ಸುದ್ದಿಮೂಲ ವಾರ್ತೆ ತುರವಿಹಾಳ, ಡಿ.02:
ಬೆಂಗಳೂರಿನ ಚಾಮರಾಜಪೇಟೆಯ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಬೆಳಕು ಸಾಹಿತ್ಯಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ನಿಂದ ಆಯೋಜಿಸಲಾದ 121ನೇ ರಾಷ್ಟ್ರಮಟ್ಟದ ಬೆಳಕು ಸಂಭ್ರಮ ಸಮ್ಮೇಳನದಲ್ಲಿ ಜಾನಪದ, ದಾಸರ ಪದ, ತತ್ವಪದ, ರಂಗಗೀತೆ, ಭಜನಾ ಪದ, ವಚನ ಸಾಹಿತ್ಯ, ಸಣ್ಣಾಾಟ, ದಪ್ಪಿಿನ ನಾಟಕ ಮೊದಲಾದ ಕ್ಷೇತ್ರದಲ್ಲಿ ಸಾಧನೆ ಗುರುತಿಸಿ ಸತ್ಯಪ್ಪ ಕುರಕುಂದಿ ಅವರಿಗೆ ರಾಷ್ಟ್ರಮಟ್ಟದ ಕಾಯಕ ರತ್ನ ಪ್ರಶಸ್ತಿಿ ನೀಡಿ ಗೌರವಿಸಲಾಗಿದೆ.
ಗ್ರಾಾಮೀಣ ಭಾಗದ ಪ್ರತಿಭೆ ಸತ್ಯಪ್ಪ ಕುರಕುಂದಿ ಅವರು ಜಾನಪದ ಕ್ಷೇತ್ರದಲ್ಲಿ 40 ವರ್ಷದ ಸಾಧನೆಗೆ ದೊರೆತ ಪ್ರತಿಲವೆ ರಾಷ್ಟ್ರಮಟ್ಟದ ಕಾಯಕ ರತ್ನ ಪ್ರಶಸ್ತಿಿ. ಕಲ್ಯಾಾಣ ಕರ್ನಾಟಕ ಭಾಗದಲ್ಲಿ ಇವರ ಜನಪದ ತತ್ವಪದ ಸೇವೆಯನ್ನು ಗುರುತಿಸಿ ಇವರಿಗೆ ಬೆಳಕು ಸಂಸ್ಥೆೆ ಅವರು ನೀಡಿರುವ ರಾಷ್ಟ್ರಮಟ್ಟದ ಕಾಯಕ ರತ್ನ ಪ್ರಶಸ್ತಿಿ, ಸ್ಲಾಾಘನೀಯ ಎಂದು ತತ್ವಪದಕಾರ ನಾರಾಯಣಪ್ಪ ಮಾಡಸಿರಿವಾರ ಹರ್ಷ ವ್ಯಕ್ತಪಡಿಸಿದರು.
ಬಹುರೂಪಿ ಚೌಡಯ್ಯ ಹಗಲುವೇಷ ಕಲಾವಿದರ ಟ್ರಸ್ಟ್ ಹಸಮಕಲ್ ಇವರು ನೀಡಿರುವ ಬಹುರೂಪಿ ಕಲಾರತ್ನ. ತತ್ವಪದ ಭಜನಾ ಗಾಯನ ಗಾರುಡಿಗ ಪ್ರಶಸ್ತಿಿ. ಗಾನ ನಾದ ಯೋಗಿ ಪ್ರಶಸ್ತಿಿ. ಕರ್ನಾಟಕ ಗ್ರಾಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಿಯಾ ಸಮಿತಿ, ಅಪ್ಪುು ಯೂತ್ ಬ್ರಿಿಗೇಡ್, ಕರ್ನಾಟಕ ಜಿಲ್ಲಾಾ ಘಟಕ ಹಾವೇರಿ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆೆ, ರಾಜ್ಯ ಸಂಸ್ಥೆೆ ಚಿತ್ರದುರ್ಗ. ಹಿರಿಯೂರು ಇವರು ಬಸವಲಿಂಗ ಶರಣ ಶ್ರೀ ರಾಜ್ಯರತ್ನ ಪ್ರಶಸ್ತಿಿ. ವಿವಿಧ ಸಂಘ ಸಂಸ್ಥೆೆಗಳು 30ಕ್ಕೂ ಅಧಿಕ ಪ್ರಶಸ್ತಿಿಗಳನ್ನು ಪಡೆದ ಸತ್ಯಪ್ಪ ಕುರುಕುಂದಿ ಅವರಿಗೆ ಈ ಪ್ರಶಸ್ತಿಿಯು ಮತ್ತೊೊಂದು ಗರಿ ಮೂಡಿಸಿದೆ ಎಂದು ಪತ್ರಕರ್ತ ಕನಕರಾಯ ಆನೆಗುಂದಿ ಸಂತೋಷ ವ್ಯಕ್ತಪಡಿಸಿದ್ದಾಾರೆ.
ಸತ್ಯಪ್ಪ ಕುರುಕುಂದಿ ಅವರಿಗೆ ರಾಷ್ಟ್ರಮಟ್ಟದ ಕಾಯಕ ರತ್ನ ಪ್ರಶಸ್ತಿ

