ಸುದ್ದಿಮೂಲ ವಾರ್ತೆ ದೇವದುರ್ಗ, ಡಿ.14
ದೇವದುರ್ಗ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ನರಸಿಂಗರಾವ ಸರಕೀಲ್, ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ ಪಾಟೀಲ ಅಳ್ಳುಂಡಿ

ಆಯ್ಕೆೆಯಾಗಿದ್ದಾಾರೆಂದು ಜಿಲ್ಲಾಾ ಪತ್ರಕರ್ತರ ಸಂಘದ ಅಧ್ಯಕ್ಷ ಆರ್. ಗುರುನಾಥ ತಿಳಿಸಿದರು.
ಅವರು ಭಾನುವಾರ ಪಟ್ಟಣದ ಎ.ಪಿ.ಎಂ.ಸಿ ಸಭಾಂಗಣದಲ್ಲಿ ತಾಲೂಕ ಪತ್ರಕರ್ತರ ಸಂಘದ ತಾಲೂಕ ಪದಾಧಿಕಾರಿಗಳ ಚುನಾವಣೆ ನಡೆದಿದ್ದು, ಎರಡು ಉಪಾಧ್ಯಕ್ಷ ಸ್ಥಾಾನಕ್ಕೆೆ ಬೂದಿಬಸವ, ಆನಂದ ಗುಡಿ, ಎರಡು ಕಾರ್ಯದರ್ಶಿ ಸ್ಥಾಾನಕ್ಕೆೆ ಕೆ.ಬಂದೆನವಾಜ್, ಚಂದ್ರಶೇಖರ ನಾಡಗೌಡ ಹಾಗೂ ಖಜಾಂಚಿಯಾಗಿ ರಂಗನಾಥ ಕೊಂಬಿನ್ ಅವಿರೋಧವಾಗಿ ಆಯ್ಕೆೆಯಾದರೆ, ಅಧ್ಯಕ್ಷ ಸ್ಥಾಾನಕ್ಕೆೆ ನರಸಿಂಗರಾವ ಸರಕೀಲ್, ಬೆಳ್ಳೆೆಯಪ್ಪ ಬಲಿದವ್ ಕೋತಿಗುಡ್ಡ ಅದರಂತೆ ಪ್ರಧಾನ ಕಾರ್ಯದರ್ಶಿಗೆ ರವಿಕುಮಾರ ಪಾಟೀಲ್ ಅಳ್ಳುಂಡಿ, ನಾಗರಾಜ ತೇಲ್ಕಾಾರ ಸ್ಪರ್ಧಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಾ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಸ್ವಾಾಮಿ ಕುಕನೂರು, ಖಜಾಂಚಿ ಮಲ್ಲಿಕಾರ್ಜುನಯ್ಯ, ರಾಜ್ಯ ಸಮಿತಿ ಸದಸ್ಯರ ಬಸವರಾಜ ನಾಗಡದಿನ್ನಿಿ, ಜಿಲ್ಲಾಾ ಉಪಾಧ್ಯಕ್ಷ ಸೂಗೂರೇಶ್ ಗುಡಿ, ಲಕ್ಷೀ ಪ್ರಸನ್ನ ಜೈನ್ ಉಪಸ್ಥಿಿತರಿದ್ದರು.

