ಸುದ್ದಿಮೂಲ ವಾರ್ತೆ ರಾಯಚೂರು, ಡಿ.28:
ಇಂದು ಮಾಧ್ಯಮಗಳನ್ನು ಪ್ರಬಲ ಬಂಡವಾಳ ಶಾಹಿಗಳು ಖರೀದಿಸುತ್ತಿಿದ್ದು ಈ ಹಿಂದಿನಂತೆ ಪತ್ರಕರ್ತರು ನಿರ್ಭೀತಿ, ಮುಕ್ತವಾಗಿ ವರದಿ ಮಾಡಿ ಸಮಾಜದ ಪರಿವರ್ತನೆಗೆ ಸಾಕ್ಷಿಿಯಾಗುವುದು ಸವಾಲಿನ ಸಂಗತಿಯಾಗುತ್ತಿಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜ್ ಕಳವಳ ವ್ಯಕ್ತಪಡಿಸಿದರು.
ನಗರದ ರಾಯಚೂರು ಪತ್ರಿಿಕಾ ಭವನದ ಸಭಾಂಗಣದಲ್ಲಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಜಿಲ್ಲಾ ಮತ್ತು ಪ್ರಾಾದೇಶಿಕ ದಿನಪತ್ರಿಿಕೆಗಳ ಸಂಪಾದಕರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಾಶ್ರಯದಲ್ಲಿ ಹಮ್ಮಿಿಕೊಂಡಿದ್ದ ರಾಷ್ಟ್ರೀಯ ಪತ್ರಿಿಕಾ ದಿನಾಚರಣೆ, ಪ್ರಶಸ್ತಿಿ ಪ್ರದಾನ ಸಮಾರಂಭ ಉದ್ಘಾಾಟಿಸಿ ಮಾತನಾಡಿದರು. ಪತ್ರಿಿಕೆ ನಡೆಸುವುದು ಇಂದು ಕಷ್ಟದ ಕೆಲಸ ಆದರೂ ಉತ್ತಮವಾಗಿ ನಿಭಾಯಿಸಿಕೊಂಡು ಸಮಾಜದ ಸಮಸ್ಯೆೆಗಳ ಜೊತೆಗೆ ಅಭಿವೃದ್ದಿಯಲ್ಲೂ ಗಣನೀಯ ಪಾತ್ರ ವಹಿಸುತ್ತಿಿವೆ. ದೇಶದ ಕೆಲವೇ ಕೆಲವು ಉದ್ಯಮಿಗಳ ಕೈಯಲ್ಲಿ ಮಾಧ್ಯಮ ಕ್ಷೇತ್ರ ಸಿಲುಕಿ ಇಂದು ಪತ್ರಕರ್ತರ ವೃತ್ತಿಿ ಹಗ್ಗದ ಮೇಲಿನ ನಡಿಗೆಯಾಗಿದೆ. ಅದಾನಿ, ಅಂಬಾನಿಯಂತವರ ಕೈಗೊಂಬೆಯಾಗುವ ಆತಂಕ ಹೆಚ್ಚಿಿದೆ. ಇದರಿಂದ ಇಂದು ಮಾಧ್ಯಮ ಕ್ಷೇತ್ರ ಕವಲುದಾರಿ ಹಿಡಿಯುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಲಾಭಕ್ಕಾಾಗಿ ಪತ್ರಿಿಕೋದ್ಯಮ ನಿರ್ವಹಿಸುವುದು ಅತ್ಯಂತ ಅಪಾಯಕಾರಿ. ಇದು ಪ್ರಜಾಪ್ರಭುತ್ವ ವ್ಯವಸ್ಥೆೆಗೆ ಮಾರಕ. ಕೆಲವೇ ವ್ಯಕ್ತಿಿಗಳು ಇದನ್ನು ನಿಯಂತ್ರಿಿಸಿದರೆ, ಮುಕ್ತ ಚರ್ಚೆ ಮತ್ತು ಮಾಹಿತಿಯಿಂದ ಜನ ವಂಚಿತಗೊಳ್ಳುತ್ತಾಾರೆ ಎಂದರು.
ಜಿಲ್ಲೆೆಯಲ್ಲಿ ವಿಮಾನ ನಿಲ್ದಾಾಣ, ಓಪೆಕ್ ಆಸ್ಪತ್ರೆೆಯಲ್ಲಿ ಆಧುನಿಕ ಸೌಲಭ್ಯಘಿ, ರಿಮ್ಸ್ನಲ್ಲಿ ಟ್ರಾಾಮಾ ಕೇರ್ ಕೇಂದ್ರ ಆರಂಭಿಸಲಾಗಿದೆ. ಬಸ್ ಪಾಸ್ ವಿತರಣೆ, ಮಾಸಾಶನ ಹೆಚ್ಚಳ ಮಾಡುವಲ್ಲಿ ಸಿಎಂ ಸಿದ್ದರಾಮಯ್ಯನವರು ಕಾಳಜಿ ವಹಿಸಿದ್ದಾಾರೆ ಎಂದು ಹೇಳಿದರು.
