ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.25:
ಲಕ್ಷ್ಮಿಿಕ್ಯಾಾಂಪ್ ನ ಶ್ರೀಸೂಗುರೇಶ್ವರ ರೈತ ಉತ್ಪಾಾದಕರ ಕಂಪನಿ, ಐಸ್ಾ ಇಂಡಿಯಾ ೌಂಡೇಶನ್ ಹಾಗೂ ಗ್ರಾಾಮ್ಸ್ ಸಂಸ್ಥೆೆ ಲಿಂಗಸಗೂರು ಇವರ ಸಹಯೋಗದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಮಾಡಲಾಯಿತು.
ಐಸ್ಾಇಂಡಿಯಾ ೌಂಡೇಶನ್ ನಿರ್ದೇಶಕ ಮಹೇಶ್ ಕುಮಾರ ಮಾತನಾಡಿ, ರೈತದೇಶದ ಬೆನ್ನೆೆಲುಬು ಬೆವರು ಸುರಿಸಿ ದುಡಿದರೆ ಮಾತ್ರ ನೆಮ್ಮದಿಯಿಂದ ಹೊಟ್ಟೆೆ ತುಂಬಿಸಿಕೊಳ್ಳಲು ಸಾಧ್ಯ, ಇಂತಹ ಪ್ರತಿಯೊಬ್ಬರ ರೈತನನ್ನು ಗೌರವಿಸುವ ಸಲುವಾಗಿ ಭಾರತದಲ್ಲಿ ಪ್ರತಿವರ್ಷ ಡಿ.23 ರಂದು ರಾಷ್ಟ್ರೀಯ ರೈತರ ದಿನ ಆಚರಿಸಲಾಗುತ್ತದೆ. ರೈತರು ತಾವು ಹಸಿದಿದ್ದರೂ ಕಷ್ಟಪಟ್ಟು ಬೆವರು ಸುರಿಸಿ ದುಡಿದು, ಇತರರು ನೆಮ್ಮದಿಯಿಂದ ಹೊಟ್ಟೆೆ ತುಂಬಿಸಿಕೊಳ್ಳುವಂತೆ ನೋಡುತ್ತಾಾರೆ. ರೈತರ ಬೆವರು ಸುರಿಸಿ ದುಡಿದರೆ ಮಾತ್ರ ದೇಶ ಸುಭಿಕ್ಷೆೆಯಾಗಿರುತ್ತದೆ ಜೊತೆಗೆ ದೇಶದ ಆರ್ಥಿಕತೆಯಲ್ಲಿಯೂ ರೈತರ ಕೊಡುಗೆ ಅಪಾರ. ಭಾರತವನ್ನು ಪ್ರಾಾಚೀನ ಕಾಲದಿಂದಲೂ ಕೃಷಿ ಪ್ರಧಾನ ದೇಶವೆಂದು ಪರಿಗಣಿಸಲಾಗಿದೆ. ಭಾರತದ ಸುಮಾರು 60% ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾಾರೆ ಇಂತಹ ರೈತನನ್ನು ಗೌರವಿಸಬೇಕು ಎಂದು ತಿಳಿಸಿದರು.
ನಂತರ ಗುರುರಾಜ ಕುಲಕರ್ಣಿ ಮಾತನಾಡಿ, ರಾಷ್ಟ್ರೀಯ ರೈತರ ದಿನದ ಇತಿಹಾಸ ಪಾರಿಚಯಿಸಿದರು.
ಗೌರವ ಸಮರ್ಪಣೆ: ಮೊರಾಕ್ಕೊೊ ದೇಶದಿಂದ ಡಾಕ್ಯೂಮೆಂಟರಿ ಶೂಟ್ಗಾಗಿ ಬಂದತಂಹ ಪ್ರತಿನಿಧಿ ಕರೀಂ,ಸಲೀಮಾ, ಜೆಹ್ರಾಾ, ಒತ್ಮನ್, ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಮಂಜುನಾಥ ಹೀರಾ, ಅಯ್ಯನಗೌಡ, ಹನುಮಂತ, ಭೀಮಯ್ಯ, ರಂಗನಾಥ ಪೂಜಾರ, ಬಸವರಾಜಬಡಿಗೇರ,ಬಸವರಾಜ ಬಾಯಿಮನಿ, ಆದಪ್ಪಅಂಬ್ಲಿಿ ಸೇರಿದಂತೆ ಪಟ್ಟಣ ಹಾಗೂ ಕ್ಯಾಾಂಪಿನ ರೈತರು ಇದ್ದರು.
ಲಕ್ಷ್ಮೀಕ್ಯಾಾಂಪ್ ನಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ದೇಶದ ಆರ್ಥಿಕತೆಗೆ ರೈತರ ಕೊಡುಗೆ ಅಪಾರ – ಮಹೇಶ್ ಕುಮಾರ

