ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.14
ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆೆಯಲ್ಲಿ ಕ್ರಾಾಂತಿಕಾರಿ ಬದಲಾವಣೆ ತರುವ ನಿಟ್ಟಿಿನಲ್ಲಿ ಕಲ್ಯಾಾಣ ಕರ್ನಾಟಕ ಭಾಗದಲ್ಲಿ 41 ನೆಹರು ಸ್ಟ್ರೀಮ್ ಲ್ಯಾಾಬ್’ ಗಳನ್ನು ಸ್ಥಾಾಪಿಸುವುದಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
ಈ ಬಗ್ಗೆೆ ಪತ್ರಿಿಕಾ ಪ್ರಕಟಣೆ ನೀಡಿರುವ ಅವರು, ಕಲ್ಯಾಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಿ ಮಂಡಳಿ ಸಹಯೋಗದೊಂದಿಗೆ ಜಾರಿಗೊಳ್ಳುತ್ತಿಿರುವ ಈ ಯೋಜನೆಯು, ಸಾಂಪ್ರದಾಯಿಕ ವಿಜ್ಞಾನ ಕಲಿಕೆಗಿಂತ ಒಂದು ಹೆಜ್ಜೆೆ ಮುಂದೆ ಹೋಗಿ, ಭವಿಷ್ಯದ ಅತ್ಯಾಾಧುನಿಕ ವಿಜ್ಞಾನ ಮತ್ತು ಪರಿಸರ ಸುಸ್ಥಿಿರತೆಯನ್ನು ಒಳಗೊಂಡ ವಿಶಿಷ್ಟ ಪಠ್ಯಕ್ರಮವನ್ನು ಆ ಭಾಗದ ವಿದ್ಯಾಾರ್ಥಿಗಳಿಗೆ ಪರಿಚಯಿಸಲಿದೆ. ‘ಸ್ಟ್ರೀಮ್’ ಪದದ ವ್ಯಾಾಖ್ಯಾಾನವನ್ನು ಜಾಗತಿಕ ವೈಜ್ಞಾನಿಕ ಪ್ರಗತಿ ಮತ್ತು ಸ್ಥಳೀಯ ಪರಿಸರ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲಾಗಿದೆ ಎಂದು ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
ಸ್ಟ್ರೀಮ್ ಎಂದರೆ ವಿಜ್ಞಾನ , ತಂತ್ರಜ್ಞಾನ,ರೊಬೊಟಿಕ್ಸ್ ಪರಿಸರ ವಿಜ್ಞಾನ, ಖಗೋಳಶಾಸ ಮತ್ತು ಗಣಿತ ಆಗಿರುತ್ತದೆ. ಇದೇ ಮೊದಲ ಬಾರಿಗೆ ಶಾಲಾ ಮಟ್ಟದಲ್ಲಿಯೇ ವಿದ್ಯಾಾರ್ಥಿಗಳಿಗೆ ‘ಕ್ವಾಾಂಟಮ್ ಫಿಸಿಕ್ಸ್’ನ ಮೂಲಭೂತ ಪರಿಕಲ್ಪನೆಗಳನ್ನು ಪರಿಚಯಿಸಲಾಗುತ್ತಿಿದೆ. ಇದು ಬ್ರಹ್ಮಾಾಂಡದ ಮೂಲ ಸ್ವರೂಪದ ಬಗ್ಗೆೆ ಮಕ್ಕಳಲ್ಲಿ ಕುತೂಹಲ ಮೂಡಿಸಲಿದೆ. ಅದೇ ಸಮಯದಲ್ಲಿ, ನಾವು ಪರಿಸರ ವಿಜ್ಞಾನಕ್ಕೆೆ ಹೆಚ್ಚಿಿನ ಒತ್ತು ನೀಡುತ್ತಿಿದ್ದೇವೆ. ಇದು ದೇಶದಲ್ಲೇ ಮೊದಲ ಬಾರಿಗೆ ಜಾರಿಯಾಗುತ್ತಿಿರುವ ವಿನೂತನ ಉಪಕ್ರಮವಾಗಿದ್ದು, ಇದರಲ್ಲಿ ಮಕ್ಕಳು ತರಗತಿ ಕೊಠಡಿಯಿಂದ ಹೊರಬಂದು, ತಮ್ಮ ಸುತ್ತಮುತ್ತಲಿನ ಸ್ಥಳೀಯ ಸಸ್ಯ ಮತ್ತು ಪ್ರಾಾಣಿ ಸಂಕುಲದ ಬಗ್ಗೆೆ ಪ್ರಾಾಯೋಗಿಕ ಜ್ಞಾನ ಪಡೆಯಲಿದ್ದಾರೆ. ಎಳೆಯ ವಯಸ್ಸಿಿನಲ್ಲೇ ಮಕ್ಕಳ ಮನಸ್ಸಿಿನಲ್ಲಿ ಸುಸ್ಥಿಿರತೆ ಮತ್ತು ಪರಿಸರ ಕಾಳಜಿ ಬಿತ್ತುವುದು ನಮ್ಮ ಗುರಿಯಾಗಿದೆ, ಎಂದು ಹೇಳಿದರು.