ಕರ್ನಾಟಕ ಮಾಹಿತಿ ಆಯೋಗದ ಕಲಬುರ್ಗಿ ಪೀಠದ ಆಯುಕ್ತ ಬಿ. ವೆಂಕಟಸಿಂಗ್ ಅವರು ವಿಶೇಷ ಸನ್ಮಾಾನ ಸ್ವೀಕರಿಸಿ ಮಾತನಾಡಿ, ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಭವನ ನಿರ್ಮಾಣದಲ್ಲಿ ಜಿಲ್ಲೆಯ ಎಲ್ಲಾಾ ಜನಪ್ರತಿನಿಧಿಗಳ ಕೊಡುಗೆ ಅಪಾರವಿದೆ ಎಂದರು. ಪತ್ರಕರ್ತರ ತುರ್ತು ಪರಿಸ್ಥಿಿತಿಯಲ್ಲಿ ಗಿಲ್ಡ್ ವತಿಯಿಂದ ಸಹಾಯಧನ ನೀಡುವ ಉದ್ದೇಶದಿಂದ ಪತ್ರಕರ್ತರ ತುರ್ತು ನಿಧಿ ಜಾರಿಗೆ ತಂದಿರುವುದಕ್ಕೆೆ ಮೆಚ್ಚುಗೆ ವ್ಯಕ್ತಪಡಿಸಿದರು.
25ನೇ ಬೆಳ್ಳಿಿ ಸಂಭ್ರಮ ಆಚರಣೆಯಲ್ಲಿ ಇರುವ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಈಗ ಹೆಮ್ಮರವಾಗಿ ಬೆಳೆದು ಬಂದಿದೆ ಉತ್ತಮ ಕೆಲಸ ಮಾಡುತ್ತಿಿದೆ ಎಂದರು.
ಗ್ರಾಾಮೀಣ ಶಾಸಕ ಬಸನಗೌಡ ದದ್ದಲ್ ಪತ್ರಕರ್ತರ ತುರ್ತುನಿಧಿಗೆ ಚಾಲನೆ ನೀಡಿ ಮಾತನಾಡಿ, ಮಾಧ್ಯಮಗಳು ಜನರಿಗೆ ಸತ್ಯಾಾಸತ್ಯತೆಯನ್ನು ತಿಳಿಸಬೇಕೆ ಹೊರತು ಸುಳ್ಳು ಪ್ರಕಟಿಸಬಾರದು. ಪ್ರಸ್ತುತ ಕಾಲಘಟ್ಟದಲ್ಲಿ ಪತ್ರಿಿಕೋದ್ಯಮ ತನ್ನ ಪಾವಿತ್ರತೆಯನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದರು.
ಪತ್ರಿಿಕೋದ್ಯಮ ವಿದ್ಯಾಾರ್ಥಿಗಳಿಗೆ ಮಾತ್ರವಲ್ಲದೇ ಹೊಸದಾಗಿ ವೃತ್ತಿಿಪರ ಪತ್ರಕರ್ತರಿಗೆ ತರಬೇತಿ ನೀಡುವ ಅಗತ್ಯವಿದೆ. ದೇಶ ಮತ್ತು ರಾಜ್ಯದಲ್ಲಿ ಮುದ್ರಣ ಮತ್ತು ವಿದ್ಯುನ್ಮಾಾನ ಮಾಧ್ಯಮಗಳು ಅತ್ಯಂತ ಬಲಿಷ್ಠವಾಗಿದೆ. ಈ ನಾಲ್ಕು ಅಂಗ ಒಗ್ಗಟ್ಟಾಾಗಿ ಕಾರ್ಯನಿರ್ವಹಿಸಿದರೆ ಮಾತ್ರ ದೇಶ ಅಭಿವೃದ್ಧಿಿ ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗಿಲ್ಡ್ ಅಧ್ಯಕ್ಷ ವಿಜಯಕುಮಾರ ಜಾಗಟಗಲ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ, ಅವರು ಗಿಲ್ಡ್ ನ ವೆಬ್ ಸೈಟ್ ಲೋಕಾರ್ಪಣೆ ಮಾಡಿದರು. ಮಹಾನಗರ ಪಾಲಿಕೆ ಮಾಜಿ ಮಹಾಪೌರರು ನರಸಮ್ಮ ನರಸಿಂಹಲು ಮಾಡಿಗಿರಿ ಅವರು ಪತ್ರಿಿಕಾ ವಿತರಕರಿಗೆ ಜರ್ಕಿನ್ ವಿತರಿಸಿದರು.
