ಹೊಸಕೋಟೆ, ,ನ.20: ರಾಷ್ಟ್ರದ ಸ್ವಾತಂತ್ಯ್ರ ಹಾಗೂ ಐಕ್ಯತೆಯನ್ನು ಸಂರಕ್ಷಿಸಲು ಮತ್ತು ಬಲಪಡಿಸಲು ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕೆಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆಂಪಣ್ಣ ಹೇಳಿದರು.
ಹೊಸಕೋಟೆ ತಾಲೂಕು ನಂದಗುಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು 12ನೇ ಶತಮಾನದಲ್ಲಿಯೇ ಬಸವಣ್ಣನವರು ಭೋದಿಸಿದ ಧರ್ಮ ನಿರಪೇಕ್ಷತೆಯನ್ನು ಪಾಲಿಸಬೇಕಾಗಿದ್ದು ನಮ್ಮ ಸಂವಿಧಾನದಲ್ಲಿಯೂ ವಿಶೇಷಾಧ್ಯತೆ ಮೇರೆಗೆ ಅದನ್ನು ಅಳವಡಿಸಲಾಗಿದ್ದು ಸಂವಿಧಾನಕ್ಕೆ ಎಲ್ಲರೂ ಗೌರವಕೊಡಬೇಕು.
ನಮ್ಮ ದೇಶದಲ್ಲಿ ವಿವಿಧ ಜಾತಿ ಧರ್ಮಗಳು ಇದ್ದು ಐಕ್ಯತೆಯನ್ನು, ಸೌಹಾರ್ದತೆಯನ್ನು ಕಾಯ್ದುಕೊಂಡು ಹೋಗಬೇಕಾದ ಅವಶ್ಯಕತೆ ಇದೆ ಎಂದ ಅವರು ಮಾನವೀಯ ಮೌಲ್ಯಗಳನ್ನು ಉಳಿಸಬೇಕಾದರೆ ಮೊದಲು ಮಾನವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೆಕೆಂದು ಹೇಳಿದರು.
ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುಳಾ ನಾಗೇಶ್ ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಮುಂದುವರೆದಿರುವ ಈಗಿನ ಸಮಯದಲ್ಲ್ಲಿ ಧರ್ಮದ ಹೆಸರಿನಲ್ಲಿ ಸಮಾಜದ ಶಾಂತಿಯನ್ನು ಕದಡುವದರಿಂದ ಅಭಿವೃದ್ಧಿಯ ವೇಗ ಕುಂಟಿತವಾಗುತ್ತದೆ. ಶೋಷಿತ ವರ್ಗಗಳ ಕುರಿತು ಹಾಗೂ ದುರ್ಬಲವರ್ಗದವರ ಏಳಿಗೆಗಾಗಿ, ಪರಿಸರ ರಕ್ಷಣೆಗಾಗಿ ಹೆಚ್ಚು ಮಹತ್ವವನ್ನು ಕೊಡಬೇಕೆಂದ ಅವರು
ಪರಸ್ಪರ ಸೋದರತ್ವವನ್ನು ಕಾಪಾಡುವ ಮೂಲಕ ದೇಶವನ್ನು ಅಭಿವೃದ್ದಿಪಥತದಲ್ಲಿ ಮುನ್ನಡೆಸಲು ಅನುವುಮಾಡಿಕೊಟ್ಟಂತಾಗುತದೆ ಯಾವುದೇ ಧರ್ಮಗಳು ಅಹಿಂಸೆಯನ್ನು ಭೋಧಿಸುವದಿಲ್ಲ. ಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದ್ದು, ಸಮಾಜ ಸುಧಾರಕರ, ಸ್ವಾಂತಂತ್ರ್ಯ ಹೋರಾಟಗಾರರ, ಮಹಾಪುರುಷರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಪಿಡಿಓ ಕೆಂಪಣ್ಣ ಅವರು ಎಲ್ಲರಿಗೂ ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಭೋಧಿಸಿದರು. ಈ ರಾಷ್ಟ್ರೀಯ ಐಕ್ಯತಾ ಸಪ್ತಾಹ ರಾಜ್ಯಾದ್ಯಂತ ನ.19ರಿಂದ 25ವರೆಗೆ ನಡೆಯಲಿದ್ದು ನ.20ರಂದು ಅಲ್ಪ ಸಂಖ್ಯಾತರ
ಕಲ್ಯಾಣ ದಿನ, ನವೆಂಬರ ೨೧ ಭಾಷಾ ಸೌಹಾರ್ಧತಾ ದಿನ, ನವೆಂಬರ 22 ರಂದು ದುರ್ಬಲ ವರ್ಗಗಳ ದಿನ ನವೆಂಬರ 23 ರಂದು ಸಾಂಸ್ಕೃತಿಕ ಏಕತಾ ದಿನ, ನವೆಂಬರ 24 ಮಹಿಳಾ ದಿನ ನವೆಂಬರ 25 ರಂದು ಪರಿಸರ ರಕ್ಷಣಾ ದಿನ ಹೀಗೆ ಪ್ರತಿ ವಿಷಯಗಳ ಮೇಲೆ 7 ದಿನಗಳ ಕಾಲ ನಂದಗುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಾ ಕಾಲೇಜು ಸಪ್ತಾಹ ಕಾರ್ಯಕ್ರಮ ನಡೆಯಲಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎನ್ ವಿ ಮುನಿರಾಜು, ಪಂಚಾಯಿತಿ ಕಾರ್ಯದರ್ಶಿ ವೆಂಕಟೇಶ್, ಲೆಕ್ಕಾಧಿಕಾರಿ ಸಂಪತ್ ಕುಮಾರ್, ಕರ ವಸೂಲಿಗಾರ ಮನೋಜ್ ಕುಮಾರ್, ನಯನ, ಜಯಪ್ರಕಾಶ್ ಹಾಜರಿದ್ದರು.20,rastriya saptaha,1.jpg