ಕೆಕೆಆರ್ಡಿಬಿ ಅಧ್ಯಕ್ಷ ಡಾ. ಅಜಯ್ ಧರ್ಮಸಿಂಗ್ ಮಾತನಾಡಿ, ನಾವು ಮಕ್ಕಳನ್ನು ಎಳೆಯ ವಯಸ್ಸಿಿನಲ್ಲೇ ಭವಿಷ್ಯಕ್ಕೆೆ ಸಿದ್ಧಗೊಳಿಸಬೇಕು. ಮೊದಲ ಹಂತದಲ್ಲಿ, ಈ ಭಾಗದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆೆ ಒಂದರಂತೆ ಒಟ್ಟು 41 ಶಾಲೆಗಳಲ್ಲಿ ಈ ಲ್ಯಾಾಬ್ಗಳನ್ನು ಪ್ರಾಾರಂಭಿಸುತ್ತಿಿದ್ದೇವೆ. ಗ್ರಾಾಮೀಣ ಭಾಗದ ವಿದ್ಯಾಾರ್ಥಿಗಳಲ್ಲೂ ನಗರದ ವಿದ್ಯಾಾರ್ಥಿಗಳಿಗೆ ಸಮಾನವಾದ ವೈಜ್ಞಾನಿಕ ಮನೋಭಾವ ಮತ್ತು ಅವಕಾಶಗಳು ದೊರೆಯಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದ್ದಾರೆ.
ಈಗಾಗಲೇ ಕೆಕೆಆರ್ಡಿಬಿ ಕಾರ್ಯದರ್ಶಿಗಳು ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಪತ್ರ ಬರೆದು 41 ಕರ್ನಾಟಕ ಪಬ್ಲಿಿಕ್ ಶಾಲೆಗಳ ಪಟ್ಟಿಿ ಅಂತಿಮಗೊಳಿಸುವಂತೆ ಸೂಚಿಸಿದ್ದಾರೆ ಎಂದರು.
ಯೋಜನೆಯ ಮುಖ್ಯಾಾಂಶಗಳು : ಒಟ್ಟು 3 ಕೋಟಿ ರೂ. ವೆಚ್ಚದ ಈ ಯೋಜನೆಯು ಸಮಗ್ರ ಪಠ್ಯಕ್ರಮ ಒಳಗೊಂಡಿದೆ. ರೊಬೊಟಿಕ್ಸ್: ಆಟೊಮೇಷನ್ ಮತ್ತು ಕೋಡಿಂಗ್ ಕೌಶಲ್ಯಗಳು. ಪರಿಸರ ವಿಜ್ಞಾನ (ಪ್ರಮುಖ ಆದ್ಯತೆ) ಸ್ಥಳೀಯ ಜೀವವೈವಿಧ್ಯ (ಸಸ್ಯ,ಪ್ರಾಾಣಿ) ಮತ್ತು ಸುಸ್ಥಿಿರತೆಯ ಬಗ್ಗೆೆ ಪ್ರಾಾಯೋಗಿಕ ಕ್ಷೇತ್ರ ಅಧ್ಯಯನ.
ಖಗೋಳಶಾಸ: ಬಾಹ್ಯಾಾಕಾಶ ಮತ್ತು ವಿಶ್ವದ ಅರಿವು. ಗಣಿತ: ಸುಧಾರಿತ ಗಣಿತದ ಸಮಸ್ಯೆೆಗಳ ಪರಿಹಾರ. ಕ್ವಾಾಂಟಮ್ ಫಿಸಿಕ್ಸ್: ಮೂಲಭೂತ ಪರಿಕಲ್ಪನೆಗಳ ಪರಿಚಯ ಹೊಂದಿದೆ.
ಕಲ್ಯಾಣ ಕರ್ನಾಟಕದ ಶಾಲೆಗಳಲ್ಲಿ ನೆಹರು ಸ್ಟ್ರೀಮ್ ಪ್ರಯೋಗಾಲಯ : ಎನ್.ಎಸ್.ಬೋಸರಾಜ್

