ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.22:
ಬಳ್ಳಾಾರಿಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಾಯತ್ತ ಕಾಲೇಜಿನಲ್ಲಿ ಭೌತಶಾಸ ವಿಭಾಗದ ವತಿಯಿಂದ ರಾಷ್ಟ್ರೀಯ ಉಚ್ಛತಮ ಶಿಕ್ಷಣ ಅಭಿಯಾನ (ರುಸಾ) ಪ್ರಾಾಯೋಜಕತ್ವದಲ್ಲಿ ಒಂದು ದಿನದ ‘ಕ್ಲೈಮೇಟ್ ಚೇಂಜ್ ಅಂಡ್ ಎನ್ವಿಿರಾನ್ಮೆಂಟಲ್ ಸಸ್ಟೇನಬಿಲಿಟಿ ವಿಷಯವಾಗಿ ರಾಷ್ಟ್ರಮಟ್ಟದ ಭೌತಶಾಸ ಸಮ್ಮೇಳನವು ಡಿಸೆಂಬರ್ 23ರ ಮಂಗಳವಾರ ಬೆಳಿಗ್ಗೆೆ 10.00 ಗಂಟೆಗೆ ನಡೆಯಲಿದೆ.
ಈ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಬಳ್ಳಾಾರಿ ನಗರದ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿಿ ಸಮಿತಿಯ ಅಧ್ಯಕ್ಷರೂ ಆಗಿರುವ ನಾರಾ ಭರತ್ರೆಡ್ಡಿಿ, ಅತಿಥಿಗಳಾಗಿ ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಕು. ಮಂಜುಶ್ರೀ ಎನ್, ನಿರ್ದೇಶಕರಾದ ಡಾ. ಶೋಭಾ ಜಿ, ಸೇರಿದಂತೆ ಇನ್ನಿಿತರ ಗಣ್ಯರ ಭಾಗವಹಿಸಲಿದ್ದಾಾರೆ.

