ಸುದ್ದಿಮೂಲ ವಾರ್ತೆ ಬೆಂಗಳೂರು, ಅ.12:
ರಾಜ್ಯದಲ್ಲಿ ಮಾರಾಟವಾಗುವ ಕೆಮ್ಮು ಸಿರಪ್ಗಳಲ್ಲಿ ಯಾವುದೇ ಹಾನಿಕಾರಕ ರಸಾಯನಿಕಗಳು ಕಂಡು ಬಂದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು ಮಧ್ಯಪ್ರದೇಶ ಹಾಗೂ ರಾಜಸ್ಥಾಾನದಲ್ಲಿ ಕೆಮ್ಮಿಿನ ಸಿರಪ್ ಸೇವಿಸಿ 15ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟ ಹಿನ್ನೆೆಲೆಯಲ್ಲಿ ಎಚ್ಚೆೆತ್ತುಕೊಂಡ ರಾಜ್ಯ ಸರ್ಕಾರ ಇದುವರೆಗೂ 390ಕ್ಕೂ ಹೆಚ್ಚು ಕೆಮ್ಮಿಿನ ಸಿರಪ್ ಸ್ಯಾಾಂಪಲ್ ತಪಾಸಣೆ ನಡೆಸಿದೆ. ಅವುಗಳಲ್ಲಿ ಯಾವುದೇ ರೀತಿಯಾದ ನೆಗೆಟಿವ್ ಅಂಶ ವರದಿಯಾಗಿಲ್ಲ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿರುವ ಎಲ್ಲ ಔಷಧಿ ತಯಾರಿಕೆ ಕಂಪನಿಗಳು ಅನುಸರಿಸುತ್ತಿಿರುವ ಮಾನದಂಡ ಪರಿಶೀಲನೆ ಮಾಡಲಾಗುತ್ತಿಿದೆ. ಮಾನದಂಡ ಅನುಸರಣೆಯಲ್ಲಿ ವ್ಯತ್ಯಾಾಸವಾಗುತ್ತಿಿದೆಯೇ ಎಂಬುದನ್ನು ಕಂಡು ಹಿಡಿಯಲು ಪರಿಶೀಲನೆ ಮಾಡಲಾಗುತ್ತಿಿದೆ ಎಂದು ಸಚಿವರು ಹೇಳಿದರು.