ಬಳ್ಳಾರಿ, ಜೂ. 06: ಜಿಎಸ್ಟಿ ಸಂಗ್ರಹ ಮತ್ತು ಪಾವತಿಸುವಲ್ಲಿ ವಾಣಿಜ್ಯೋದ್ಯಮಿಗಳು ಪ್ರತಿನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ದಾವಣಗೆರೆ ವಲಯದ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಎಸ್. ಮಹಾಂತೇಶ್ ಅವರು ಆಶ್ವಾಸನೆ ನೀಡಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ಸಂಸ್ಥೆಯ ಸಭಾಭವನದಲ್ಲಿ ವಾಣಿಜ್ಯ ತೆರಿಗೆಗಳ ಇಲಾಖೆಯ ಅಧಿಕಾರಿಗಳು ಮತ್ತು ವಾಣಿಜ್ಯೋದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಹಭಾಗಿತ್ವದಲ್ಲಿ ಮಂಗಳವಾರ ನಡೆದ `ಜಿಎಸ್ಟಿ ಅರಿವು’ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ನಡೆಯುತ್ತಿರುವ `ಜಿಎಸ್ಟಿ ಅರಿವು’ ಸಭೆ ಸ್ವಾಗತಾರ್ಹ. ಹೊಸದಾಗಿ ಆನ್ಲೈನ್ನಲ್ಲಿ ಜಿಎಸ್ಟಿ ನೋಂದಣಿಯಲ್ಲಿ ಆಗುತ್ತಿರುವ ತಾಂತ್ರಿಕ ಸಮಸ್ಯೆಗಳು, ಉದ್ಯಮಿಗಳು ಎದುರಿಸುತ್ತಿರುವ ತೊಂದರೆಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಲಾಗುತ್ತದೆ. ಕೆಲವೊಬ್ಬ ಅಧಿಕಾರಿಗಳು ಉದ್ಯಮಿಗಳು ಮತ್ತು ಆಡಿಟರ್ಗಳ ಜೊತೆ ತೋರುತ್ತಿರುವ ಅಸಭ್ಯ – ಆಶಿಸ್ತು, ಕರ್ತವ್ಯ ಪಾಲನೆಯಲ್ಲಿ ತೋರುತ್ತಿರುವ ಪಕ್ಷಪಾತ, ನಿರ್ಲಕ್ಷö್ಯ, ಉದ್ದೇಶಪೂರ್ವಕ ವಿಳಂಬ, ಅನಗತ್ಯ ಸಮಯ ವ್ಯರ್ಥ ಆಗುವಂತೆ ಮಾಡುತ್ತಿರುವುದು ಸರಿಯಲ್ಲ. ಈ ಕುರಿತು ಮೇಲಧಿಕಾರಿಗಳ ಜೊತೆ ಚರ್ಚೆ ನಡೆಸಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ ಎಂದರು.