ಇದೇ ವೇಳೆ ರಘುನಾಥರೆಡ್ಡಿಿ ಅವರಿಗೆ 25 ಸಾವಿರ ನಗದು ರಿಪೋರ್ಟರ್ಸ್ ಗಿಲ್ಡ್ನ ಜೀವಮಾನ ಸಾಧನೆ ಪ್ರಶಸ್ತಿಿ ನೀಡಿ ಗೌರವಿಸಲಾಯಿತು. ದಿ.ಎನ್ಕೆ. ಕುಲಕರ್ಣಿ ಸ್ಮರಣಾರ್ಥ ರಾಯಚೂರು ವಾಣಿ ಪ್ರಾಾಯೋಜಿತ ದತ್ತಿಿ ಪ್ರಶಸ್ತಿಿ ಪ್ರಜಾಪ್ರಸಿದ್ದ ಪತ್ರಿಿಕೆ ಜಿಲ್ಲಾಾ ವರದಿಗಾರ ಬಿ.ರಾಜುಗೆ, ದಿದ್ಗಿಿ ಕಿಶನರಾವ್ ಹಾಗೂ ಹನುಮಂತ್ರಾಾಯಗೌಡ ಸ್ಮರಣಾರ್ಥ ಪ್ರಶಸ್ತಿಿ ಪ್ರಜಾವಾಣಿಯ ಹಿರಿಯ ವರದಿಗಾರ ಚಂದ್ರಕಾಂತ ಮಸಾನಿಗೆ, ಕೆ.ಅಡಿವೆಪ್ಪ ಸ್ಮಾಾರಕ ಕೆ.ಸತ್ಯನಾರಾಯಣ ಪ್ರಾಾಯೋಜಿತ ಪ್ರಶಸ್ತಿಿಗೆ ಅಮೋಘ ವಾಹಿನಿಯ ವರದಿಗಾರ ಕೆ.ಶ್ರೀನಿವಾಸ್ ಅವರಿಗೆ ಪ್ರದಾನ ಮಾಡಲಾಯಿತು. ಅಲ್ಲದೆ, ಕ್ರಿಿಕೆಟ್ ಪಂದ್ಯಾಾವಳಿಯಲ್ಲಿ ವಿಜೇತ ನಾಲ್ಕು ತಂಡಗಳಿಗೆ ಟ್ರೋೋಫಿ, ಉತ್ತಮ ಬಾಲರ್, ಪಂದ್ಯಪುರುಷೋತ್ತಮ ಟ್ರೋೋಫಿಗಳ ನೀಡಿ ಅಭಿನಂದಿಸಲಾಯಿತು.
ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ್ ಪ್ರಾಾಸ್ತಾಾವಿಕ ಮಾತನಾಡಿದರು. ವೇದಿಕೆಯಲ್ಲಿ ವಿಜಯವಾಣಿ ಸ್ಥಾಾನಿಕ ಸಂಪಾದಕರಾದ ಜಗನ್ನಾಾಥ ಆರ್ ದೇಸಾಯಿ, ಹೆಚ್ಚುವರಿ ಪೊಲೀಸ್ ಅಧಿಕಾರಿ ಎಂ ಕುಮಾರಸ್ವಾಾಮಿ, ಗಿಲ್ಡ್ ಮಾಜಿ ಅಧ್ಯಕ್ಷ ಡಿ.ಕೆ.ಕಿಶನರಾವ್, ಜಿಲ್ಲಾ ಪ್ರಾಾದೇಶಿಕ ದಿನಪತ್ರಿಿಕೆಗಳ ಸಂಘದ ಅಧ್ಯಕ್ಷ ಚನ್ನಬಸವ ಬಾಗಲವಾಡ, ಪ್ರ.ಕಾರ್ಯದರ್ಶಿ ಖಾನ್ ಸಾಬ್ ಮೋಮಿನ್, ಚನ್ನಬಸವಣ್ಣಘಿ, ಎಂ.ಜಯರಾಮ್, ಶ್ರೀಕಾಂತಸಾವೂರ,, ಕೆ.ಸಣ್ಣ ಈರಣ್ಣಘಿ, ಶ್ರೀನಿವಾಸ ಇನಾಂದಾರ್, ಮಲ್ಲಿಕಾರ್ಜುನ ಸ್ವಾಾಮಿ, ಮಲ್ಲನಗೌಡ, ಸಂಗಮೇಶ ವಸದ, ಖಾಜಾ ಹುಸೇನ್, ಅರುಣಕುಮಾರ್, ಸಂದೀಪ, ಯಲ್ಲಪ್ಪ ಸೇರಿದಂತೆ ಇತರರು ಉಪಸ್ಥಿಿತರಿದ್ದರು.
ರಾಷ್ಟ್ರೀಯ ಪತ್ರಿಿಕಾ ದಿನಾಚರಣೆ, ಪ್ರಶಸ್ತಿಿ ಪ್ರದಾನ ಸಮಾರಂಭ ಬಂಡವಾಳ ಶಾಹಿಗಳ ಹಿಡಿತದಿಂದ ನಿರ್ಭೀತಿ, ಮುಕ್ತ ವರದಿಗಾರಿಕೆ ಪತ್ರಕರ್ತರಿಗೆ ಸವಾಲು-ಬೋಸರಾಜ್

