ಸುದ್ದಿಮೂಲ ವಾರ್ತೆ
ಮೈಸೂರು, ಆ.17:ನವದೆಹಲಿಯಲ್ಲಿ ಭಾರತರತ್ನ ಅಬ್ದುಲ್ ಕಲಾಂ ಜನ್ಮದಿನ ಅಂಗವಾಗಿ ಸಮಗ್ರ ನಾಗರಿಕ ಶಾಂತಿ ಸಂಸ್ಥೆ ನೀಡುವ ರಾಷ್ಟ್ರೀಯ ಪ್ರಶಸ್ತಿಯನ್ನು ದಿ ಮೈಸೂರು ಕೋ ಆಪರೇಟಿವ್ ಮತ್ತು ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷರು ಮತ್ತು ಹಾಲಿ ನಿರ್ದೇಶಕ ಕೆ. ಉಮಾಶಂಕರ್ ಅವರಿಗೆ ನೀಡಲಾಗಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಭಾರತ ಸರ್ಕಾರದ ಹೈ ಕಮಿಷನರ್ ಆರ್.ಪಿ. ಸಿನ್ಹಾ ಅವರಿಂದ ಸ್ವೀಕರಿಸಿದರು. ಸಹಕಾರಿ ಕ್ಷೇತ್ರದ 30 ವರ್ಷಗಳ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರೂ ಆದ.ಉಮಾಶಂಕರ್ ಅವರನ್ನು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಎಸ್.ಬಿ.ಎಂ. ಮಂಜು ಪಡುವಾರಹಳ್ಳಿಯ ಎಂ ರಾಮಕೃಷ್ಣ ಮತ್ತಿತರರು ಅಭಿನಂದಿಸಿದ್ದಾರೆ.