ಸAಪನ್ಮೂಲ ವ್ಯಕ್ತಿ, ಡಿಸಿ ಆಡಿಟ್ ಅಧಿಕಾರಿ ರಂಗಸ್ವಾಮಿ ಅವರು, ನ್ಯಾಚ್ಯುರಲ್ ಜಸ್ಟೀಸ್ನಂತೆ ಯಾವುದೇ ನೋಟೀಸ್ ಜಾರಿ ಆದಾಗ ಕರ್ತವ್ಯದ ಕನಿಷ್ಠ 15 ದಿನಗಳ ಕಾಲಾವಕಾಶ ನೀಡಬೇಕು. ತುರ್ತು ಸಂದರ್ಭಗಳಲ್ಲೂ ಕರ್ತವ್ಯದ 7 ದಿನಗಳ ಕಾಲಾವಕಾಶ ನೀಡಬೇಕಿದೆ. ಕಚೇರಿಗೆ ಕೇವಲ ಆಡಿಟರ್ಗಳು, ಡೀರ್ಸ್ಗಳು ಮಾತ್ರವಲ್ಲ ಯಾರಾದರೂ ಬರಬಹುದು. ಇಲಾಖೆಯ ಸಿಬ್ಬಂದಿ ಎಲ್ಲಾ ಪತ್ರಗಳನ್ನು ಮತ್ತು ಮನವಿಗಳನ್ನು ಸ್ವೀಕರಿಸಿ, ಸ್ವೀಕೃತಿಯನ್ನು ನೀಡಲು ಅಗತ್ಯ ನಿರ್ದೇಶನಗಳನ್ನು ನೀಡಲಾಗುತ್ತದೆ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ಸಂಸ್ಥೆಯ ಅಧ್ಯಕ್ಷ ಸಿ. ಶ್ರೀನಿವಾಸ್ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಉದ್ಯಮಿಗಳು ಮತ್ತು ಅಧಿಕಾರಿಗಳ ಮಧ್ಯೆ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಸೇತುವೆಯಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಕೋವಿಡ್-19ರ ನಂತರ ತೆರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಉದ್ಯಮಿಗಳ ಜೊತೆ ಯಾವದೇ ಸಭೆಗಳು ನಡೆದಿಲ್ಲ. ಈಗ ಪುನಃ ಪ್ರಾರಂಭವಾಗುತ್ತಿವೆ. 46 ಸಂಘ ಸಂಸ್ಥೆಗಳು ಈ ಸಭೆಗೆ ಹಾಜರಾಗಿದ್ದು ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ಯಶವಂತ್ರಾಜ್ ನಾಗಿರೆಡ್ಡಿ ಅವರು ಸ್ವಾಗತಿಸಿ, ಸಭೆಯನ್ನು ನಿರ್ವಹಿಸಿ, ಸಭೆಯ ಎಲ್ಲಾ ವಿಚಾರಗಳನ್ನು ಜಂಟಿ ಆಯುಕ್ತರು ವಿಶೇಷ ಗಮನ ನೀಡಿ ಆಲಿಸಿದ್ದು, ನಮ್ಮೆಲ್ಲರ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಸೂಚಿಸಿ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ಮಾಹಿತಿ ನೀಡಲಿದ್ದಾರೆ. ಕೆಲ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರಲಿದ್ದಾರೆ ಎಂದು ಹೇಳಿದರು.
ವಿವಿಧ ಸಂಘಗಳ ಪದಾಧಿಕಾರಿಗಳು, ವಾಣಿಜ್ಯೋದ್ಯಮಿಗಳು, ಆಡಿಟರ್ಗಳು ಮತ್ತು ಚಾರ್ಟೆಡ್ ಅಕೌಂಟೆAಟ್ಗಳು ಸಭೆಯಲ್ಲಿ ಪಾಲ್ಗೊಂಡು ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊAಡರು.
ಉಪಾಧ್ಯಕ್ಷರುಗಳಾದ ಕೆ. ರಮೇಶ್ ಬುಜ್ಜಿ, ಕೆ.ಸಿ. ಸುರೇಶ್ ಬಾಬು, ಜಂಟಿ ಕಾರ್ಯದರ್ಶಿ ಎಸ್. ದೊಡ್ಡನಗೌಡ, ಸಾರ್ವಜನಿಕ ಸಂಪರ್ಕ ಸಮಿತಿ ಚೇರ್ಮೆನ್ ಡಾ. ಮರ್ಚೇಡ್ ಮಲ್ಲಿಕಾರ್ಜುನ,
ಪತ್ರಿಕಾ ಮತ್ತು ಮಾಧ್ಯಮ ಕಮಿಟಿ ಚೇರ್ಮೆನ್ ಟಿ. ಶ್ರೀನಿವಾಸರಾವ್, ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನ ಸಿಇಓ ಡಾ. ಡಿ.ಎಲ್. ರಮೇಶ್ಗೋಪಾಲ್, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ ವಿ. ರವಿಕುಮಾರ್, ಎಪಿಎಂಸಿ ಕಮಿಟಿ ಚೇರ್ಮೆನ್ ವಿ. ರಾಮಚಂದ್ರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.