ಬೆಂಗಳೂರು,ಮೇ 20: 2022-23ನೇ ಸಾಲಿನಲ್ಲಿ ನಡೆದ ಐಸಿಎಸ್ ಇ ಎಸ್,ಎಸ್,ಎಲ್.ಸಿ. ಪರೀಕ್ಷೆಯ ಪಲಿತಾಂಶದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಆನೇಕಲ್ ತಾಲ್ಲೂಕಿನ ಇಗ್ಗಲೂರು ಬಳಿಯಿರುವ ನ್ಯಾಷ್ ನಲ್ ಪಬ್ಲಿಕ್ ಶಾಲೆ, ಹೌದು 2022-23 ನೇ ಸಾಲಿನಲ್ಲಿ ನಡೆದ ಐಸಿಎಸ್ ಇ ಎಸ್,ಎಸ್,ಎಲ್.ಸಿ. ಪರೀಕ್ಷೆಯ ಪಲಿತಾಂಶದಲ್ಲಿ ನ್ಯಾಷ್ ನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾದ ಆರ್, ಶಿವಾಂಗಿ ಎಂಬ ವಿದ್ಯಾರ್ಥಿನಿಯು ಶೇ ೯೯% ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾಳೆ, ಇನ್ನು ಇಂದು ನ್ಯಾಷ್ ನಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಐಸಿಎಸ್ ಇ ಎಸ್,ಎಸ್,ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ನ್ಯಾಷ್ ನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಆರ್,ಶಿವಾಂಗಿ ಶೇ 99%ಚೇತನ್ ಗೌಡ 98%, ಹೇಮಚಂದ್ರ ಎಂ.ರೆಡ್ಡಿ 98% ಮತ್ತು ಗಿರಿನಂದಿನಿ 98% ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಇನ್ನು ನ್ಯಾಷ್ ನಲ್ ಪಬ್ಲಿಕ್ ಶಾಲೆಯಲ್ಲಿ ಒಟ್ಟು 43 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದು ಅದರಲ್ಲಿ 37 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಅಂಕವನ್ನು ಪಡೆದರೆ, 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಅಂಕವನ್ನು ಪಡೆದಿದ್ದಾರೆ, ಒಟ್ಟಾರೆಯಾಗಿ ನ್ಯಾಷ್ ನಲ್ ಪಬ್ಲಿಕ್ ಶಾಲೆಯಲ್ಲಿ ಕಳೆದ ೯ ವರ್ಷಗಳಿಂದ ನೂರಕ್ಕೆ ನೂರರಷ್ಠು ಪಲಿತಾಂಶ ಬಂದಿದೆ ಎಂದರೆ ತಪ್ಪಾಗಲಾರದು. ಇನ್ನು ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಗೋಪಾಲ್, ನ್ಯಾಷ್ ನಲ್ ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ರಾಮರೆಡ್ಡಿ, ಕಾರ್ಯದರ್ಶಿಗಳಾದ ಯಾದವ್ ಸಾರ್, ಪ್ರಾಂಶುಪಾಲರಾದ ವೀಣಾ ಮೋಂಟಿ ಡಿಸೋಜ, ತರಗತಿ ಶಿಕ್ಷಕರಾದ ಮುರಳಿ, ಬಾನುಲೇಖ ಮತ್ತು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.