ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.08:
ವಿದ್ಯುತ್ ವಲಯ ಹಾಗೂ ವಿದ್ಯುತ್ ನೌಕರರ ಮೇಲೆ ಹೆಚ್ಚುತ್ತಿಿರುವ ದಾಳಿಗಳ ವಿರುದ್ಧ ದೇಶವ್ಯಾಾಪಿ ಬಲಿಷ್ಠ ಹೋರಾಟ ಬಲಪಡಿಸಲು ಆಲ್ ಇಂಡಿಯಾ ಪವರ್ಮೆನ್ ೆಡರೇಶನ್ ಕೋಲ್ಕೊೊತ್ತಾಾದಲ್ಲಿ ಡಿಸೆಂಬರ್ 13 ಮತ್ತು 14 ರಂದು 3ನೇ ಅಖಿಲ ಭಾರತ ಸಮ್ಮೇಳನ ಏರ್ಪಡಿಸಿದೆ.
ಅಖಿಲ ಭಾರತ ಅಧ್ಯಕ್ಷ ಕೆ.ಸೋಮಶೇಖರ್ ಅವರು ಸಮ್ಮೇಳನದ ಕುರಿತಾದ ಪೋಸ್ಟರ್ ಬಿಡುಗಡೆ ಮಾಡಿ, ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿ, ಕೋಲ್ಕತ್ತಾಾದ ಮೌಲಾಲಿ ಯುವ ಕೇಂದ್ರದಲ್ಲಿ ಸಮ್ಮೇಳನ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸ್ವಪನ್ ಘೋಷ್, ಶಂಕರ್ ದಾಸ್ ಗುಪ್ತಾಾ, ಸಮರ್ ಸಿನ್ಹಾಾ, ಅಶೋಕ್ ದಾಸ್ ಇನ್ನಿಿತರರು ಪಾಲ್ಗೊೊಳ್ಳಲಿದ್ದಾಾರೆ ಎಂದರು.
ಎಐಯುಟಿಯುಸಿ ಜಿಲ್ಲಾಾಧ್ಯಕ್ಷ ಎ.ದೇವದಾಸ್, ಎಐಪಿಎ್ ಸಂಘಟನಕಾರರಾದ ಡಾ.ಎನ್.ಪ್ರಮೋದ್, ಸುರೇಶ್.ಜಿ ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಗುತ್ತಿಿಗೆ ಕಾರ್ಮಿಕ ಸಂಘದ ಕಿರಣ್ ಕುಮಾರ್ ಇನ್ನಿಿತರರು ಉಪಸ್ಥಿಿತರಿದ್ದರು.
ಕೋಲ್ಕತ್ತಾದಲ್ಲಿ ವಿದ್ಯುತ್ ನೌಕರರ ರಾಷ್ಟ್ರೀಯ ಸಮ್ಮೇಳನ

