಿರ್ಧರಿಸಿದೆ.

