ಸುದ್ದಿಮೂಲ ವಾರ್ತೆ ಮಸ್ಕಿ, ಜ.25:
ಪಟ್ಟಣದ ದೇವಾನಾಂಪ್ರಿಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ತಹಸೀಲ್ದಾಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ ಪ್ರತಿ ಹೋಬಳಿಗೆ ಒಬ್ಬರಂತೆ ಬಿಎಲ್ಓ ಹಾಗೂ ಇಬ್ಬರು ಬಿಎಲ್ಓ, ಮೇಲ್ವಿಿಚಾರಕ ರವರಿಗೆ ಸನ್ಮಾಾನಿಸಿ ಪ್ರಶಂಸನಾ ಪತ್ರನೀಡಿ ಗೌರವಿಸಿದರು. ಮತದಾರರಿಗೆ ಎಪಿಕ್ ಕಾರ್ಡ್ ವಿತರಣೆ, ಸಾಂಕೇತಿಕವಾಗಿ ಬಿಎಲ್ಓ ರವರಿಗೆ ಕಿಟ್ ವಿತರಣೆ ಮಾಡಿ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಉದ್ಘಾಾಟನೆ ನೆರವೇರಿಸಿದರು. ತಹಸೀಲ್ದಾಾರ್ ಮಂಜುನಾಥ ಭೋಗಾವತಿ ಅವರು ವಿದ್ಯಾಾರ್ಥಿಗಳಿಗೆ, ತಮ್ಮ ಮತವನ್ನು ಯಾರಿಗೂ ಮಾರಿಕೊಳ್ಳೋೋದಿಲ್ಲ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುತ್ತೇವೆ ಕಡ್ಡಾಾಯವಾಗಿ ಮತದಾನ ಮಾಡುತ್ತೇವೆ ಎಂದು ಪ್ರತಿಜ್ಞಾವಿಧಿ ಬೋಧಿಸಿದರು.
ಈ ವೇಳೆ ಮತದಾನದ ಮಹತ್ವದ ಕುರಿತು ವಿದ್ಯಾಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ವಿದ್ಯಾಾರ್ಥಿಗಳೂ ಸಹ ಮಾತನಾಡಿ, ಮತದಾನದ ಅರ್ಹತೆ ಪಡೆದಿರುವ ನಾವೆಲ್ಲಾ ಮತಪಟ್ಟಿಿಯಲ್ಲಿ ಹೆಸರು ನೋಂದಾಯಿಸಿ, ತಮ್ಮ ಹಕ್ಕನ್ನು ಚಲಾಯಿಸಲು ಸಿದ್ದರಾಗೋಣ ಎಂದರು.
ಈ ಸಂದರ್ಭದಲ್ಲಿ ಸ್ವೀಪ್ ನೋಡಲ್ ಅಧಿಕಾರಿ, ತಹಸೀಲ್ದಾಾರ್ ಮಂಜುನಾಥ ಭೋಗಾವತಿ, ತಾ.ಪಂ ಇಒ ಅಮರೇಶ್ ಯಾದವ್, ಪುರಸಭೆ ಮುಖ್ಯಾಾಧಿಕಾರಿ ನರಸರೆಡ್ಡಿಿ, ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಾಚಾರ್ಯರು, ಶೈಕ್ಷಣಿಕ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಗಳು, ಶಾಲಾ ಕಾಲೇಜುಗಳ ವಿದ್ಯಾಾರ್ಥಿಗಳು ಭಾಗಿಯಾಗಿದ್ದರು.
ರಾಷ್ಟ್ರೀಯ ಮತದಾರರ ದಿನಾಚರಣೆ ಸನ್ಮಾನ ಹಾಗೂ ಪ್ರತಿಜ್ಞಾ ವಿಧಿ ಬೋಧನೆ

